Advertisement

ಆಯುರ್ವೇದದಲ್ಲಿ ವಿಶ್ವಕ್ಕೆ ಗುರು ಭಾರತ: ಡಾ|ಮಹೇಶ್ವರಯ್ಯ

01:30 PM May 29, 2018 | Team Udayavani |

ಬೀದರ: ಆಯುರ್ವೇದವು ಪ್ರಾಚೀನ ಕಾಲದಿಂದಲೂ ಬೆಳೆದು ಬಂದ ಔಷಧ ಪದ್ಧತಿಯಾಗಿದ್ದು, ಈ ವಿಚಾರದಲ್ಲಿ ಭಾರತವು ಜಗತ್ತಿಗೆ ಗುರುವಾಗಿದೆ ಎಂದು ಕಲಬುರಗಿ ಕೇಂದ್ರಿಯ ವಿಶ್ವವಿದ್ಯಾಲಯದ ಕುಲಪತಿ ಡಾ| ಎಚ್‌.ಎಂ. ಮಹೇಶ್ವರಯ್ಯ ಹೇಳಿದರು.

Advertisement

ನಗರದ ಗಣಪತರಾವ್‌ ಹಲವಾಯಿ ಆಡಿಟೋರಿಯಮ್‌ನಲ್ಲಿ ಸೋಮವಾರ ಎನ್‌. ಕೆ. ಜಾಬಶೆಟ್ಟಿ ಆಯುರ್ವೇದಿಕ್‌ ಮೇಡಿಕಲ್‌ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ ಹಾಗೂ ಶ್ರೀ ಸಿದ್ದಾರೂಢ ಚಾರಿಟೇಬಲ್‌ ಆಸ್ಪತ್ರೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಪದವಿ ಹಾಗೂ ಸ್ನಾತಕೋತ್ತರ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಆಯುರ್ವೇದವು ಜಾನಪದ ಜೀವನದಿಂದ ಕೂಡಿದ್ದಾಗಿದೆ. ಜನಪದ ವೈದ್ಯ ಪದ್ಧತಿಯಿಂದ ಹುಟ್ಟಿಕೊಂಡ ಈ ಆಯುರ್ವೇದ ಪದ್ಧತಿಯು ಬರುಬರುತ್ತ ಸುಧಾರಣೆಗೊಳಪಟ್ಟು ಅದು ಅತ್ಯಂತ ಶಕ್ತಿಶಾಲಿ ಔಷಧ ಪದ್ಧತಿಯಾಗಿ ಬೆಳೆದು ನಿಂತಿದೆ. ಚೀನಾದಂತಹ ಅಭಿವೃದ್ಧಿಪರ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸಹ ಆಯುರ್ವೇದ ತನ್ನ ವಿಸ್ತಾರ ಹೆಚ್ಚಿಸಿಕೊಂಡಿದ್ದು, ವಿದೇಶಗಳಲ್ಲಿ ಸೇವೆ ಮಾಡಲು ನಮ್ಮ ಆಯುರ್ವೇದ ವೈದ್ಯರಿಗೆ ಇಂದು ವಿಫುಲ ಅವಕಾಶಗಳಿವೆ ಎಂದರು. 

