Advertisement

ಪಾಕ್: ಜನಪ್ರತಿನಿಧಿಯನ್ನು ಗುರಿಯಾಗಿರಿಸಿ ಗುಂಡಿನ ದಾಳಿ; ಪೊಲೀಸರು ಸೇರಿ ನಾಲ್ವರು ಬಲಿ

02:48 PM Aug 07, 2022 | Team Udayavani |

ಪೇಶಾವರ: ವಾಯುವ್ಯ ಪಾಕಿಸ್ಥಾನದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ರಾಜಕೀಯ ಪಕ್ಷದ ಪ್ರಾಂತೀಯ ಜನಪ್ರತಿನಿಧಿಯನ್ನು ಗುರಿಯಾಗಿಸಿಕೊಂಡು ನಡೆದ ದಾಳಿಯಲ್ಲಿ ಬಂದೂಕುಧಾರಿಗಳು ಇಬ್ಬರು ಪೊಲೀಸರು ಸೇರಿದಂತೆ ನಾಲ್ವರನ್ನು ಗುಂಡಿಕ್ಕಿ ಹತ್ಯೆಗೈದಿದ್ದಾರೆ ಎಂದು ವರದಿಯಾಗಿದೆ.

Advertisement

ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಪಕ್ಷದ ಜನಪ್ರತಿನಿಧಿ ಮಲಿಕ್ ಲಿಯಾಕತ್ ಖಾನ್ ಶನಿವಾರ ತಡರಾತ್ರಿ ನಡೆದ ದಾಳಿಯಲ್ಲಿ ಇತರ ಮೂವರೊಂದಿಗೆ ಗಾಯಗೊಂಡಿದ್ದಾರೆ ಮತ್ತು ಅವರನ್ನು ಪ್ರಾಂತೀಯ ರಾಜಧಾನಿ ಪೇಶಾವರದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಯ ಹೊಣೆಯನ್ನು ತಕ್ಷಣವೇ ಯಾರೂ ಹೊತ್ತುಕೊಂಡಿಲ್ಲ.

ಸಂಪ್ರದಾಯವಾದಿ ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ಲೋವರ್ ದಿರ್ ಜಿಲ್ಲೆಯ ಮೈದಾನ್ ಪ್ರದೇಶದಲ್ಲಿ ಈ ದಾಳಿ ನಡೆದಿದೆ. ಶನಿವಾರ ತಡರಾತ್ರಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಮನೆಗೆ ಮರಳುತ್ತಿದ್ದ ಪಿಟಿಐ ಪಕ್ಷದ ಜನಪ್ರತಿನಿಧಿಯ ಸೋದರಳಿಯ ಮತ್ತು ಸಹೋದರ ಮೃತಪಟ್ಟವರಲ್ಲಿ ಸೇರಿದ್ದಾರೆ ಎಂದು ಪೊಲೀಸ್ ಅಧಿಕಾರಿ ಜರ್ ಬಾದ್‌ಶಾ ತಿಳಿಸಿದ್ದಾರೆ.

ಈ ಪ್ರದೇಶವು ದಿವಂಗತ ಧಾರ್ಮಿಕ ನಾಯಕ ಸೂಫಿ ಮೊಹಮ್ಮದ್‌ನ ಭದ್ರಕೋಟೆಯಾಗಿದ್ದು, ಅವರು 1990 ರ ದಶಕದಲ್ಲಿ ಇಸ್ಲಾಂನ ಕಟ್ಟುನಿಟ್ಟಾದ ಆವೃತ್ತಿಯನ್ನು ಬೋಧಿಸಿದ್ದರು, ನಂತರ ಅವರ ಅನುಯಾಯಿಗಳನ್ನು ಅಫ್ಘಾನಿಸ್ಥಾನದಲ್ಲಿ ಅಮೆರಿಕ ನೇತೃತ್ವದ ನ್ಯಾಟೋ ಮಿತ್ರ ಪಡೆಗಳ ವಿರುದ್ಧ ಹೋರಾಡಲು ಕಳುಹಿಸಿದ್ದರು. ಇದು 2009 ರವರೆಗೆ ಪಾಕಿಸ್ಥಾನಿ ತಾಲಿಬಾನ್ ಪ್ರಭಾವದ ಅಡಿಯಲ್ಲಿ ಇತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next