Advertisement

ಸಮರ್ಪಕ ಬಿತ್ತನೆ ಬೀಜ ಒದಗಿಸಿ

12:46 PM May 28, 2020 | Naveen |

ಗುರುಮಠಕಲ್‌: ರೈತ ಸಂಪರ್ಕ ಕೇಂದ್ರಗಳಲ್ಲಿ ಎಲ್ಲ ರೈತರಿಗೆ ಸಮರ್ಪಕವಾಗಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಸಿಗುವಂತೆ ವ್ಯವಸ್ಥೆ ಮಾಡಬೇಕು ಎಂದು ಜಿಪಂ ಉಪ ಕಾರ್ಯದರ್ಶಿ ಮುಕ್ಕಣ ಕರಿಗಾರ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಪಟ್ಟಣದ ಪುರಸಭೆ ಕಚೇರಿಯಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ತಾಲೂಕಿನ ಯಾವುದೇ ಭಾಗದಲ್ಲಿ ನೀರಿನ ಸಮಸ್ಯೆ ಎದುರಾಗುವಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಸೂಚಿಸಿದರು. ಚಿಂತಕುಂಟ ತಾಂಡಾದಲ್ಲಿ ಶಾಲೆ ಮೇಲಿರುವ ವಿದ್ಯುತ್‌ ವೈರ್‌ ಗಳು ಜೋತು ಬಿದ್ದಿವೆ. ವಿದ್ಯುತ್‌ ಸ್ಪರ್ಶದಿಂದ ಅಪಾಯ ಸಂಭವ ಜಾಸ್ತಿ ಇದೆ. ಆದರೆ ಜೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಅವರ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ. ಏಕೆಂದರೆ ಪ್ರತಿ 6 ತಿಂಗಳಿಗೊಮ್ಮೆ ವರ್ಗಾವಣೆಯಾಗುತ್ತಿದ್ದಾರೆ ಎಂದು ಸದಸ್ಯರು ದೂರಿದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಶರಭಯ್ಯ, ಎಡಿ ಚಂದ್ರಶೇಖರ ಹಾಗೂ ಶರಣಪ್ಪ ಮೈಲಾರಿ, ತಾಪಂ ಸದಸ್ಯರಾದ ರಾಮಲಿಂಗಮ್ಮ, ಈಶ್ವರ ನಾಯಕ, ಮಲ್ಲಿಕಾರ್ಜುನ ಅರುಣಿ, ನಾಗೇಶ ಚಂಡರಿಕಿ, ಪಾರ್ವತಮ್ಮ, ಚಂದು, ಭಗವಂತರೆಡ್ಡಿ, ಸರೋಜಮ್ಮ, ಕಿಷ್ಠಯ್ಯ, ಲಕ್ಷ್ಮೀ ರಾಘವೇಂದ್ರ, ಭಾಸ್ಕರರೆಡ್ಡಿ, ತಿಪ್ಪಣ್ಣ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next