ತಿ.ನರಸೀಪುರ: ನದಿಗೆ ಹಾರಿ ಯುವಕ ಹಾಗೂ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಕಪಿಲಾ ಸೇತುವೆ ಬಳಿ ನಡೆದಿದೆ.ಮೂಲತಃ ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ತಾಲೂಕಿನ ಲಕ್ಕೂರು ಗ್ರಾಮದ ಮಣಿಕಂಠ (28) ಹಾಗೂ ಅದೇ ತಾಲೂಕಿನ ಆಲಹಳ್ಳಿ ನಿವಾಸಿ ವಸಂತಾ (29) ಮೃತರು. ಇವರಿಬ್ಬರು ಸಂಬಂಧಿಗಳಾಗಿದ್ದರು.
ಮಣಿಕಂಠ ವಿವಾಹಿತರಾಗಿದ್ದು, ಮೈಸೂರಿನಲ್ಲಿ ಖಾಸಗಿ ಉದ್ಯೋಗಿಯಾಗಿ ದ್ದರು. ವಸಂತಾ ಸೋದರ ಸಂಬಂಧಿಯಾಗಿದ್ದು ಉದ್ಯೋಗ ಸಂದರ್ಶನಕ್ಕೆಂದು ಮೈಸೂರಿಗೆ ಬಂದು ಮಣಿಕಂಠರ ಮನೆಯಲ್ಲಿ ತಂಗಿದ್ದರು. ಶುಕ್ರವಾರ ಬೆಳಗ್ಗೆ ವಸಂತಾರನ್ನು ಮಣಿಕಂಠ ಸಂದರ್ಶನಕ್ಕೆಂದು ಕರೆದುಕೊಂಡು ಹೋಗಿದ್ದು, ಕಬಿನಿ ಸೇತುವೆ ಬಳಿ ಬೈಕ್ ನಿಲ್ಲಿಸಿ ನದಿಗೆ ಹಾರಿದ್ದರು ಎಂದು ತಿಳಿದು ಬಂದಿದೆ. ಆತ್ಮಹತ್ಯೆ ಬಗ್ಗೆ ಮಣಿಕಂಠನ ಪತ್ನಿ ಸಂಶಯ ವ್ಯಕ್ತಪಡಿಸಿ ದೂರು ನೀಡಿದ್ದಾರೆ.