Advertisement

ವೃದ್ಧನಿಂದ ಬೀದಿ ನಾಯಿಗೆ ಗುಂಡೇಟು

12:20 AM Nov 12, 2019 | Lakshmi GovindaRaju |

ಬೆಂಗಳೂರು: ವೃದ್ಧರೊಬ್ಬರು ಮನೆ ಮಂದೆ ಗಲೀಜು ಮಾಡುತ್ತಿದ್ದ ಬೀದಿ ನಾಯಿಗೆ ಏರ್‌ಗನ್‌ನಿಂದ ಗುಂಡು ಹಾರಿಸಿರುವ ಘಟನೆ ಜಯನಗರದಲ್ಲಿ ನಡೆದಿದೆ. ನಿಮ್ಹಾನ್ಸ್‌ ಆಸ್ಪತ್ರೆಯ ನಿವೃತ್ತ ಪ್ರಾಧ್ಯಾಪಕ ಶಾಮಸುಂದರ್‌ (83) ಬಂಧಿತರು. ಆರೋಪಿಯು ಭಾನುವಾರ ತಡರಾತ್ರಿ ಮನೆ ಬಾಗಿಲ ಮುಂದೆ ಮಲಗಿದ್ದ ನಾಯಿಗೆ ಎರಡು ಸುತ್ತು ಗುಂಡು ಹಾರಿಸಿ ಗಾಯಗೊಳಿಸಿದ್ದಾರೆ.

Advertisement

ಈ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಸೋಮವಾರ ಮುಂಜಾನೆ ಆರು ಗಂಟೆ ಸುಮಾರಿಗೆ ಎನ್‌ಜಿಒ ಸಂಸ್ಥೆಯೊಂದರ ಸಿಬ್ಬಂದಿ ಪ್ರವೀಣ್‌ ಎಂಬವರು, ಗಾಯಗೊಂಡಿದ್ದ ನಾಯಿಯನ್ನು ಸಂರಕ್ಷಿಸಿದ್ದಾರೆ. ಬಳಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ, ದೂರು ನೀಡಿದ್ದರು.

ಈ ಸಂಬಂಧ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಯನಗರ ಪೊಲೀಸರು ಹೇಳಿದರು. ಗಾಯಗೊಂಡಿರುವ ನಾಯಿ, ಜಯನಗರದ 5ನೇ ಹಂತದ ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ ಬಳಿಯಿರುವ ಶಾಮಸುಂದರ್‌ ಅವರ ಮನೆ ಸುತ್ತ ಮುತ್ತ ಓಡಾಡಿಕೊಂಡಿತ್ತು. ಮನೆ ಮುಂದಿರುವ ತೋಟದಲ್ಲಿ ಪದೇ ಪದೇ ಬಂದು ಗಲೀಜು ಮಾಡುತ್ತಿತ್ತು.

ಅದರಿಂದ ಆಕ್ರೋಶಗೊಂಡ ಆರೋಪಿ ಭಾನುವಾರ ರಾತ್ರಿ ಏರ್‌ಗನ್‌ನಿಂದ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಈಗಾಗಲೇ ನಾಯಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ. ಅದರ ದೇಹದಲ್ಲಿ ಎರಡು ಬುಲೆಟ್‌ ಇರುವುದನ್ನು ವೈದ್ಯರು ಗುರುತಿಸಿದ್ದು, ಶಸ್ತ್ರ ಚಿಕಿತ್ಸೆಗೊಳಪಡಿಸಿದ್ದಾರೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next