Advertisement

ಗುರುಗಳಿಂದ ಸಮಾಜ ಸುಧಾರಣೆಗೆ ಕಾಯಕಲ್ಪ: ಜಿ. ಕೆ. ಕೆಂಚನಕೆರೆ 

12:00 PM Sep 18, 2022 | Team Udayavani |

ಮುಂಬಯಿ: ಬ್ರಿಟಿಷ್‌ ಅರಸೊತ್ತಿಗೆಯ ಆಡಂಬರದ ಕಾಲದಲ್ಲಿ ಅನಿಷ್ಟ ಪದ್ಧತಿ, ಅಮಾನುಷ ಪರಿಸ್ಥಿತಿ, ಚತುರ್ವರ್ಣ ವಿರುದ್ಧ ಧ್ವನಿ ಎತ್ತಿದನಾರಾಯಣಗುರುಗಳು ಸಮಾಜ ಸುಧಾರಣೆಗೆ ಹೊಸ ಕಾಯಕಲ್ಪ ನೀಡಿದರು. ಯಾವುದೇ ಸಮಾಜವು ಪ್ರಗತಿ ಸಾಧಿಸಬೇಕಾದರೆ ಆರ್ಥಿಕ ಸಾಮರ್ಥ್ಯ, ಶಿಕ್ಷಣ, ಸಂಘಟನೆ, ಅನ್ಯೋನ್ಯತೆ, ಸಂಸ್ಕಾರ, ಸಂಪ್ರದಾಯಗಳು ಅತ್ಯಾವಶ್ಯ ಕವಾಗಿವೆ ಎಂಬ ಅವರ ದೂರಗಾಮಿ ಚಿಂತನೆ ಗುರು ಜಯಂತಿಯಲ್ಲಿ ಮೇಳೈಸಲಿ. ಅಧುನಿಕತೆಗೆ ಮೌಲ್ಯಗಳು, ಸಂಸ್ಕಾರ, ಕಟ್ಟುಕಟ್ಟಲೆಗಳು ಶರಣಾ ಗದಂತೆ ಸಂರಕ್ಷಿಸುವ ಧ್ಯೇಯ ನಮ್ಮ ದಾಗಲಿ ಎಂದು ರಂಗನಟ, ವಾಗ್ಮಿ ಮೀರಾರೋಡ್‌ ಬಿಲ್ಲವರ ಅಸೋಸಿಯೇಶನ್‌ ಸ್ಥಳೀಯ ಸಮಿತಿಯ ಗೌರವ ಕಾರ್ಯದರ್ಶಿ ಜಿ. ಕೆ. ಕೆಂಚನಕೆರೆ ಅಭಿಪ್ರಾಯಪಟ್ಟರು.

Advertisement

ಮೀರಾರೋಡ್‌ ಪೂರ್ವದ ಸಾಯಿ ಬಾಬಾ ನಗರದ ಸೈಂಟ್‌ ಥಾಮಸ್‌ ಸಭಾಂಗಣದಲ್ಲಿ ಸೆ. 11ರಂದು ಸಂಜೆ ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಮೀರಾರೋಡ್‌ ಸ್ಥಳೀಯ ಸಮಿತಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರುಗಳ 168ನೇ ಜಯಂತ್ಯುತ್ಸವದಲ್ಲಿ ಮಾತ

ನಾಡಿದ ಅವರು, ಬ್ರಹ್ಮಶ್ರೀ ನಾರಾ ಯಣ ಗುರುಗಳು ಮಾನವೀಯ ಮೌಲ್ಯಗಳ ಅಡಿಯಲ್ಲಿ ವೈಜ್ಞಾನಿಕ ಆಧ್ಯಾತ್ಮಿಕ ತಳಹದಿಯ ಮೇಲೆ ಸಮಾಜವನ್ನು ಉದ್ಧರಿಸಿದವರು. ಮನುಕುಲದ ಶತ್ರುಗಳಾದ ಅಸ್ಪ್ರಶ್ಯ ತೆಯ ವಿರುದ್ಧ ಹೋ ರಾಡಿ ಶೋಷಿತರ ಬದುಕಿನ ಬವಣೆ ನೀಗಿಸಿದ ಅವರು ಮಹಾನ್‌ ಜ್ಞಾನ ಜ್ಯೋತಿ ಸ್ವರೂಪರಾಗಿದ್ದಾರೆ. ಅವರ ಮಾರ್ಗದರ್ಶನ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಲಿ ಎಂದರು.

