Advertisement
ಪಟ್ಟಣದ ಅಂಕಮ್ಮ ದೇವಸ್ಥಾನದಲ್ಲಿ ಆಯೋಜಿಸಿದ್ದ ರಾಜ ರಾಜೇಶ್ವರ ಸಹಸ್ತ್ರಾರ್ಜುನ ಮಹಾರಾಜರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಸಮಾಜದ ಮಕ್ಕಳಲ್ಲಿ ಓದುವ ಸಾಮರ್ಥ್ಯ ಸಾಕಷ್ಟಿದೆ. ಆದರೆ ಪಾಲಕರ ಪ್ರೋತ್ಸಾಹ ಅಗತ್ಯವಾಗಿದೆ ಎಂದರು.
Related Articles
Advertisement
ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮಾಜದ ಅಧ್ಯಕ್ಷ ರಾಮಕಿಶನರಾವ್ ಗೋಂಗಲೆ, ಡಾ| ನರಸಿಂಗರಾವ ವೈದ್ಯ, ಅಂಬರಾವ್ ಜಿತ್ರೆ, ತುಲಸಿರಾಮ ಗೊಂಗ್ಲೆ, ಅನೀಲ ಬಸೂದೆ, ಶಶಿಕಾಂತ ಮೋಹನ್, ನಾಗಪ್ಪ, ರವಿಕುಮಾರ ವೇದಿಕೆಯಲ್ಲಿದ್ದರು. ಹಣಮಂತರಾವ ಗೊಂಗ್ಲೆ ಕಾರ್ಯಕ್ರಮ ನಿರೂಪಿಸಿದರು. ಶಶಿಕಾಂತ ವಂದಿಸಿದರು.
ಇದಕ್ಕೂ ಮೊದಲು ಅಂಕಮ್ಮ ದೇವಸ್ಥಾನದಲ್ಲಿ ಮಹಾರಾಜ ಜಯಂತಿ ಹಿನ್ನೆಲೆ ಪೂಜಾ ಕಾರ್ಯಕ್ರಮ ನೆರವೇರಿತು. ಬಳಿಕ ಪಟ್ಟಣದ ಮುಖ್ಯ ಬೀದಿಗಳ ಮೂಲಕ ಭವ್ಯ ಮೆರವಣಿಗೆ ನಡೆಸಲಾಯಿತು.
ರಾಜಕುಮಾರ, ಶ್ರೀರಾಮ ಬಸೂದೆ, ರವಿಕುಮಾರ ಗೊಂಗಲೆ, ಮಾಣಿಕಪ್ರಭು ಚೌದ್ರಿ, ಯಶವಂತರಾವ ಚೌದ್ರಿ, ತುಕಾರಾಮ, ಮಹೇಶ, ಜಗದೀಶ, ಸುರೇಶ ಗೊಂಗಲೆ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಯುವಕರು, ಮುಖಂಡರು ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು .