Advertisement
ನಳಿನ್ ಕುಮಾರ್ ಮಾತನಾಡಿ, ಫಲ್ಗುಣಿ ನದಿಗೆ 96 ವರ್ಷಗಳ ಹಿಂದೆೆ ಬ್ರಿಟಿಷರು ಸೇತುವೆ ನಿರ್ಮಿಸಿದ್ದು, ಬಾಳಿಕೆ ಅವ ಧಿ ತೀರಿದ್ದರಿಂದ ಕೇಂದ್ರ ಸರಕಾರ ಹೊಸ ಸೇತುವೆಗೆ ಅನುದಾನ ಒದಗಿಸಿದೆ. ಹಳೆಯ ಸೇತುವೆಯನ್ನು ಉಳಿಸಿ ಪಕ್ಕದಲ್ಲೇ ನೂತನ ಸೇತುವೆಯ ನಿರ್ಮಿಸಲಾಗುತ್ತಿದ್ದು, ಕಾಮಗಾರಿ ಆರಂಭಗೊಂಡಿದೆ ಎಂದರು.
ಕುಲಶೇಖರ-ಕಾರ್ಕಳ ಹೆದ್ದಾರಿಯ ಪ್ರಮುಖ ಸೇತುವೆ ಇದಾಗಿದ್ದು, ಹೆದ್ದಾರಿ ಚತುಷ್ಪಥಕ್ಕೆ ಭೂಸ್ವಾಧೀನ ಪ್ರಕ್ರಿಯೆ ಆರಂಭಗೊಂಡಿದೆ. ನೂತನ ಹೆದ್ದಾರಿ ಗುರುಪುರದಿಂದ ನೂಯಿ ಅಡೂxರು ಮುಖಾಂತರ ಕೈಕಂಬ ಹಾದು ಹೋಗಿ ಕಾರ್ಕಳ-ಸೋಲಾಪುರ ತಲುಪಲಿದೆ. ಇದಕ್ಕಾಗಿ ಅಡೂxರು ಬಳಿ ಮತ್ತೂಂದು ಸೇತುವೆ ನಿರ್ಮಾಣಗೊಳ್ಳಲಿದೆ. ಸದ್ಯದ ಸೇತುವೆ ಗುರುಪುರಕ್ಕೆ ಸಂಪರ್ಕ ಕಲ್ಪಿಸಲಿದ್ದು ಬೈಪಾಸ್ ರಸ್ತೆಯಾಗಿ ನಿರ್ಮಾಣವಾಗಲಿದೆ ಎಂದರು.
Related Articles
Advertisement
ವಿವಿಧ ರಸ್ತೆಗಳು ಮೇಲ್ದರ್ಜೆಗೆ ಭಾರತ್ ಮಾಲಾ ಯೋಜನೆಯಡಿ ಶಾಸಕರಾದ ಭರತ್ ಶೆಟ್ಟಿ, ರಾಜೇಶ್ ನಾಯ್ಕ, ಹಾಗೂ ಉಮನಾಥ ಕೋಟ್ಯಾನ್ ಅವರ ಕ್ಷೇತ್ರಗಳಲ್ಲಿ ಮೂಲ್ಕಿ – ಕಟೀಲು- ಕೈಕಂಬ- ಬಿ.ಸಿ.ರೋಡ್ ರಸ್ತೆ ಚತುಷ್ಪಥಗೊಳ್ಳಲಿದೆ. ಮೆಲ್ಕಾರ್- ಕೊಣಾಜೆ- ತೊಕ್ಕೊಟ್ಟು ರಸ್ತೆಯೂ ಮೇಲ್ದರ್ಜೆಗೇರುತ್ತಿದೆ. ಬಿ.ಸಿ. ರೋಡ್- ಅಡ್ಡಹೊಳೆ ರಸ್ತೆ ಕಾನೂನು ಪ್ರಕ್ರಿಯೆ ಸರಿಯಾಗಿದ್ದು ಕಾಮಗಾರಿ ಮತ್ತೆ ಆರಂಭಗೊಂಡಿದೆ. ಕೂಳೂರು ಸೇತುವೆ ಟೆಂಡರ್ ಪೂರ್ಣಗೊಂಡಿದೆ. ಎನ್‌ಡಿಎ ಸರಕಾರ ಮಂಗಳೂರು ಬೈಪಾಸ್ ರಸ್ತೆಗೆ 1,700 ಕೋ.ರೂ. ಅನುದಾನ ಒದಗಿಸಿದೆ ಎಂದು ಸಂಸದ ನಳಿನ್ ವಿವರಿಸಿದರು. ಹೊಸ ಸೇತುವೆ ಹೀಗಿರುತ್ತದೆ
ಸೇತುವೆಯ ಉದ್ದ 175 ಮೀಟರ್, ಅಗಲ 16 ಮೀಟರ್. 25 ಮೀಟರಿನ ಏಳು ಅಂಕಣಗಳು ಇರುತ್ತವೆ. 10 ಮೀಟರ್ ರಸ್ತೆಯ (ಕ್ಯಾರೇಜ್) ಅಗಲ, ಕಾಲುದಾರಿ 3 ಮೀಟರ್ ಅಗಲ ಇರುತ್ತದೆ. ಪೈಲ್ ಅಡಿಪಾಯದ ಸೇತುವೆಯ ಮೇಲ್ಕಟ್ಟಡ ಗರ್ಡರ್ ಬೀಮ್ ಮತ್ತು ಸ್ಲಾéಬ್ ಹೊಂದಿರುತ್ತದೆ. ಜತೆಗೆ 500 ಮೀಟರ್ ಉದ್ದದ ಕೂಡುರಸ್ತೆ ನಿರ್ಮಾಣಗೊಳ್ಳಲಿದೆ.