ಜ್ಞಾನ ಸಂಪಾದನೆಗಾಗಿ ಮಾತ್ರ ನಿಮ್ಮ ಸರ್ಟಿಫಿಕೇಟ್‌ ಕಾರ್ಯ ಮಾಡಬೇಕು ಹೊರತು ಸ್ವಾರ್ಥದ ಗಳಿಕೆಗಲ್ಲ. ಇದನ್ನು ಮನಗಂಡು ನಾವು ಮುನ್ನಡೆದರೆ ಸಮಾಜ ನಿಮ್ಮನ್ನು ಗೌರವದಿಂದ ಪೂಜಿಸುತ್ತದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಕಾರ್ಯದರ್ಶಿ ಡಾ| ಚನ್ನಬಸಪ್ಪ ಹಾಲಹಳ್ಳಿ ಮಾತನಾಡಿ, ಆಯುರ್ವೇದ ಔಷಧ ಮನುಷ್ಯನನ್ನು ಸದೃಢವಾಗಿ ಮತ್ತು ಧೀರ್ಘಾಯುಷಿಯಾಗಿ ಬಾಳುವಂತೆ ಮಾಡುತ್ತದೆ. ಇದು ದೈಹಿಕ ಹಾಗೂ ಮಾನಸಿಕವಾಗಿ ಬಲಿಷ್ಟಗೊಳಿಸಲು ಕಾರಣವಾಗಿದ್ದು, ಇದಕ್ಕೆ ಅಂಟಿಕೊಂಡಿರುವ ಯೋಗ ಹಾಗೂ ಪ್ರಾಣಾಯಾಮಗಳು ಮನುಷ್ಯನನ್ನು ನಿರೋಗಿಯಾಗಿ ಹಾಗೂ ಆತ್ಮಸ್ಥೈರ್ಯದಿಂದ ಬದುಕಲು ಪ್ರೇರೇಪಿಸುತ್ತವೆ. ಇಡೀ ಕರ್ನಾಟಕದಲ್ಲಿ ಶಿಕ್ಷಣ ಹಾಗೂ ಪ್ರಯೋಗ ಶಾಲೆಯಲ್ಲಿ ನಮ್ಮ ಕಾಲೇಜು ಮೂರನೇ ಸ್ಥಾನದಲ್ಲಿರುವುದು ನಮಗೆ ಸಂತಸದ ಸಂಗತಿ ಎಂದರು.

Advertisement

ಕಾಲೇಜಿನ ವೈದ್ಯಕೀಯ ನಿರ್ದೇಶಕ ಡಾ|ವಿ.ಎಸ್‌. ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಈ ಸಂದರ್ಭದಲ್ಲಿ ಸುಮಾರು 14 ಜನ ಪದವಿ ಹಾಗೂ 6 ಜನ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಸಂಸ್ಥೆಯ ಜಂಟಿ ಕಾರ್ಯದರ್ಶಿ ಬಿ.ಜಿ. ಶಟಕಾರ, ಖಜಾಂಚಿ ಬಸವರಾಜ ಜಾಬಶೆಟ್ಟಿ, ಸದಸ್ಯರಾದ ಪ್ರಭುಶಟ್ಟಿ ಮುದ್ದಾ, ಶಿವಶರಣಪ್ಪ ಸಾವಳಗಿ, ಶರಣಪ್ಪ ತಿರ್ಲಾಪುರೆ, ಉದಯಭಾನು ಹಲವಾಯಿ, ಮಡಿವಾಳಪ್ಪ ಗಂಗಶಟ್ಟಿ ವೇದಿಕೆಯಲ್ಲಿದ್ದರು. ಪ್ರಾಚಾರ್ಯ ಡಾ| ನಾಗರಾಜ ಮೂಲಿಮನಿ ಸ್ವಾಗತಿಸಿದರು. ಪ್ರಾಧ್ಯಾಪಕಿ ಡಾ| ಶೈಲಜಾ ಜಿಂಕಾ ಹಾಗೂ ಡಾ| ಕೋಮಲ ಪವಾರ ನಿರೂಪಿಸಿದರು. ಡಾ| ಚಂದ್ರಕಾಂತ ಹಳ್ಳಿ ವಂದಿಸಿದರು.

ಡಾ| ಚನ್ನಬಸವಣ್ಣ ಹಾಗೂ ಡಾ| ಧೂಳಪ್ಪ, ಡಾ| ಜಗನ್ನಾಥ ಹೆಬ್ಟಾಳೆ, ಡಾ| ಉಮಾಕಾಂತ ಪಾಟೀಲ, ರಾಜೆಂದ್ರ ಜೊನ್ನಿಕೇರಿ, ರಮೇಶ ಮಠಪತಿ, ಹಾವಗಿರಾವ್‌ ಮೈಲಾಪುರೆ, ಡಾ| ವಿಜಯಕುಮಾರ ಬಿರಾದಾರ, ಡಾ| ಬ್ರಹ್ಮಾನಂದ
ಸ್ವಾಮಿ, ಡಾ| ಪ್ರವಿಣ ಸಿಂಪಿ ಹಾಗೂ ನೂರಾರು ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಪಾಲಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next