Advertisement
ಇದೇ ವೇಳೆ ಆರೋಪಿಯ ಹಲ್ಲೆಯಿಂದ ಗಾಯಗೊಂಡಿರುವ ಹೆಡ್ ಕಾನ್‌ಸ್ಟೆಬಲ್ ಅನಂತರಾಜು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊಲೆ ಪ್ರಕರಣ ಸಂಬಂಧ ಈಗಾಗಲೇ ಪ್ರಭಾಕರನ್ ಹಾಗೂ ನರಸಿಂಹ ಎಂಬವರನ್ನು ಬಂಧಿಸ ಲಾಗಿದೆ ಎಂದು ಪೊಲೀಸರು ಹೇಳಿದರು.
Related Articles
Advertisement
ಈ ಸಂಬಂಧ ಪ್ರರಕಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ನಂದಿನಿ ಲೇಔಟ್ ಪೊಲೀಸರು, ಘಟನಾ ಸ್ಥಳದ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿ ನರಸಿಂಹನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪ್ರಭಾಕರನ್ ಮತ್ತು ಬಾಬು ಬಗ್ಗೆ ಮಾಹಿತಿ ನೀಡಿದ್ದ. ಈ ಸಂಬಂಧ ಪ್ರಭಾಕರನ್‌ನನ್ನು ಬಂಧಿಸಲಾಗಿತ್ತು. ಅನಂತರ ಬಾಬು ಶಿವಕುಮಾರ್ ಪತ್ತೆಗೆ ನಂದಿನಿ ಲೇಔಟ್ ಇನ್‌ಸ್ಪೆಕ್ಟರ್ ಲೋಹಿತ್ ಮತ್ತು ಮಹಾಲಕ್ಷ್ಮೀ ಲೇಔಟ್ ಠಾಣೆ ಪಿಎಸ್‌ಐ ವೆಂಕಟರಮಣ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ಎರಡು ಕಾಲುಗಳಿಗೂ ಗುಂಡು: ಚೆನ್ನೈನಿಂದ ಬೆಂಗಳೂರಿಗೆ ಬಂದಿದ್ದ ಆರೋಪಿ ತನಗೆ ಪೊಲೀಸರು ಹುಡುಕಾಟ ನಡೆಸುತ್ತಿರುವ ಮಾಹಿತಿ ಪಡೆದು ಸ್ನೇಹಿತರೊಬ್ಬರ ಸಲಹೆ ಮೇರೆಗೆ ಜಾಲಹಳ್ಳಿ ಠಾಣೆ ವ್ಯಾಪ್ತಿಯ ಎಚ್‌ಎಂಟಿ ಬಸ್ ನಿಲ್ದಾಣ ಸಮೀಪದ ನಿರ್ಜನ ಪ್ರದೇಶದಲ್ಲಿ ಅವಿತುಕೊಂಡಿದ್ದ. ಮಹಾಲಕ್ಷ್ಮೀ ಲೇಔಟ್ ಠಾಣೆ ಪಿಎಸ್‌ಐ ವೆಂಕಟರಮಣ ಮತ್ತು ಎಚ್‌ಸಿ ಅನಂತರಾಜು ಆರೋಪಿಯನ್ನು ಬಂಧಿಸಲು ಮುಂದಾಗಿದ್ದು, ಆರೋಪಿ ಅನಂತರಾಜು ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.
ಆಗ ಪಿಎಸ್‌ಐ ವೆಂಕಟರಮಣ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಆರೋಪಿಗೆ ಶರಣಾಗುವಂತೆ ಸೂಚಿಸಿ ದ್ದರೂ, ಮತ್ತೆ ಹಲ್ಲೆಗೆ ಯತ್ನಿಸಿದ್ದಾನೆ. ಪಿಎಸ್‌ಐ ವೆಂಕಟರಮಣ ಆತ್ಮರಕ್ಷಣೆಗಾಗಿ ಬಾಬುನ ಒಂದು ಕಾಲಿಗೆ ಗುಂಡು ಹೊಡೆದಿ ದ್ದಾರೆ. ಆದರೂ, ಪಿಎಸ್‌ಐ ಮೇಲೆಯೇ ಹಲ್ಲೆಗೆ ಮುಂದಾದಾಗ ಮತ್ತೂಂದು ಕಾಲಿಗೂ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದರು.
ಹಣದ ಆಸೆಗೆ ಕೃತ್ಯ: ಈ ಸಂಬಂಧ ಡಿಸೆಂಬರ್ ಮೊದಲ ವಾರದಲ್ಲಿ ಬೆಂಗಳೂರಿಗೆ ಬಂದಿದ್ದ ಬಾಬು ಶಿವಕುಮಾರ್‌ಗೆ ರಘು ಕೊಲೆಗೆ 50 ಸಾವಿರ ರೂ. ಕೊಡುವುದಾಗಿ ಹೇಳಿದ್ದ. ಹಣದಾಸೆಗೆ ಆರೋಪಿ ತನ್ನ ಸಹಚರ ನರಸಿಂಹ ಹಾಗೂ ಪ್ರಭಾಕರನ್ ಜತೆ ಸೇರಿ ಡಿ.11ರ ತಡರಾತ್ರಿ 11 ಗಂಟೆ ಸುಮಾರಿಗೆ ಲಗ್ಗೆರೆ ಮುಖ್ಯರಸ್ತೆಯಲ್ಲಿ ಕ್ಯಾಬ್‌ನಲ್ಲಿ ಹೋಗುತ್ತಿದ್ದ ರಘುನನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹತ್ಯೆಗೈದು ಪರಾರಿಯಾಗಿದ್ದರು.