Advertisement

ಜನಪದ ಹಾಡು ಅನುಭವಿಸಿ ಕೇಳಿ: ಗುರುರಾಜ ಹೊಸಕೋಟ

02:03 PM Jan 09, 2021 | Team Udayavani |

ಕಲಬುರಗಿ: ಜನಪದ ಹಾಡುಗಳನ್ನು ಯುವಜನರು ಅನುಭವಿಸಿ ಕೇಳಬೇಕು ಎಂದು ರಂಗಭೂಮಿ ಕಲಾವಿದ ಹಾಗೂ ಚಿತ್ರನಟ, ಹಿನ್ನೆಲೆ ಗಾಯಕ ಗುರುರಾಜ ಹೊಸಕೋಟೆ ಹೇಳಿದರು.

Advertisement

ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮಾಗಾಂಧಿ ಸಭಾಂಗಣದಲ್ಲಿ ಶುಕ್ರವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಎನ್‌ಎಸ್‌ಎಸ್‌ ಕೋಶ, ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಸೇವಾ ಯೋಜನೆ ರಾಜ್ಯ ಮಟ್ಟದ ಪ್ರಥಮ ಯುವಜನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜನಪದ ದಿನನಿತ್ಯ ಮಾತನಾಡುವ, ವ್ಯವಹರಿಸುವ ಭಾಷೆಯಾಗಿದ್ದರಿಂದ ಸುಲಭವಾಗಿ ಜನರಿಗೆ ತಲುಪುತ್ತದೆ. ಆದರೆ ಪಾಶ್ಚಾತ್ಯ ಸಂಗೀತದ ಅಬ್ಬರ, ಗೀಳಿನ ಮಧ್ಯೆ ಕಳೆದು ಹೋಗಿರುವ ಜನಪದ ಸಾಹಿತ್ಯ ಉಳಿಸಿ, ಬೆಳೆಸಿಕೊಂಡು ಹೋಗಬೇಕಾಗಿದೆ ಎಂದು ಹೇಳಿದರು.

ಇದನ್ನೂ ಓದಿ:ಡಿ ಕೆ ಶಿವಕುಮಾರ್ ಗೆ ಜನ ಬೆಂಬಲವಿಲ್ಲ,ಕಾರ್ಯಕರ್ತರ ಬೆಂಬಲವೂ ಇಲ್ಲ: ಶೋಭಾ ಕರಂದ್ಲಾಜೆ

ಈಗಿನ ಯುವಕರು ಯಾರ ಮಾತನ್ನೂ ಕೇಳುವುದಿಲ್ಲ. ಕೆಟ್ಟದ್ದು ಯಾವುದು, ಒಳ್ಳೆಯದು ಯಾವುದು ಎನ್ನುವ ಅರಿವು
ಅವರಿಗಿರುವುದಿಲ್ಲ. ನಾವು ಸ್ವಲ್ಪ ಗಮನ ಬೇರೆ ಕಡೆಗೆ ಹರಿಸಿದರೆ ಮಕ್ಕಳು ದಾರಿ ತಪ್ಪುವ ಸೂಕ್ಷ್ಮ ದಿನಗಳಿವು. ಮೊಬೈಲ್‌
ಯುವಕರನ್ನು ಹಾಳು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

Advertisement

ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಕುಲಪತಿ ಪ್ರೊ| ಚಂದ್ರಕಾಂತ ಎಂ.ಯಾತನೂರು ಮಾತನಾಡಿ, ನಮ್ಮ ನೆಲದ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವ ಕಾರ್ಯಕ್ರಮ ಇದಾಗಿದೆ.

ಜನಪದ ಹಾಡುಗಳು ದೈನಂದಿನ ಬದುಕಿನ ಪಾಠ ಕಲಿಸುತ್ತವೆ. ಅರ್ಥಗರ್ಭಿತ, ಮೌಲ್ಯಯುತ ಸಂದೇಶಗಳು ಯುವಕರಿಗೆ ನೀಡುತ್ತವೆ ಎಂದರು.

ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ರಾಷ್ಟ್ರೀಯ ಸೇವಾ ಯೋಜನೆ ಅನುಷ್ಠಾನಾಧಿಕಾರಿ ಡಾ| ಪೂರ್ಣಿಮಾ ಜೋಗಿ ಮಾತನಾಡಿ, ಯಾವ ದೇಶದಲ್ಲಿ ತ್ಯಾಗ ಬಲಿದಾನ ಇರುತ್ತದೆಯೋ ಆ ದೇಶದಲ್ಲಿ ತೊಂದರೆ ಇರುವುದಿಲ್ಲ. ತ್ಯಾಗಕ್ಕೆ ಪ್ರತೀಕವಾದ ಸೇನೆ ಮತ್ತು ಎನ್‌ಎಸ್‌ಎಸ್‌ ಇದಕ್ಕೆ ನಿದರ್ಶನ ಎಂದರು.

ಕಾರ್ಯಕ್ರಮದ ಉದ್ಘಾಟನೆಗೂ ಮೊದಲು ಜ್ಞಾನಗಂಗಾ ಆವರಣದ ಒಳಾಂಗಣ ಕ್ರೀಡಾಂಗಣದಿಂದ ಕಾರ್ಯಸೌಧದ ಮಹಾತ್ಮ ಗಾಂಧಿ  ಸಭಾಂಗಣದವರೆಗೆ ಡೊಳ್ಳು ಕುಣಿತ, ಹಲಿಗೆ ವಾದನ ಹಾಗೂ ವೇಷಭೂಷಣಗಳೊಂದಿಗೆ ಮೆರವಣಿಗೆ ನಡೆಯಿತು.

ಕಾರ್ಯಕ್ರಮ ಉದ್ಘಾಟನೆ ನಂತರ ಗುರುರಾಜ ಹೊಸಕೋಟೆ ಅವರು, “ದುಡ್ಡು ಕೊಟ್ಟರೆ ಬೇಕಾದ್ದು ಸಿಗುತೈತಿ’, ಶ್ರೀಕ್ಷೇತ್ರ ಮಾಡಕ್‌ ಹೊಂಟಾರರೀ ಹಾಗೂ ಮಗಾ ಹುಟ್ಯಾನ್ಯವ್ವ’ ಎನ್ನುವ ಜನಪದ ಗೀತೆಗಳನ್ನು ಹಾಡಿ ನೆರೆದವರನ್ನು ಮನರಂಜಿಸಿದರು.

ಪ್ರಭಾರ ಕುಲಸಚಿವ ಪ್ರೊ| ಕೆ.ಎಂ. ಸಂಜೀವಕುಮಾರ, ಸಿಂಡಿಕೇಟ್‌ ಸದಸ್ಯೆ ಪಲ್ಲವಿ ಪಾಟೀಲ, ವಿವಿಧ ವಿಭಾಗದ ಡೀನ್‌ಗಳು, ಉಪನ್ಯಾಸಕರು, ರಾಜ್ಯದ ಸುಮಾರು 20ಕ್ಕಿಂತ ಹೆಚ್ಚಿನ ವಿಶ್ವವಿದ್ಯಾಲಯಗಳ ಎನ್‌ಎಸ್‌ಎಸ್‌ ಅಧಿಕಾರಿಗಳು ಹಾಗೂ
ವಿದ್ಯಾರ್ಥಿಗಳು ಹಾಜರಿದ್ದರು.

ಗುವಿವಿ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜಕ ಪ್ರೊ| ರಮೇಶ ಲಂಡನಕರ್‌ ಸ್ವಾಗತಿಸಿದರು, ರಾಷ್ಟ್ರೀಯ ಸೇವಾ
ಯೋಜನೆ ಸ್ವಯಂ ಸೇವಕ ವಿದ್ಯಾರ್ಥಿಗಳು ಎನ್‌ಎಸ್‌ಎಸ್‌ ಗೀತೆ ಹಾಡಿದರು. ಕನ್ನಡ ವಿಭಾಗದ ಉಪನ್ಯಾಸಕ ಡಾ| ಎಂ.ಬಿ.
ಕಟ್ಟಿ ನಿರೂಪಿಸಿದರು, ಬಿ.ಬಿ. ಸರಡಗಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next