Advertisement

ಗುರುದೇವ ವಿವಿಧೋದ್ದೇಶ ಸಹಕಾರ ಸಂಘ: 163 ಕೋ. ರೂ. ವ್ಯವಹಾರ

06:05 AM Aug 22, 2017 | |

ಬೆಳ್ತಂಗಡಿ: ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘವು 2016-17ನೇ ಸಾಲಿನಲ್ಲಿ ಒಟ್ಟು 28.88 ಕೋ.ರೂ. ದುಡಿಯುವ ಬಂಡವಾಳ, 10,000ಕ್ಕೂ ಮೇಲ್ಪಟ್ಟು ಸದಸ್ಯರನ್ನು ಹೊಂದಿದ್ದು, ಈ ಆರ್ಥಿಕ ವರ್ಷದಲ್ಲಿ ಸುಮಾರು 163 ಕೋ.ರೂ. ವ್ಯವಹಾರ ನಡೆಸಿದೆ. 30 ಲಕ್ಷ ರೂ. ಕಟ್ಟಡ ನಿಧಿಗೆ ಕಾದಿರಿಸಿ 40 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎನ್‌. ಪದ್ಮನಾಭ ಮಾಣಿಂಜ ಹೇಳಿದ್ದಾರೆ.

Advertisement

ರವಿವಾರ ಇಲ್ಲಿನ ಶ್ರೀ ಗುರುನಾರಾ ಯಣ ಸ್ವಾಮಿ ಸೇವಾ ಸಂಘದ ಸಭಾಂ ಗಣದಲ್ಲಿ ನಡೆದ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ 10ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ  ಅವರು ಮಾತನಾಡಿದರು.

ಶೇ. 12 ಡಿವಿಡೆಂಡ್‌ ಬೆಳ್ತಂಗಡಿ, ಶಿರ್ತಾಡಿ, ಕಲ್ಲಡ್ಕ, ಕಕ್ಕಿಂಜೆ, ಬೆಳುವಾಯಿ ನೆಲ್ಯಾಡಿ, ಮುಡಿಪಿ ನಲ್ಲಿ ಒಟ್ಟು 7 ಶಾಖೆಗಳಿದ್ದು ವರ್ಷ ದಿಂದ ವರ್ಷಕ್ಕೆ ಉತ್ತಮ ಪ್ರಗತಿ ಯನ್ನು ಕಾಣುತ್ತಿದೆ. ಸಂಘದ ಕೇಂದ್ರ ಕಚೇರಿಯನ್ನು ಸ್ವಂತ ಕಟ್ಟಡದಲ್ಲಿ ಪ್ರಾರಂಭಿಸಬೇಕೆನ್ನುವ ಕನಸು ಮುಂದಿನ 3-4 ವರ್ಷಗಳಲ್ಲಿ ಈಡೇರ ಲಿದೆ. ನಮ್ಮ ಸಂಘದಲ್ಲಿ 68.20 ಲಕ್ಷ ರೂ. ಪಾಲುಬಂಡವಾಳ, 26.23 ಕೋ.ರೂ. ಠೇವಣಿ, 22.87 ಕೋ.ರೂ. ಹೊರಬಾಕಿ ಸಾಲವಿದೆ. ಸದಸ್ಯರಿಗೆ ಶೇ. 12 ಡಿವಿಡೆಂಡ್‌ ನೀಡಲಾಗುವುದು ಎಂದು ಘೋಷಿಸಿದರು.

ಆಡಿಟ್‌ ವರ್ಗಿಕರಣದಲ್ಲಿ ಎ ತರಗತಿ ಕಾಯ್ದುಕೊಂಡಿದೆ. ಮುಂದಿನ ವರ್ಷ ದಶಮಾನೋತ್ಸವ ಸಂದರ್ಭ ಕೇಂದ್ರ ಕಚೇರಿಗೆ ಶಿಲಾನ್ಯಾಸ ಮಾಡಲಾಗು ವುದು. ಬ್ಯಾಂಕಿಂಗ್‌ ಚಟುವಟಿಕೆ ಗಳಲ್ಲದೇ ಸಾಮಾಜಿಕ ಚಟುವಟಿಕೆಗಳಿಗೆ ಒತ್ತನ್ನು ನೀಡುತ್ತಿದ್ದು ಎಂಜಿನಿಯರಿಂಗ್‌ ಕಲಿಯುತ್ತಿರುವ ವಿದ್ಯಾರ್ಥಿಯನ್ನು ದತ್ತು ತೆಗೆದುಕೊಂಡು ವ್ಯಾಸಂಗದ ಪೂರ್ತಿ ಖರ್ಚು ವೆಚ್ಚವನ್ನು ಭರಿಸಲಿ ದ್ದೇವೆ ಎಂದು ತಿಳಿಸಿದರು.