ಸ್ಥಳೀಯ ಸಮಿತಿ ಕಾರ್ಯಾಧ್ಯಕ್ಷ ಸುಭಾಶ್ಚಂದ್ರ ಕರ್ಕೇರ ಸ್ವಾಗತಿಸಿ ದರು. ಬಿಲ್ಲವ ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷ ಹರೀಶ್‌ ಜಿ. ಅಮೀನ್‌, ಗೌರವ ಪ್ರಧಾನ ಕಾರ್ಯದರ್ಶಿ ಹರೀಶ್‌ ಜಿ. ಸಾಲ್ಯಾನ್‌, ಗೌರವ ಪ್ರಧಾನ ಕೋಶಾಧಿಕಾರಿ ರಾಜೇಶ್‌ ಜೆ. ಬಂಗೇರ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಲಾ ಕೆ. ಕೋಟ್ಯಾನ್‌, ಸಾಂಸ್ಕೃತಿಕ ಉಪ ಸಮಿತಿಯ ಕಾರ್ಯಾಧ್ಯಕ್ಷ ಮೋಹನ್‌ದಾಸ್‌ ಜಿ. ಪೂಜಾರಿ, ಗೌರವ ಕಾರ್ಯದರ್ಶಿ ಕೇಶವ ಪೂಜಾರಿ ಶುಭ ಹಾರೈಸಿದರು.

ಜಯಪ್ರಕಾಶ್‌ ಅಮೀನ್‌ ಮತ್ತು ವಿಜಿತೇಂದ್ರ ಸನಿಲ್‌ ಅವರ ಪೌರೋ ಹಿತ್ಯದಲ್ಲಿ ಸಾಮೂಹಿಕ ಭಜನೆ, ಓಂ ನಮೋ ನಾರಾಯಣಾಯ ನಮಃ ಶಿವಾಯ ಜಪ ಯಜ್ಞ, ವಿಶೇಷ ಪೂಜೆ, ಮಹಾಮಂಗಳಾರತಿ, ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ನಡೆಯಿತು. ಇದೇ ಸಂದರ್ಭದಲ್ಲಿ ಅನ್ನಸಂತರ್ಪಣೆಯ ಸೇವಾರ್ಥಿ ಜಯಲಕ್ಷ್ಮೀ ಸದಾನಂದ ಸಾಲ್ಯಾನ್‌, ಪೂಜಾ ಪರಿಕರಗಳನ್ನು ನೀಡಿದ ರತ್ನಾ ಶೇಖರ ಪೂಜಾರಿ, ಸುಭಾಶ್ಚಂದ್ರ ಎಂ. ಕರ್ಕೇರ, ಹೊಟೇಲ್‌ ಗೋಲ್ಡ… ಕಾಯಿನ್‌, ಭೋಜ ಬಿ. ಸಾಲ್ಯಾನ್‌, ನಿಶಾ ಉದಯ ಕೋಟ್ಯಾನ್‌, ಎಚ್‌. ಎಂ. ಪೂಜಾರಿ, ಉಮೇಶ್‌ ಕರ್ಕೇರ, ರಮಾನಂದ ಪೂಜಾರಿ, ಲೀಲಾಧರ ಸನಿಲ್, ವಿಜಯ ಅಮೀನ್‌, ಪುಷ್ಪಾಲಂಕಾರ ಮಾಡಿದ ಸದಾನಂದ್‌ ಕೋಟ್ಯಾನ್‌, ಸುರೇಶ್‌ ಕೋಟ್ಯಾನ್‌, ಸ್ವಸ್ತಿಕ್‌ ಪೂಜಾರಿ ಮೊದಲಾದವರನ್ನು ಗೌರವಿಸಲಾಯಿತು.

Advertisement

ಕೇಂದ್ರ ಕಾರ್ಯಾಲಯದ ಮಾಜಿ ಅಧ್ಯಕ್ಷ ನಿತ್ಯಾನಂದ ಕೋಟ್ಯಾನ್‌, ಚಂದ್ರಶೇಖರ ಪೂಜಾರಿ, ಭಾರತ್‌ ಬ್ಯಾಂಕ್‌ನ ನಿರ್ದೇಶಕರಾದ ಭಾಸ್ಕರ ಎಂ. ಸಾಲ್ಯಾನ್‌, ಗಂಗಾಧರ್‌ ಜೆ. ಪೂಜಾರಿ, ಸೂರ್ಯಕಾಂತ್‌ ಜೆ. ಸುವರ್ಣ ಪಾಲ್ಗೊಂಡಿದ್ದರು. ಗೌರವ ಕಾರ್ಯಾಧ್ಯಕ್ಷ ಎಚ್‌. ಎಂ. ಪೂಜಾರಿ, ಉಪಕಾರ್ಯಾಧ್ಯಕ್ಷರಾದ ಎನ್‌. ಪಿ. ಕೋಟ್ಯಾನ್‌, ದಿನೇಶ್‌ ಸುವರ್ಣ, ಜತೆ ಕಾರ್ಯದರ್ಶಿ ಜಯಲಕ್ಷ್ಮೀ ಸಾಲ್ಯಾನ್‌, ಕೋಶಾಧಿಕಾರಿ ಶೋಭಾ ಎಚ್‌. ಪೂಜಾರಿ, ಜತೆ ಕೋಶಾಧಿಕಾರಿ ಗಣೇಶ್‌ ಎಚ್‌. ಬಂಗೇರ ಉಪಸ್ಥಿತರಿದ್ದರು.

