ಗುರುಮಠಕಲ್: ಪಟ್ಟಣದಲ್ಲಿ ಹೆಚ್ಚುತ್ತಿರುವ ಸೊಳ್ಳೆಗಳು. ನಿಯಂತ್ರಣಕ್ಕೆ ಮುಂದಾಗದ ಪುರಸಭೆ ಅಧಿಕಾರಿಗಳು.
Advertisement
ಪಟ್ಟಣದಲ್ಲಿ ಪ್ರತಿ ದಿನ ಸೊಳ್ಳೆಗಳ ಕಾಟ ಹೆಚ್ಚಾಗುತ್ತಿವೆ. ಸೊಳ್ಳೆಗಳನ್ನು ನಿಯಂತ್ರಿಸಲು ಪುರಸಭೆ ಅಧಿಕಾರಿಗಳು ಫಾಗಿಂಗ್ ಬಳಸುತ್ತಿಲ್ಲ. ಕೆಲ ವರ್ಷಗಳ ಹಿಂದೆ ಪ್ರತಿ ಮನೆಗೂ ಬಂದು ಔಷಧಿ ಸಿಂಪಡಿಸುತ್ತಿದ್ದರು. ಈಗ ಪುರಸಭೆ ಯಾವುದೇ ಔಷಧಿ ಸಿಂಪಡಿಸುತ್ತಿಲ್ಲ. ಇದರಿಂದ ವಾರ್ಡ್‌ಗಳಲ್ಲಿನ ಜನರಿಗೆ ಡೆಂಘೀ ಜ್ವರದ ಭೀತಿ ಎದುರಾಗಿದೆ. ಜನರು ಭಯಭೀತರಾಗಿದ್ದಾರೆ. ಸಂಜೆಯಾಗುತ್ತಿದ್ದಂತೆ ಸೊಳ್ಳೆಗಳು ಹಿಂಡು ಹಿಂಡಾಗಿ ಮನೆಗಳಿಗೆ ದಾಳಿ ಇಡುತ್ತಿವೆ. ಪುರಸಭೆ ವತಿಯಿಂದ ಪ್ರತಿ ವಾರ್ಡ್ಗಳಲ್ಲಿ ದಿನನಿತ್ಯ ಎರಡು ಸಮಯದಲ್ಲಿ ಫಾಗಿಂಗ್ ಮತ್ತು ಇತರ ಸೊಳ್ಳೆ ನಿಯಂತ್ರಣಕ್ಕೆ ಔಷಧಿ ಸಿಂಪಡಿಸುವಂತೆ ಸಾರ್ವಜನಿಕರು ಮನವಿಮಾಡಿದ್ದಾರೆ.
ಕಾಣಿಸುತ್ತಿದ್ದ ಸೊಳ್ಳೆ ಹಾವಳಿ ಈಗ ಬೆಳಗಿನಿಂದಲೇ ಕಾಟ ಜೋರಾಗಿದೆ. ಇದರಿಂದಾಗಿ ಕೆಲಸ ಮಾಡಲು ತೊಂದರೆಯಾಗುತ್ತಿದೆ. ಇದರ ನಿಯಂತ್ರಣ ಕಷ್ಟ ಸಾಧ್ಯವಾಗಿದ್ದು, ದಿನನಿತ್ಯ ಕಚೇರಿಯಲ್ಲಿ ಫ್ಯಾನ್ ತಿರುಗುತ್ತಲೇ ಇರಬೇಕಿದೆ. ವಿದ್ಯುತ್
ವ್ಯತ್ಯಯವಾದರಂತೂ ದೇವರೇ ಗತಿ. ಸೊಳ್ಳೆಗಳು ಕಚೇರಿ ಉದ್ಯೋಗಿಗಳ ರಕ್ತ ಹೀರುವುದರ ಜತೆಗೆ ಹಲವು ಕಾಯಿಲೆಗೆ ಕಾರಣವಾಗಿವೆ. ಈಗಾಗಲೇ ಹಲವು ಮಂದಿ ವಿವಿಧ ರೀತಿಯ ಕಾಯಿಲೆಗೆ ತುತ್ತಾಗುತ್ತಿದ್ದು, ಜ್ವರ ತಲೆನೋವು ಸಾಮಾನ್ಯವಾಗಿದೆ. ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ ಸೊಳ್ಳೆ ನಿಯಂತ್ರಣಕ್ಕೆ ಆದಷ್ಟು ಶೀಘ್ರವಾಗಿ ಪರಿಹಾರ ಹಾಗೂ ನಿಯಂತ್ರಣ ಕ್ರಮಕ್ಕೆ ಮುಂದಾಗಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.