Advertisement

ನಾಸಾ ಟ್ವೀಟ್‌ನಲ್ಲಿ ಗುರುಪೂರ್ಣಿಮೆ

02:50 AM Jul 09, 2017 | Harsha Rao |

ಹೊಸದಿಲ್ಲಿ: ಪೂರ್ಣ ಚಂದ್ರನ ದರ್ಶನವಾಗುವ ಗುರು ಪೂರ್ಣಿಮೆಗೆ ಹಿಂದೂ ಪಂಚಾಂಗದಲ್ಲಿ ಮಹತ್ವದ ಸ್ಥಾನವಿದೆ. ಆಷಾಢ‌ ಮಾಸದಲ್ಲಿ ಬರುವ ಈ ಗುರು ಪೂರ್ಣಿಮೆಯನ್ನು ಹಿಂದೂಗಳು ಹಬ್ಬದಂತೆ ಆಚರಿಸುತ್ತಾರೆ. ವಿಶೇಷವೆಂದರೆ ನಮ್ಮ ಪ್ರಮುಖ ಆಚರಣೆಗಳಲ್ಲಿ ಒಂದಾಗಿರುವ ಗುರುಪೂರ್ಣಿಮೆ ಈಗ ಜಗತ್ಪÅಸಿದ್ಧವಾಗಿದೆ! ಇದಕ್ಕೆ ಕಾರಣ ನಾಸಾ ಎಂದರೆ ನೀವು ನಂಬಲೇಬೇಕು.

Advertisement

ಹೌದು. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ, ತನ್ನ “ನಾಸಾ ಮೂನ್‌’ ಎಂಬ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಪೂರ್ಣ ಚಂದ್ರ ದರ್ಶನ ಮತ್ತದರ ಆಚರಣೆಗಳ ಕುರಿತು ಕುರಿತು ಒಂದು ಟ್ವೀಟ್‌ ಮಾಡಿದ್ದು, ಅದರಲ್ಲಿ “ಗುರು ಪೂರ್ಣಿಮೆ’ಗೆ ಮೊದಲ ಸ್ಥಾನ ನೀಡಿದೆ ಎಂಬುದು ವಿಶೇಷ. ಈ ವಾರಾಂತ್ಯ ಪೂರ್ಣ ಚಂದ್ರ ಕಾಣಿಸಿಕೊಳ್ಳಲಿದ್ದು ಆ ದಿನವನ್ನು ಜಗತ್ತಿನಾದ್ಯಂತ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. “ಈ ವಾರಾಂತ್ಯ ಪೂರ್ಣ ಚಂದಿರ ಕಾಣುವ ದಿನವನ್ನು ಗುರು ಪೂರ್ಣಿಮೆ, ಹಾಯ್‌ ಮೂನ್‌, ಮೀಡ್‌ ಮೂನ್‌, ರೈಪ್‌ ಕಾರ್ನ್ ಮೂನ್‌, ಬಕ್‌ ಮೂನ್‌ ಮತ್ತು ಥಂಡರ್‌ ಮೂನ್‌ ಎಂದು ಕರೆಯಲಾಗುತ್ತದೆ,’ ಎಂದು ನಾಸಾ ಮೂನ್‌ ಟ್ವೀಟ್‌ ಮಾಡಿದೆ. ಈ ಟ್ವೀಟನ್ನು 2 ಸಾವಿರಕ್ಕೂ ಹೆಚ್ಚು ಮಂದಿ ರೀಟ್ವೀಟ್‌ ಮಾಡಿದ್ದು, ಹಲವು ಭಾರತೀಯರು ಟ್ವೀಟ್‌ಗೆ ಪ್ರತಿಕ್ರಿಯಿಸಿ, ಗುರು ಪೂರ್ಣಿಮೆ ಹೆಸರು ನಮೂದಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾಸಾಗೆ ಅಭಿನಂದನೆಯನ್ನೂ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next