Advertisement
ಪಟ್ಟಣದ ನಿವಾಸಿ ಕಾರ್ತಿಕ್(31) ಮೀಟರ್ ಮಾಫಿಯಾಗೆ ಸಿಲುಕಿ ನೇಣಿಗೆ ಶರಣಾದ ಯುವಕ. ಈತ ದಿನಸಿ ಅಂಗಡಿ ವ್ಯಾಪಾರ ಮಾಡಿಕೊಂಡಿದ್ದ ಎನ್ನಲಾಗಿದೆ.
ಮೃತ ಕಾರ್ತಿಕ್ ದಿನಸಿ ಅಂಗಡಿ ವ್ಯಾಪಾರ ಮಾಡಿಕೊಂಡಿದ್ದ ಹಿನ್ನೆಲೆ ಮೀಟರ್ ಬಡ್ಡಿದಾರರಿಂದ ಸಾಲದ ರೂಪದಲ್ಲಿ ಹಣ ಪಡೆದಿದ್ದ. ಹಣಕ್ಕಿಂತಲೂ ದುಪ್ಪಟ್ಟು ಬಡ್ಡಿ ಏರಿದ ಕಾರಣಕ್ಕೆ ಹಣ ಕೊಡುವಂತೆ ಶುಕ್ರವಾರ ರಾತ್ರಿ ಈತನ ಮನೆಯ ಮುಂದೆ ಬಂದು ಸಾಲ ನೀಡಿದವರು ತಗಾದೆ ತೆಗೆದು ಗಲಾಟೆ ಮಾಡಿದ್ದಾರೆ ಎನ್ನಲಾಗಿದ್ದು, ಇದರಿಂದ ಬೇಸತ್ತ ಯುವಕ ಕಾರ್ತಿಕ್ ಮನನೊಂದು ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಡೆತ್ ನೋಟ್ ಆಧಾರ ಹಾಗೂ ಮೃತನ ಅಣ್ಣ ನೀಡಿದ ದೂರಿನ ಮೇರೆಗೆ ಪ್ರದೀಪ್, ರವಿ, ಸುಭಾಷ್, ನಂದಿ ಎಂಬ ನಾಲ್ವರ ವಿರುದ್ಧ ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರದೀಪ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಉಳಿದ ಮೂರು ಮಂದಿ ತಲೆ ಮರೆಸಿಕೊಂಡಿದ್ದಾರೆ. ಇವರ ಬಂಧನಕ್ಕೂ ಕೂಡ ಪೊಲೀಸರು ಬಲೆ ಬೀಸಿದ್ದಾರೆ.
Related Articles
Advertisement