Advertisement

Firing; ಕಲಬುರಗಿಯಲ್ಲಿ ಗುಂಡಿನ ಸದ್ದು; ಕೊಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್‌

01:18 PM Sep 21, 2024 | Team Udayavani |

ಕಲಬುರಗಿ: ಆಳಂದ ತಾಲೂಕಿನ ಖಾನಾಪುರದ ಕ್ರಾಸ್ ಬಳಿ ನಡೆದಿದ್ದ ವಿಶ್ವನಾಥ್ ಜಮಾದಾರ ಕೊಲೆ ಪ್ರಕರಣದ ಆರೋಪಿ ಲಕ್ಷ್ಮಣ ಪೂಜಾರಿ ಮೇಲೆ ಶನಿವಾರ ಮಾಡ್ಯಾಳ ಗ್ರಾಮದ ಬಳಿಯಲ್ಲಿ ಬೆಳಗ್ಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿರುವ ಘಟನೆ ನಡೆದಿದೆ.

Advertisement

ಘಟನೆಯಲ್ಲಿ ಆರೋಪಿ ಲಕ್ಷ್ಮಣ ಪೂಜಾರಿ ಬಲಗಾಲಿಗೆ ಗುಂಡು ತಗುಲಿದ್ದು, ಆತನನ್ನು ಹಾಗೂ ಆತನ ದಾಳಿಯಿಂದ ಗಾಯಗೊಂಡಿರುವ ನಿಂಬರ್ಗಾ ಪಿಎಸ್‌ಐ ಅವರನ್ನು ಚಿಕಿತ್ಸೆಗಾಗಿ ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯಕ್ಕೆ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಘಟನೆ ವಿವರ

ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ವಿಶ್ವನಾಥ ಜಮಾದಾರ ಕೊಲೆ ಸೆ.13ರಂದು ನಡೆದಿತ್ತು. ಮೂರು ಸುತ್ತು ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದ ಪ್ರಮುಖ ಆರೋಪಿ ಲಕ್ಷ್ಮಣ ಪೂಜಾರಿ ಬಚ್ಚಿಟ್ಟಿದ್ದ ಗನ್ ರಿಕವರಿ ಮಾಡಲು ಶನಿವಾರ ಬೆಳಗ್ಗೆ ತೆರಳಿದ್ದ ಆಳಂದ ತಾಲೂಕಿನ ಮಾಡ್ಯಾಳ ಬಳಿಯಲ್ಲಿ ಏಕಾಏಕಿಯಾಗಿ ಲಕ್ಷ್ಮಣ ತಿರುಗಿ ಬಿದ್ದಿದ್ದಾನೆ.

ನಿಂಬರ್ಗಾ ಮಹಿಳಾ ಪಿಎಸ್‌ಐ ಮೇಲೆ ಲಕ್ಷ್ಮಣ ಹಲ್ಲೆ ಮಾಡಿದ್ದಾನೆ. ಇದರಿಂದ ಪಿಎಸ್‌ಐ ಕೈಗೆ ಗಾಯವಾಗಿದೆ. ಈ ವೇಳೆ ಆತ್ಮರಕ್ಷಣೆಗಾಗಿ ಪಿಎಸ್‌ಐ ಸೋಮಲಿಂಗ ಒಡೆಯರ್ ಲಕ್ಷ್ಮಣ ಕಾಲಿಗೆ ಗುಂಡು ಹಾರಿಸಿದ್ದಾರೆ. ಕೂಡಲೇ  ಸ್ಥಳದಲ್ಲಿ ಕುಸಿದು ಬಿದ್ದ ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ‌.

Advertisement

ಲಕ್ಷ್ಮಣ ವಿರುದ್ಧ ಒಟ್ಟು 11 ಪ್ರಕರಣಗಳು ದಾಖಲಾಗಿವೆ. ಬೆಂಗಳೂರು, ಕಲಬುರಗಿಯಲ್ಲಿ ಗನ್ ಸಪ್ಲೈ ಮಾಡಿಕೊಂಡಿದ್ದ ಈತ ಸೆಕ್ಷನ್ 307 ಸೇರಿದಂತೆ ಇನ್ನೂ ಹಲವು ಪ್ರಕರಣಗಳಲ್ಲಿ ಪೊಲೀಸರಿಗೂ ಬೇಕಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next