Advertisement

ವರ್ಷ ಕಳೆದರೂ ಸಿಗದ ಪುರಸಭೆ ಅಧಿಕಾರ

07:28 PM Nov 20, 2019 | Naveen |

„ಚೆನ್ನಕೇಶವುಲು ಗೌಡ
ಗುರುಮಠಕಲ್‌:
ಇಲ್ಲಿಯ ಪುರಸಭೆ ಸದಸ್ಯರಿಗೆ ವರ್ಷ ಕಳೆದರೂ ಇನ್ನೂ ಅಧಿಕಾರ ಸಿಕ್ಕಿಲ್ಲ. 2018ರ ಆ. 31ರಂದು ಪಟ್ಟಣದ 23 ವಾರ್ಡ್ಗಳಿಗೆ ಚುನಾವಣೆ ನಡೆದಿದ್ದು, ಅಂದು ಸದಸ್ಯರಾಗಿ ಆಯ್ಕೆಯಾದರೂ ಇಂದಿಗೂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿಲ್ಲ. ಹೀಗಾಗಿ ಸದಸ್ಯರು ಅಧಿಕಾರ ಇಲ್ಲದೇ ಕಾಲ ಕಳೆಯುವಂತಾಗಿದೆ.

Advertisement

ಜೆಡಿಎಸ್‌ 8, ಬಿಜೆಪಿ 2, ಕಾಂಗ್ರೆಸ್‌ 12 ಹಾಗೂ ಒಬ್ಬರು ಪಕ್ಷೇತರ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಪುರಸಭೆ ಸಭೆಯಲ್ಲಿ ಭಾಗವಹಿಸುವ ಮೂಲಕ ಅನುಭವ
ಪಡೆಯುವ, ಅಭಿವೃದ್ಧಿಗೆ ಶ್ರಮಿಸೋಣ ಎಂಬ ಕನಸು ಕಂಡಿದ್ದ ಸದಸ್ಯರ ಪಾಲಿಗೆ ವರ್ಷ ಕಳೆದರೂ ಕನಸು ನನಸಾಗುವ ಯಾವ ಲಕ್ಷಣಗಳು ಕಂಡು ಬರುತ್ತಿಲ್ಲ.

ಚುನಾಯಿತ ಜನಪ್ರತಿನಿಧಿಗಳು ಇದ್ದರೂ ಅಧಿಕಾರಯುತವಾಗಿ ತಮ್ಮ ಹಕ್ಕು ಚಲಾಯಿಸಲು, ಅಧಿಕಾರಿಗಳಿಂದ ಅಭಿವೃದ್ಧಿ ಕೆಲಸ ಮಾಡಿಸಲು ಸಾಧ್ಯವಾಗುತ್ತಿಲ್ಲ ಎಂಬ ಕೊರಗು ಕೇಳಿಬರುತ್ತಿದೆ. ಪುರಸಭೆ ಹಿರಿಯ ಸದಸ್ಯರಿಗಷ್ಟೇ ಬೆಲೆ. ಹೊಸದಾಗಿ ಚುನಾಯಿತರಾದ ಹಾಗೂ ರಾಜಕೀಯವಾಗಿ ಗುರುತಿಸಿಕೊಂಡಿರುವ ಸದಸ್ಯರಿಗೆ ಒಂದಿಷ್ಟು ಮನ್ನಣೆ ಬಿಟ್ಟರೆ ಉಳಿದ ಸದಸ್ಯರಿಗೆ ಅಧಿಕಾರಿಗಳು, ಸಿಬ್ಬಂದಿ ತಾವು ಹೇಳಿದ ಕೆಲಸಕ್ಕೆ ಸ್ಪಂದಿಸುತ್ತಿಲ್ಲ. ನಿರ್ಲಕ್ಷ್ಯ ಮನೋಭಾವ ಹೆಚ್ಚಿದೆ ಎಂಬ ಅಸಮಾಧಾನ ಕಾಡುತ್ತಿದೆ.

