ದೋಟಿಹಾಳ: ಸಮೀಪದ ಮುದೇನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುವ ಗರ್ಜಿನಾಳ ಉಪಕೇಂದ್ರದಲ್ಲಿ ಸಿಬ್ಬಂದಿಗಳ ಕೊರತೆಯಿಂದ ಕೇಂದ್ರಕ್ಕೆ ಕಳೆದ ಎರಡು ತಿಂಗಳಿಂದ ಬೀಗ ಹಾಕಿತು.
ಕಳೆದ ಮಾ. 24ರಂದು ಗ್ರಾಮಕ್ಕೆ ಭೇಟಿ ನೀಡಿದಾಗ ಉಪಕೇಂದ್ರದ ಆವರಣ ಕುಡುಕರ ತಾಣವಾಗಿತು ಹಾಗೂ ಕೇಂದ್ರದಲ್ಲಿ ಆರೋಗ್ಯ ಸಿಬ್ಬಂದಿ ಇಲ್ಲದ ಕಾರಣ ಎರಡು ತಿಂಗಳಿನಿಂದ ಕೇಂದ್ರಕ್ಕೆ ಬೀಗ ಹಾಕಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದರು.
ಇದರ ಬಗ್ಗೆ ಮಾ. 24ರಂದು ಉದಯವಾಣಿ ವೆಬ್‌ನಲ್ಲಿ ಮತ್ತು ಮಾ. 28ರಂದು ಉದಯವಾಣಿ ಪತ್ರಿಕೆಯಲ್ಲಿ “ಗರ್ಜಿನಾಳ ಆರೋಗ್ಯ ಉಪಕೇಂದ್ರಕ್ಕೆ ಬೀಗ” ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟಗೊಂಡ ಮೇಲೆ ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗಳು ಅಲ್ಲಿಯ ಸಮಸ್ಯೆಯ ಬಗ್ಗೆ ಮಾಹಿತಿ ಪಡೆದುಕೊಂಡು ಸಿಬ್ಬಂದಿಗಳ ಕೊರತೆಯಿರುವುದರಿಂದ ವಾರದಲ್ಲಿ ಮೂರು ದಿನ ಸಾರ್ವಜನಿಕರಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಸದ್ಯ ಮಾಡಿದ್ದಾರೆ. ಇದರಿಂದ ಬೀಗ ಹಾಕಲಾದ ಆರೋಗ್ಯ ಕೇಂದ್ರ ಸದ್ಯ ಪುನರಾರಂಭಗೊಂಡಿದೆ.
ಇದನ್ನೂ ಓದಿ : ಮೌನಿ ಮುಖ್ಯಮಂತ್ರಿ ಎಂದು ಸಿಎಂ ಬೊಮ್ಮಾಯಿಗೆ ಚಾಟಿ ಬೀಸಿದ ಹೆಚ್ ಡಿಕೆ
ಮುದೇನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಭಾರಿ ಆಡಳಿತ ವೈದ್ಯಾಧಿಕಾರಿಯಾದ ಡಾ| ಸಂತೋಷಕುಮಾರ ಬಿರದಾರ ಅವರು ಮಾತನಾಡಿ, ಮುದೇನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿಗಳ ಕೊರತೆ ಇದೆ. ಗರ್ಜಿನಾಳ ಉಪಕೇಂದ್ರದಲ್ಲಿ ಮೂರು ಹುದ್ದೆಗಳಿದ್ದು ಈ ಮೂರು ಹುದ್ದೆಗಳಲ್ಲಿ ಸದ್ಯ ಕೇಂದ್ರದ ಹಿರಿಯ ಆರೋಗ್ಯ ಅಧಿಕಾರಿ ಮತ್ತು ಸಮುದಾಯ ಆರೋಗ್ಯ ಅಧಿಕಾರಿಗಳ ಹುದ್ದೆ ಖಾಲಿ ಇದೆ. ಇದ್ದ ಎಎನ್‌ಎಮ್ ಅವರು ಹೆರಿಗೆ ಮೇಲೆ ರಜೆ ಹೋಗಿದ್ದಾರೆ. ಹೀಗಾಗಿ ಅಲ್ಲಿಯ ಜನರಿಗೆ ತೊಂದರೆಯಾಗಿದೆ. ಸಿಬ್ಬಂದಿಗಳ ಕೊರತೆಯ ನಡುವೆಯೂ ಸದ್ಯ ಗರ್ಜಿನಾಳ ಉಪಕೇಂದ್ರದಲ್ಲಿ ಮೂರು ದಿನ ಸಾರ್ವಜನಿಕರಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.