ಕಾರ್ಯಕಾರಿ ಸಮಿತಿ ಸದಸ್ಯರಾದ ದಯಾನಂದ ಆರ್‌. ಅಮೀನ್‌, ಲೀಲಾಧರ ಕೆ. ಸನಿಲ…, ಜಗಜೀವನ್‌ ಡಿ. ಅಮೀನ್‌, ಶಂಕರ ಕೆ. ಪೂಜಾರಿ, ಸುಂದರಿ ಆರ್‌. ಕೋಟ್ಯಾನ್‌, ಸುಲೋಚನಾ ವಿ. ಮಾಬೀಯಾನ್‌, ಭಾರತಿ ಅಂಚನ್‌, ವಿಜಯ ಎನ್‌. ಅಮೀನ್‌, ಸಂಜೀವಿ ಎಸ್‌. ಪೂಜಾರಿ, ಗೀತಾ ಎಂ. ಪೂಜಾರಿ, ರಾಧಾ ಎಸ್‌. ಕೋಟ್ಯಾನ್‌, ಶಾಂಭವಿ ಜಿ. ಸಾಲ್ಯಾನ್‌, ಪೂರ್ಣಿಮಾ ಪೂಜಾರಿ, ಲೋಲಾಕ್ಷಿ ಕೆ. ಕೋಟ್ಯಾನ್‌, ಇಂದಿರಾ ಎಸ್‌. ಸುವರ್ಣ, ಪ್ರಿಯಾಂಕಾ ಕೋಟ್ಯಾನ್‌, ಪ್ರತಿನಿಧಿ ಮೋಹನ್‌ ಡಿ. ಪೂಜಾರಿ, ಯುವ ವಿಭಾಗದವರು, ಮಹಿಳಾ ವಿಭಾಗದ ಸದಸ್ಯೆಯರು ಪಾಲ್ಗೊಂಡು ಸಹಕರಿಸಿದರು.

ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಒತ್ತು, ನಾರಾಯಣಗುರುಗಳ ತತ್ವ್ತ – ಸಂದೇಶಕ್ಕೆ ಹೆಚ್ಚಿನ ಆದ್ಯತೆ, ಗುರು ಶೈಕ್ಷಣಿಕ ಸಂಕುಲದ ಅಭಿವೃದ್ಧಿ ಯೋಜನೆಗೆ ನೆರವು ಮೊದಲಾದ ಅಭಿವೃದ್ಧಿ ಯೋಜನೆ ನಮ್ಮದಾಗಿದೆ. ಆರೋಗ್ಯ ನಿಧಿ, ವಿದ್ಯಾನಿಧಿ, ಸದಸ್ಯತ್ವ, ಶಿಸ್ತುಬದ್ಧ ವಿಭಿನ್ನ ಕಾರ್ಯಕ್ರಮಗಳಿಗೆ ಅತ್ಯುತ್ತಮ ಕ್ರಿಯಾಶೀಲ ಸ್ಥಳೀಯ ಸಮಿತಿ ಎಂಬ ಪ್ರಥಮ ಸ್ಥಾನ ಪುರಸ್ಕಾರ ಸಹಿತ ಹಲವಾರು ಪ್ರಶಸ್ತಿಗಳು ಮೀರಾರೋಡ್‌ ಸ್ಥಳೀಯ ಸಮಿತಿಗೆ ಲಭಿಸಿವೆ.-ಸುಭಾಶ್ಚಂದ್ರ ಕರ್ಕೇರ ಕಾರ್ಯಾಧ್ಯಕ್ಷ, ಬಿಲ್ಲವರ ಅಸೋಸಿಯೇಶನ್‌ ಮೀರಾರೋಡ್‌ ಸ್ಥಳೀಯ ಸಮಿತಿ

 

-ಚಿತ್ರ-ವರದಿ: ರಮೇಶ್‌ ಅಮೀನ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next