Advertisement

ಮಂತ್ರಾಲಯದ ಶ್ರೀ ರಾಯರ ಆರಾಧನೆ ಸಂಪನ್ನ

05:55 PM Aug 15, 2022 | Team Udayavani |

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವದ ಉತ್ತರಾರಾಧನೆ ನಿಮಿತ್ತ ರವಿವಾರ ಬೆಳಗ್ಗೆ ಶ್ರೀಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನದ ನಿರ್ಮಾಲ್ಯ ವಿಸರ್ಜನೆ, ಉತ್ಸವ ರಾಯರ ಪಾದಪೂಜೆ ಹಾಗೂ ಪಂಚಾಮೃತಾಭಿಷೇಕ ನಡೆಯಿತು.

Advertisement

ನಂತರ ಶ್ರೀಪಾದಂಗಳವರು ಶ್ರೀರಾಯರಿಗೆ ಹಸ್ತೋದಕ ಸಮರ್ಪಣೆ ಮಾಡಿದರು. ರಾಯರ ಮೂಲ ಬೃಂದಾವನಕ್ಕೆ ಪೀಠಾ ಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಎಲ್ಲ ಯತಿಗಳ ಬೃಂದಾವನಗಳಿಗೆ ಪೂಜೆ ಸಲ್ಲಿಸಿದರು. ಬಳಿಕ ಭಕ್ತರಿಗೆ ಗುಲಾಲು ಎರಚುವ ಮೂಲಕ ವಸಂತ್ಯುತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀಮಠದ ಪ್ರಾಧಿಕಾರದಲ್ಲಿ ಚಿನ್ನದ ಪಲ್ಲಕ್ಕಿ ಉತ್ಸವದಲ್ಲಿ ಶ್ರೀ ಪ್ರಹ್ಲಾದರಾಜ ಉತ್ಸವ ಮೂರ್ತಿ ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ಮಾಡಲಾಯಿತು.

ಬಳಿಕ ಮಹಾರಥೋತ್ಸಕ್ಕೆ ಶ್ರೀಗಳು ಚಾಲನೆ ನೀಡಿದರು. ನಂತರ ಶ್ರೀ ಸುಬುಧೇಂದ್ರ ತೀರ್ಥರು ಶ್ರೀ ಮೂಲ ರಘುಪತಿ ವೇದವ್ಯಾಸ ದೇವರ ಸಂಸ್ಥಾನ ಪೂಜೆ ನೆರವೇರಿಸಿದರು. ರಥೋತ್ಸವದಲ್ಲಿ ಈಚೆಗೆ ಅಗಲಿದ ನಟ ಪುನೀತ್‌ ರಾಜ್‌ ಕುಮಾರ್‌ ಅವರ ಫೋಟೋಗಳನ್ನು ಹಿಡಿದು ಕಲಾವಿದರು ನೃತ್ಯ ಮಾಡಿದರೆ, ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ನಿಮಿತ್ತ ಭಕ್ತರು ಅಲ್ಲಲ್ಲಿ ರಾಷ್ಟ್ರಧ್ವಜ ಹಿಡಿದಿದ್ದು ಕಂಡು ಬಂತು. ಅದರ ಜತೆಗೆ ಭಾಗವಾಧ್ವಜಗಳನ್ನು ಹಿಡಿದಿರುವುದು ಕಂಡು ಬಂತು.

ಸಾಲುಮರದ ತಿಮ್ಮಕ್ಕ ಭೇಟಿ
ಆರಾಧನೆ ಪ್ರಯುಕ್ತ ಹಸಿರುಮಾತೆ ಖ್ಯಾತಿಯ ಸಾಲುಮರದ ತಿಮ್ಮಕ್ಕ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿದ್ದರು. ಶ್ರೀ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಆಶೀರ್ವಾದ ಪಡೆದರು. ಅವರಿಂದ ಮಠದ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಶ್ರೀಮಠ ಹಮ್ಮಿಕೊಂಡಿತ್ತು

Advertisement

Udayavani is now on Telegram. Click here to join our channel and stay updated with the latest news.

Next