Advertisement

ಕೊಲೆ ಯತ್ನ ಆರೋಪಿಗೆ ಗುಂಡೇಟು: ಬಂಧನ

06:02 AM Jun 04, 2020 | Lakshmi GovindaRaj |

ಬೆಂಗಳೂರು: ಮದ್ಯ ಸೇವಿಸುವ ವಿಚಾರಕ್ಕೆ ಸ್ನೇಹಿತನನ್ನೇ ಹತ್ಯೆಗೆ ಯತ್ನಿಸಿದ ರೌಡಿಶೀಟರ್‌ ಮುನಿಕೃಷ್ಣ ಅಲಿಯಾಸ್‌ ಕಪ್ಪೆಗೆ ಅಮೃತಹಳ್ಳಿ ಪೊಲೀಸರು ಗುಂಡೇಟಿನ ರುಚಿ ತೋರಿಸಿ ಬಂಧಿಸಿದ್ದಾರೆ. ಆರೋಪಿಯ ಬಲಗಾಲಿಗೆ ಗುಂಡೇಟು  ತಗುಲಿದ್ದು, ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

Advertisement

ಇದೇ ವೇಳೆ ಹೆಡ್‌ ಕಾನ್‌ಸ್ಟೆಬಲ್‌ ದಿನೇಶ್‌ಗೂ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೇ 4ರಂದು ಹೊಯ್ಸಳ ಲೇಔಟ್‌ನಲ್ಲಿ ಮದ್ಯ  ಸೇವಿಸುವ ವಿಚಾರಕ್ಕೆ ಸ್ನೇಹಿತ ಯಶವಂತ್‌ ಹಾಗೂ ಇತರೆ ಇಬ್ಬರ ಮೇಲೆ ಆರೋಪಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಿ ಪರಾರಿಯಾಗಿದ್ದ. ನಂತರ ಘಟನಾ ಸ್ಥಳಕ್ಕೆ ಧಾವಿಸಿದ ಅಮೃತಹಳ್ಳಿ ಪೊಲೀಸರು ಗಾಯಾಳುಗಳಗೆ  ಚಿಕಿತ್ಸೆ ಕೊಡಿಸಿದ್ದರು.

ಬಳಿಕ ಪ್ರಕರಣ ದಾಖಲಿಸಿಕೊಂಡು, ಇನ್‌ ಸ್ಪೆಕ್ಟರ್‌ ಅರುಣ್‌ ಕುಮಾರ್‌ ನೇತೃತ್ವದಲ್ಲಿ ತಂಡ ರಚಿಸಿದ್ದರು. ಬುಧವಾರ ಮುಂಜಾನೆ 5.30ರ ಸುಮಾರಿಗೆ ಮುನಿಕೃಷ್ಣ ಅಲಿಯಾಸ್‌ ಕಪ್ಪೆ ಬಾಗಲೂರಿನ ಮಿಟ್ಟಗಾನಹಳ್ಳಿಯ ಕಲ್ಲು ಕ್ವಾರೆಯ ಪಾಳು  ಮನೆಯಲ್ಲಿ ಅಡಗಿರುವ ಮಾಹಿತಿ ಸಿಕ್ಕಿತ್ತು. ಕೂಡಲೇ ಸ್ಥಳಕ್ಕೆ ತಂಡದ ಜತೆ ತೆರಳಿದ ಪಿಐ ಅರುಣ್‌ ಕುಮಾರ್‌ ಆರೋಪಿಗಳ ಬಂಧನಕ್ಕೆ ಮುಂದಾಗಿದ್ದರು. ಆಗ ಪೊಲೀಸರನ್ನು ಕಂಡು ಒಬ್ಬ  ಪರಾರಿಯಾಗಿದ್ದ. ಈ ವೇಳೆ ಮುನಿಕೃಷ್ಣ ಹೆಡ್‌ ಕಾನ್‌ಸ್ಟೆಬಲ್‌ ದಿನೇಶ್‌ ಮೇಲೆ ಡ್ರ್ಯಾಗರ್‌ ನಿಂದ ಹಲ್ಲೆ ನಡೆಸಿದ್ದಾನೆ.

ಆಗ ಪಿಐ ಅರುಣ್‌ ಕುಮಾರ್‌, ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದರೂ ಮತ್ತೂಮ್ಮೆ ಹಲ್ಲೆಗೆ  ಮುಂದಾಗಿದ್ದಾನೆ. ಪರಿಸ್ಥಿತಿ ಮಿತಿಮೀರಿದಾಗ ಬಲಗಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಮುನಿಕೃಷ್ಣ ಅಲಿಯಾಸ್‌ ಕಪ್ಪೆ ವಿರುದಟಛಿ ಅಮೃತಹಳ್ಳಿ, ಕೊಡಿಗೇಹಳ್ಳಿ, ಜ್ಞಾನಭಾರತಿ, ಚಿಕ್ಕಜಾಲ ಸೇರಿ  10ಕ್ಕೂ ಅಧಿಕ ಕಡೆ ದರೋಡೆ, ಹಲ್ಲೆ, ಕೊಲೆ ಯತ್ನ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next