Advertisement

ಗುಂಡ್ಲುಪೇಟೆ : ಉಕ್ರೇನ್ ನಿಂದ ಸ್ವಗ್ರಾಮಕ್ಕೆ ಅಗಮಿಸಿ ಕಾವ್ಯ

07:23 PM Mar 06, 2022 | Team Udayavani |

ಗುಂಡ್ಲುಪೇಟೆ(ಚಾಮರಾಜನಗರ): ಉಕ್ರೇನ್ ನಲ್ಲಿ ವೈದ್ಯಕೀಯ ವಿದ್ಯಾಭ್ಯಾಸಕ್ಕೆ ತೆರಳಿದ್ದ ಬೇಗೂರು ಹೋಬಳಿಯ ಕಮರಹಳ್ಳಿ ಗ್ರಾಮದ ಕಾವ್ಯ ಭಾನುವಾರ ಮನೆಗೆ ಆಗಮಿಸಿದ್ದಾರೆ.

Advertisement

ಈ ಕುರಿತು ಉದಯವಾಣಿ ಜೊತೆಗೆ ಅನಿಸಿಕೆ ಹಂಚಿಕೊಂಡ ಕಾವ್ಯ, 9ರಿಂದ 10 ದಿನಗಳ ಕಾಲ ಖಾರ್ಕಿವ್ ನಗರದ ಬಂಕರ್ ವೊಂದರಲ್ಲಿದ್ದೆವು. ಆ ವೇಳೆ ಬಾಂಬ್ ಬ್ಲಾಸ್ಟಿಂಗ್ ಶಬ್ದ ಕೇಳಿಸುತ್ತಿತ್ತು. ಈ ಕಾರಣದಿಂದ ನಾವು ಹೊರಗೆ ಬರಲಿಲ್ಲ. ನಾವು ಇದ್ದ ಬಂಕರ್ ನಲ್ಲಿ ಆಹಾರ, ನೀರು ಸಿಗುತ್ತಿತ್ತು. ಮಾ.1ರಂದು ಇಂಡಿಯಾಗೆ ಬರಲು ವಿಮಾನ ಟಿಕೆಟ್ ಬುಕ್ ಮಾಡಿದ್ದೆ. ಆದರೆ ಫೆ.24ರಿಂದಲೇ ಯುದ್ಧ ಆರಂಭವಾಯಿತು. ಕಾಲೇಜಿನವರು ಯಾವುದೇ ರೀತಿಯ ಯುದ್ಧ ನಡೆಯುವುದಿಲ್ಲ ಎಂದು ತಿಳಿಸಿದ್ದರು. ಆ ಹಿನ್ನೆಲೆಯಲ್ಲಿ ನಾವು ಕಾಲೇಜಿಗೆ ಹೋಗುತ್ತಿದ್ದೆವು. ಅಲ್ಲಿನ ಸ್ಥಳೀಯರನ್ನು ವಿಚಾರಿಸಿದ್ದರೂ ಸಹ ಅವರೂ ಯುದ್ಧ ನಡೆಯುವುದಿಲ್ಲ 2014ರಿಂದ ಇದೇ ತರಹದ ಮಾತುಕತೆ ನಡೆಯುತ್ತಿದೆ ಎನ್ನುತ್ತಿದ್ದರು ಎಂದು ತಿಳಿಸಿದರು.

ಮೊದಲು ಖಾರ್ಕಿವ್ ನಲ್ಲಿ ಟ್ರೈನ್ ಹತ್ತಿ ನಾವು ಪೊಲ್ಯಾಂಡ್‍ಗೆ ಬಂದಿಳಿದೆವು. ನಂತರ ವಿಮಾನ ಮೂಲಕ ಬೆಂಗಳೂರಿಗೆ ಶನಿವಾರ ಮಧ್ಯರಾತ್ರಿ ಆಗಮಿಸಿ ಬೆಳಗ್ಗೆ 6 ಗಂಟೆ ಸುಮಾರಿಗೆ ಮನೆಗೆ ಬಂದೆವು ಎಂದು ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ : ಕುಂದಾಪುರ: ಕಾರು ಢಿಕ್ಕಿಯಾಗಿ ಸೈಕಲ್‌ ಸವಾರ ಸಾವು

ಕಾವ್ಯ ಮನೆಗೆ ಜಿಲ್ಲಾಧಿಕಾರಿ ಭೇಟಿ: ಉಕ್ರೇನ್ ನಲ್ಲಿ ವೈದ್ಯಕೀಯ ವಿದ್ಯಾಭ್ಯಾಸಕ್ಕೆ ತೆರಳಿದ್ದ ಬೇಗೂರು ಹೋಬಳಿಯ ಕಮರಹಳ್ಳಿ ಗ್ರಾಮದ ಕಾವ್ಯ ಭಾನುವಾರ ಬೆಳಗ್ಗೆ ಸ್ವಗ್ರಾಮಕ್ಕೆ ಮರಳಿದ ಸುದ್ದಿ ತಿಳಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಮನೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು. ಈ ವೇಳೆ ವಿದ್ಯಾರ್ಥಿನಿ ಕಾವ್ಯ ತಮ್ಮ ಅನುಭವ ಹಂಚಿಕೊಂಡರು.

Advertisement

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ಎಎಸ್ಪಿ ಸುಂದರ್ ರಾಜ್, ಉಪ ವಿಭಾಗ ಅಧಿಕಾರಿ ಗಿರೀಶ್, ಡಿವೈಎಸ್ಪಿ ಪ್ರಿಯದರ್ಶಿಣಿ ಸಾಣೆಕೊಪ್ಪ, ತಹಸೀಲ್ದಾರ್ ರವಿಶಂಕರ್, ಕುಟುಂಬದ ಸದಸ್ಯರಾದ ರವಿ, ಪ್ರಮೋದ, ತಾತ ವಿಜಯಕುಮಾರ ಮಾವ ರಾಜೇಶ್, ಸಂತೋಷ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next