Advertisement
ಒಟ್ಟು 194 ಗೇಟ್ ಗಳಿದ್ದು, ಈಗ ಕೇವಲ 99 ಗೇಟ್ ಮಾತ್ರ ಓಪನ್ ಮಾಡಲಾಗಿದೆ. ಕೇರಳ ಮೂಲದ ಐದು ಜನ ತಜ್ಞರ ತಂಡ ಆಗಮಿಸಿದ್ದು, ಗೇಟ್ ಗಳನ್ನು ತೆರೆಯಲು ನಾನಾ ರೀತಿಯ ಪ್ರಯತ್ನ ಪಡುತ್ತಿದ್ದಾರೆ. ಎರಡು ಜೆಸಿಬಿಗಳನ್ನು ಬಳಸಿ ಕೆಲಸ ಮಾಡಿದರೂ ಒಂದೂ ಗೇಟ್ ತೆಗೆಯಲಾಗಿಲ್ಲ.
Related Articles
Advertisement
ನದಿಗೆ ಹೆಚ್ಚು ಪ್ರಮಾಣದ ನೀರು ಹರಿಸುವ ನಿರೀಕ್ಷೆಯಿದ್ದು, ಇದರಿಂದ ಗುರ್ಜಾಪುರ, ಕಾಡ್ಲೂರು ಸೇರಿ ನದಿ ಪಾತ್ರದ ಊರುಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ. ನೀರು ಹೆಚ್ಚಾದರೆ ಬ್ರಿಜ್ ಕಂ ಬ್ಯಾರೇಜ್ ಮುಳುಗುವುದು ಸಾಮಾನ್ಯ. ಆದರೆ, ಅದಕ್ಕೂ ಮುನ್ನವೇ ಎಲ್ಲ ಗೇಟ್ ಗಳನ್ನು ತೆರೆಯಲಾಗುತ್ತಿತ್ತು. ಈಗ ಸಾಕಷ್ಟು ಗೇಟ್ ಗಳು ಮುಚ್ಚಿರುವ ಪರಿಣಾಮ ಬ್ಯಾರೇಜ್ ಮೇಲೆ ಒತ್ತಡ ಬಿದ್ದು ಅನಾಹುತ ಸಂಭವಿಸುವ ಸಾಧ್ಯತೆಗಳಿವೆ. ಕಳೆದ ಕೆಲ ವರ್ಷಗಳ ಹಿಂದೆ ಗೂಗಲ್ ಬ್ಯಾರೇಜ್ ನಲ್ಲೂ ಇದೇ ರೀತಿಯ ಸಮಸ್ಯೆ ಎದುರಾಗಿತ್ತು. ಆದರೂ ಅಧಿಕಾರಿಗಳು ಎಚ್ಚೆತ್ತು ಕೊಳ್ಳದಿರುವುದು ವಿಪರ್ಯಾಸ.