ವಿಜಯಪುರ: ನಗರದ ಜ್ಞಾನಯೋಗಾ ಶ್ರಮದ ಹತ್ತಿರ ನಿರ್ಮಿಸಲಾದ ಬಸ್ ಟರ್ಮಿನಲ್ ತಂಗುದಾಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಲೋಕಾರ್ಪಣೆ ಮಾಡಿದರು.
ವಿಶೇಷ ಅಭಿವೃದ್ಧಿ ಯೋಜನೆ ಅನುದಾನದಡಿ 7500 ಚ.ಅಡಿ (150*50) ನಿವೇಶನದಲ್ಲಿ ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ನಗರ ಸಾರಿಗೆ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ನಾಗಠಾಣ ಶಾಸಕ ದೇವಾನಂದ ಚವ್ಹಾಣ, ಅಪ್ಪುಗೌಡ ಪಾಟೀಲ ಮನಗೂಳಿ, ವೂಡಾ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಲಕ್ಷ್ಮಣ ಜಾಧವ, ವಿಕ್ರಮ ಗಾಯಕವಾಡ ಸೇರಿದಂತೆ ಇತರರು ಇದ್ದರು.
ಸದರಿ ನೂತನ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ನಿರೀಕ್ಷಣಾ ಪ್ರಾಂಗಣ, ಸಂಚಾರ ನಿಯಂತ್ರಣ ಕೊಠಡಿ, ಪಾಸ್ ವಿತರಿಸುವ ಕೊಠಡಿ, ಒಂದು ವಾಣಿಜ್ಯ ಮಳಿಗೆ, ಪ್ರಯಾಣಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಇದೆ. ಏಕ ಕಾಲದಲ್ಲಿ ಎರಡು ಬಸ್‌ಗಳು ನಿಲ್ಲಲು ಸ್ಥಳಾವಕಾಶವಿದ್ದು ಆಶ್ರಮ ನಗರ ನಿಲ್ದಾಣದಿಂದ ಸಾರಿಗೆ ಸಂಸ್ಥೆಯ ನಗರ ಸಾರಿಗೆಯ 75 ಸರತಿಗಳು ಕಾರ್ಯಾ ಚರಣೆ ಮಾಡುತ್ತವೆ ಎಂದು ಕಕರಸಾ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.