ಸಮ್ಮಾನ
ಸಣ್ಣ ಕೈಗಾರಿಕಾ ನಿಗಮದ ಅಧ್ಯಕ್ಷ ರಾಗಿ ಆಯ್ಕೆಯಾದ ಸಂಘದ ನಿರ್ದೇ ಶಕ, ಶಾಸಕ ಕೆ. ವಸಂತ ಬಂಗೇರ ಅವರನ್ನು ಸಮ್ಮಾನಿಸಲಾಯಿತು. ಎಸೆಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸದಸ್ಯರ 4 ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಕ್ರೀಡಾಸಾಧಕ ವಿದ್ಯಾರ್ಥಿಗೆ ಕ್ರೀಡಾ ಪುರಸ್ಕಾರನೀಡಿ ಸಮ್ಮಾನಿಸಲಾಯಿತು. ವಿದ್ಯಾರ್ಥಿ ವೇತನ ಮತ್ತು ಉತ್ತಮ ಶಾಖೆ, ಉತ್ತಮ ಸಂಘಟಕ ಹಾಗೂ ಅತೀ ಹೆಚ್ಚು ಪಿಗ್ಮಿ ಸಂಗ್ರಹ ಮಾಡಿದ ದೈನಿಕ ಠೇವಣಿ ದಾರರನ್ನು ಸಮ್ಮಾನಿಸಲಾಯಿತು.

Advertisement

ಉಪಾಧ್ಯಕ್ಷ  ದಾಮೋದರ ಸಾಲಿಯಾನ್‌, ಸ್ಥಾಪಕಾಧ್ಯಕ್ಷ ಕೆ.ಜಿ. ಬಂಗೇರ, ನಿರ್ದೇಶಕ ರಾದ ಭಗೀರಥ ಜಿ., ಸುಜಿತಾ ವಿ. ಬಂಗೇರ, ಕೆ.ಪಿ. ದಿವಾಕರ, ಜನಾದ‌ìನ ಪೂಜಾರಿ, ತನುಜಾ ಶೇಖರ್‌, ಜಗದೀಶ್ಚಂದ್ರ ಡಿ.ಕೆ., ಶೇಖರ ಬಂಗೇರ, ಧರ್ಣಪ್ಪ ಪೂಜಾರಿ, ಸತೀಶ್‌ಕಾಶಿಪಟ್ಣ, ಚಂದ್ರಶೇಖರ್‌, ಮಾಜಿ ನಿರ್ದೇಶಕರಾದ ಪಿ. ಧರಣೇಂದ್ರ ಕುಮಾರ್‌, ಸುಂದರ ಸಿ. ಪೂಜಾರಿ ಉಪಸ್ಥಿತರಿದ್ದರು.ಸಂಘದ ನಿರ್ದೇಶಕ ಭಗೀರಥ ಜಿ. ಸ್ವಾಗತಿಸಿ, ವಿಶೇಷಾಧಿಕಾರಿ ಎಂ. ಮೋನಪ್ಪ ಪೂಜಾರಿ ವರದಿ ವಾಚಿಸಿ, ಸ್ಮಿತೇಶ್‌ ಎಸ್‌. ಬಾರ್ಯ ನಿರೂಪಿಸಿದರು. ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಶ್ವತ್ಥ್ ಕುಮಾರ್‌ ವಂದಿಸಿದರು.
 

Advertisement

Udayavani is now on Telegram. Click here to join our channel and stay updated with the latest news.

Next