Advertisement
ದೇಶಿಪುರ ಗ್ರಾಮದ ಸಿದ್ದರಾಜಶೆಟ್ಟಿ(48) ಎಡ ಗೈ ಹಾಗೂ ಕುತ್ತಿಗೆ ಭಾಗಕ್ಕೆ ಗಾಯವಾಗಿದೆ. ಗ್ರಾಮದ ರಸ್ತೆಯಲ್ಲಿ ಹುರುಳಿ ಒಕ್ಕಣೆ ಮಾಡಿ ಸಿದ್ದರಾಜಶೆಟ್ಟಿ ಹಾಗೂ ಮಹದೇವಶೆಟ್ಟಿ ಇಬ್ಬರು ಕಾಯುವ ಸಲುವಾಗಿ ಅಲ್ಲೇ ಟಾರ್ಪಲ್ ಹೊದ್ದು ಮಲಗಿದ್ದರು. ಶುಕ್ರವಾರ ಬೆಳಗಿನ ಜಾವ 4ರ ಸಮಯ ಕಾಡಾನೆ ಆಹಾರ ಅರಸಿ ನಾಡಿಗೆ ಬಂದದೆ. ಅಲ್ಲೇ ರಸ್ತೆ ಬದಿಯಲ್ಲಿದ್ದ ಹುರುಳಿ ಸೆತ್ತೆ ತಿಂದು ಸಾಗುತ್ತಿದ್ದ ವೇಳೆ ಮಲಗಿದ್ದ ಸಿದ್ದರಾಜ ಶೆಟ್ಟಿ ಕೈ ತುಳಿದಿದ್ದು, ಕುತ್ತಿಗೆ ಭಾಗವನ್ನು ಗಾಯಗೊಳಿಸಿದೆ. ಈ ಸಂದರ್ಭ ಜೊತೆಯಲ್ಲಿದ್ದ ಮಹದೇವ ಶೆಟ್ಟಿ ಪಾರಾಗಿ ಚೀರಿಕೊಂಡಿದ್ದಾರೆ. ನಂತರ ಆನೆ ಹೆದರಿ ಓಡಿ ಹೋಗಿದೆ.
Related Articles
Advertisement