ಗುಂಡ್ಲುಪೇಟೆ(ಚಾಮರಾಜನಗರ): ಸಾಲ ಬಾಧೆಯಿಂದ ಬೇಸತ್ತು ರೈತನೋರ್ವ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ರಂಗೂಪುರ ಗ್ರಾಮದಲ್ಲಿ ಶುಕ್ರವಾರ (ಜ.6) ನಡೆದಿದೆ.
ರಂಗೂಪುರ ಗ್ರಾಮದ ಮಹದೇವೇಗೌಡ ಮೃತ ರೈತನಾಗಿದ್ದು, ಈತ ತನ್ನ ಜಮೀನಿನಲ್ಲಿದ್ದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಮೃತ ರೈತ ಪಿಎಸಿಸಿ ಬ್ಯಾಂಕ್ ನಲ್ಲಿ ಸಾಲ ಪಡೆದಿದ್ದು, ಅಧಿಕ ಸುಸ್ತಿಯಾಗಿತ್ತು. ಅಲ್ಲದೆ ಪತ್ನಿ ಹೆಸರಿನಲ್ಲಿ ಸ್ವ ಸಹಾಯ ಸಂಘಗಳಲ್ಲಿ ಕೂಡ ಸಾಲ ಪಡೆದಿದ್ದ ಎನ್ನಲಾಗುತ್ತಿದೆ. ಈ ಹಿನ್ನಲೆ ಸಾಲದ ಹೊರೆ ಹೆಚ್ಚಳವಾದ ಹಿನ್ನಲೆ ನೇಣಿ ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆ ಸಂಬಂಧ ಬೇಗೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Related Articles