ಚುನಾವಣೆಯಲ್ಲಿ ಗೆದ್ದು ಬಂದ ಸದಸ್ಯರು ಇಂದೋ ನಾಳೆಯೋ ಅಧಿಕಾರ ಸಿಗಬಹುದು ಎಂದು ವರ್ಷದಿಂದ ಕಾಯುತ್ತಲೇ ಇದ್ದಾರೆ. ಇದರಿಂದ ಆಯಾ ಸ್ಥಳೀಯ ಜನರ ಆಕ್ರೋಶಗಳು ಈಡೇರುತ್ತಿಲ್ಲ. ಮಳೆಯಿಂದ ಪಟ್ಟಣದಲ್ಲಿ ಬಹುತೇಕ ಪ್ರಮುಖ ರಸ್ತೆಗಳು ಗುಂಡಿ ಬಿದ್ದಿವೆ. ರಸ್ತೆಗಳಿಗೆ ಹೊಸದಾಗಿ ಡಾಂಬರೀಕರಣ ಮಾಡುವುದರಲಿ ಗುಂಡಿಗಳನ್ನು ಸಹ ಮುಚ್ಚಲು ಆಗುತ್ತಿಲ್ಲ. ಪೈಪ್‌ಗ್ಳು ಆಗಾಗ ಒಡೆದು ಹೋದಾಗ ಕುಡಿಯುವ ನೀರು ವ್ಯರ್ಥ ಪೋಲಾಗುತ್ತಿದ್ದರೂ ಕೇಳ್ಳೋರು ಯಾರು ಇಲ್ಲದಂತಾಗಿದೆ.

ಸ್ವಚ್ಛ ಭಾರತ್‌ ಅಭಿಯಾನದ ಜತೆಗೆ ಕಸ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ. ಬೀದಿ ದೀಪಗಳ ಸೌಲಭ್ಯ ಸೇರಿದಂತೆ ಅನೇಕ ಸವಲತ್ತುಗಳು ಸರಿಯಾಗಿ, ಸಕಾಲದಲ್ಲಿ ಜನರಿಗೆ ಲಭ್ಯವಾಗುತ್ತಿಲ್ಲ. ಅಲ್ಲದೇ, ಮನೆ ನಿರ್ಮಿಸಲು ಬೇಕಾದ ನಕ್ಷೆ ನಿರಾಪೇಕ್ಷಣಾ ಪತ್ರ ಮತ್ತಿತರ ಕೆಲಸಗಳು ಆಗುತ್ತಿಲ್ಲ. ಜನಪ್ರತಿನಿಧಿಗಳಿಗೆ ಅಧಿಕಾರ ಇದ್ದಿದ್ದರೆ ಅವರ ಮೂಲಕವಾದರೂ ಪುರಸಭೆಗಳಲ್ಲಿ ಕೆಲಸ ಮಾಡಿಸಿಕೊಳ್ಳುವುದು ಜನರಿಗೆ ಸುಲಭ. ಆದರೆ, ಈಗ ಪುರಸಭೆಗಳಲ್ಲಿ ಜನಪ್ರತಿನಿಧಿಗಳ ಅಧಿಕಾರ ಇಲ್ಲದೇ ಕಾರಣ ಎಲ್ಲದಕ್ಕೂ ಅಧಿಕಾರಿ ಮತ್ತು ಸಿಬ್ಬಂದಿಯನ್ನೇ ಜನರು ಅವಲಂಬಿಸಬೇಕಾಗಿ ಬಂದಿದೆ. ಆದರೆ, ಅಧಿಕಾರಿಗಳು ಸರಿಯಾದ ಕಾಲಕ್ಕೆ ಕೆಲಸ ಮಾಡಿಕೊಡುವುದಿಲ್ಲ ಎಂದು ನಾಗರಿಕರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next