Advertisement
ನಗರದ ವಡ್ಡರ ಓಣಿಯಲ್ಲಿ ಗುಂಡಿನ ದಾಳಿ ನಡೆದಿದ್ದು, ಗುರಿ ತಪ್ಪಿದ ಕಾರಣ ಶೋಯೇಬ್ ಕಕ್ಕಳಮೇಲಿ ಎಂಬವನಿಗೆ ಗುಂಡು ಕಿವಿಗೆ ತಾಗಿದ್ದು, ಗಾಯಾಳುವನ್ನು ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Related Articles
Advertisement
ಮೇ 6 ರಂದು ನಗರದಲ್ಲಿ ಹತ್ಯೆಯಾಗಿದ್ದ ಹೈದರ್ ನದಾಫ್ ವಿಜಯಪುರ ಮಹಾನಗರ ಪಾಲಿಕೆ ಸದಸ್ಯೆ ನಿಶಾತ್ ನದಾಫ್ ಪತಿ. ಸದರಿ ಘಟನೆಯಲ್ಲಿ ಬಂಧಿತರಾಗಿರುವ ಆರೋಪಿಗಳಲ್ಲಿ ಜಾಮೀನಿನ ಮೇಲೆ ನಾಲ್ವರು ಹೊರಹೆ ಬಂದಿದ್ದಾರೆ. ಹೀಗಾಗಿ ಹಯದರ್ ಹತ್ಯೆಯ ಪ್ರತೀಕಾರಕ್ಕಾಗಿ ಶೋಯೇಬ್ ಕಕ್ಕಳಮೇಲಿ ಮೇಲೆ ದುಷ್ಕರ್ಮಿಗಳು ಗುಂಡಿ ಹಾರಿಸಿದ್ದಾರೆ ಎಂದು ದೂರಲಾಗಿದೆ.
ಘಟನೆಯ ಸುದ್ದಿ ತಿಳಿಯುತ್ತಲೇ ಎಸ್ಪಿ ಋಷಿಕೇಶ ಭಗವಾನ್ ಹಾಗೂ ಪೊಲೀಸ್ ಇತರೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡು, ಇಡೀ ಘಟನೆಯ ಬಗ್ಗೆ ಮಾಹಿತಿ ಸಂಗ್ರಹಿಸಿ, ತನಿಖೆ ನಡೆಸಲಿದ್ದೇವೆ ಎಂದರು.
ಘಟನಾ ಸ್ಥಳದಲ್ಲಿ ಮೂರು ಬೈಕ್‍ಗಳು ಬಿದ್ದಿದ್ದು, ಒಂದು ಬಾಧಿತನಿಗೆ ಸೇರಿರಬಹುದು. ಈ ಕುರಿತು ಸಮಗ್ರ ತನಿಖೆ ನಡೆಸುವ ಜೊತೆಗೆ ತಲೆ ಮರೆಸಿಕೊಂಡಿರುವ ಆರೋಪಿಗಳ ಶೀಘ್ರ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ಎಸ್ಪಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.