Advertisement
ಪಟಾಕಿಗಳ ಬೆಳಕಿನ ಚಿತ್ತಾರ ನೋಡುಗರ ಗಮನ ಸೆಳೆಯಿತು. ನೀಲಿ ಮತ್ತು ಹಳದಿ ಧ್ವಜಗಳನ್ನು ಹಿಡಿದುಕೊಂಡು ಪ್ರದರ್ಶಿಸಿದ ಪಾರಂಪರಿಕ ಕಲಾ ಪ್ರದರ್ಶನಗಳು ನೋಡುಗರ ಗಮನ ಸೆಳೆದವು. “ಬೋಲೆ ಸೋನಿಹಾಲ್, ಸಶ್ರೀ ಅಕಾಲ್’ ಎನ್ನುವ ಜಯಘೋಷಗಳು ಮೆರವಣಿಗೆಯಲ್ಲಿ ಕೇಳಿಬಂದವು. ಜಯಂತಿ ನಿಮಿತ್ತ ನಡೆದ ಮೆರವಣಿಗೆಯ ಅಭೂತಪೂರ್ವ ಕ್ಷಣಕ್ಕೆ ದೇಶ-ವಿದೇಶದಿಂದ ಆಗಮಿಸಿದ ಸಾವಿರಾರು ಸಿಖ್ ಧರ್ಮೀಯರು ಸಾಕ್ಷಿಯಾದರು.
Related Articles
Advertisement
ಜಯಂತಿ ನಿಮಿತ್ತ ಗುರುದ್ವಾರದಲ್ಲಿ ರಾತ್ರಿಯಿಡಿ ಗುರುನಾನಕ ದೇವ ಪ್ರಬಂಧಕ ಕಮಿಟಿ ವತಿಯಿಂದ ವಿವಿಧ ಧಾರ್ಮಿಕ ಚಟುವಟಿಕೆಗಳು ನಡೆದವು. ವಿಶೇಷ ಗ್ರಂಥ ಪಠಣ, ಭಜನೆ ಮತ್ತು ಕೀರ್ತನೆಗಳು ಜರುಗಿದವು. ಧಾರ್ಮಿಕ ಮುಖಂಡರು ವಿಧ್ಯುಕ್ತ ಚಾಲನೆ ನೀಡಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಬೆಂಗಳೂರು, ನಾಂದೇಡ್, ಉದಗೀರ, ಲಾತೂರ, ಪುಣೆ, ಹೈದ್ರಾಬಾದ ಸೇರಿದಂತೆ ವಿದೇಶದಿಂದಲೂ ಸಿಖ್‌ರು ಆಗಮಿಸಿದ್ದರು. ಜಯಂತಿ ನಿಮಿತ್ತ ಗುರುದ್ವಾರದಲ್ಲಿ ಸಾವಿರಾರು ಸಂಖ್ಯೆಯ ಭಕ್ತರು ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ಗುರುದ್ವಾರ ಪ್ರಬಂಧಕ ಕಮಿಟಿ ಅಧ್ಯಕ್ಷ ಬಲಬೀರಸಿಂಗ್, ಪ್ರಮುಖರಾದ ಮನಪ್ರಿತಸಿಂಗ್ ಬಂಟಿ, ದರ್ಬಾಸಿಂಗ್, ಪ್ರದೀಪಸಿಂಗ್, ತೇಜಪಾಲಸಿಂಗ್, ದರ್ಶನಸಿಂಗ್, ಗುರುಪ್ರಿತಸಿಂಗ್ ಮತ್ತಿತರ ಮುಖಂಡರು ಪಾಲ್ಗೊಂಡಿದ್ದರು.