Advertisement

ಭಾರೀ ಮಳೆಯಿಂದ ಗುಂಡಕರ್ಜಗಿ ರಸ್ತೆ ಹಾಳು

08:06 PM Sep 09, 2022 | Shwetha M |

ಮುದ್ದೇಬಿಹಾಳ: ಕಳೆದ ಎರಡು ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ಹಾನಿಯಾಗಿರುವ ಸಿದ್ದಾಪುರ ಪಿಟಿ- ಗುಂಡಕರ್ಜಗಿ ರಸ್ತೆಯನ್ನು ಪಿಡಬ್ಲ್ಯುಡಿ ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಗುರುವಾರ ಪರಿಶೀಲಿಸಿದರು.

Advertisement

ಈ ವೇಳೆ ರಸ್ತೆಯಲ್ಲಿ ಬಿದ್ದಿರುವ ತಗ್ಗುಗಳ ಆಳ ಪರಿಶೀಲಿಸಿ ಸಂಚಾರಕ್ಕೆ ಎಷ್ಟು ಅಪಾಯಕಾರಿಯಾಗಿದೆ ಎನ್ನುವ ಮಾಹಿತಿ ಸಂಗ್ರಹಿಸಿ ಮೇಲಧಿ ಕಾರಿಗಳಿಗೆ ವರದಿ ಸಲ್ಲಿಸಿದರು. ಈ ರಸ್ತೆಯ ಸೇತುವೆ ಕೆಳಭಾಗದಲ್ಲಿ ನೀರು ಹರಿದು ಹೋಗಲು ಹಾಕಿರುವ ಪೈಪ್‌ಗ್ಳು ಒಡೆದು ಹೋಗಿವೆ. ರಸ್ತೆ ಕೆಳಮಟ್ಟದಿಂದಲೂ ಆಂತರಿಕವಾಗಿ ನೀರು ಹರಿದು ಹೋಗುತ್ತಿದೆ. ಹೀಗಾಗಿ ಇಲ್ಲಿ ಮಳೆ ನೀರಿನ ಭೋರ್ಗರೆತ ಹೆಚ್ಚು ಸದ್ದು ಮಾಡುತ್ತಿದೆ.

ಆಕಸ್ಮಿಕವಾಗಿ ಯಾವುದೇ ವಾಹನ ರಸ್ತೆಯಲ್ಲಿ ಸಂಚರಿಸಿದರೆ ರಸ್ತೆ ಕುಸಿಯುವ ಅಪಾಯವಿದೆ ಎನ್ನುವುದನ್ನು ಮನವರಿಕೆ ಮಾಡಿಕೊಂಡರು. ಅಕ್ಕಪಕ್ಕದ ಗ್ರಾಮಗಳಿಗೆ ಮಾಹಿತಿ ರವಾನಿಸಿ ಈ ರಸ್ತೆಯಲ್ಲಿ ವಾಹನ ಸಂಚರಿಸದಂತೆ ಜಾಗ್ರತೆ ವಹಿಸಲು ಎಚ್ಚರಿಕೆ ಸಂದೇಶ ರವಾನಿಸಿದರು. ಇದಕ್ಕೂ ಮೊದಲೇ ಗ್ರಾಮದ ಕೆಲ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ರಸ್ತೆ ಸಂಪೂರ್ಣ ಹಾಳಾಗಿರುವ ಕುರಿತು, ಈ ರಸ್ತೆಯಲ್ಲಿ ಯಾರೂ ಸಂಚರಿಸದಂತೆ ವಿಡಿಯೋ, ಫೋಟೋ ಸಮೇತ ಮಾಹಿತಿ ಹಾಕುವ ಮೂಲಕ ಜಾಗೃತಿ ಮೂಡಿಸಿದ್ದರು.

ಸದ್ಯಕ್ಕೆ ತಾತ್ಕಾಲಿಕ ದುರಸ್ತಿ: ಈ ಕುರಿತು ಪತ್ರಿಕೆಯೊಂದಿಗೆ ಪಿಡಬ್ಲ್ಯುಡಿ ಎಇಇ ಆರ್‌.ಎಂ. ಹುಂಡೇಕಾರ ಮಾತನಾಡಿ, ರಸ್ತೆ ಸದ್ಯಕ್ಕೆ ದುರಸ್ತಿಪಡಿಸಲಾಗದಷ್ಟು ಹದಗೆಟ್ಟಿದೆ. ನೀರಿನ ಹರಿವು ನಿಂತ ಮೇಲೆ ತಾತ್ಕಾಲಿಕವಾಗಿ ದುರಸ್ತಿ ಮಾಡಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುತ್ತದೆ. ಆ ನಂತರ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಪ್ರಯತ್ನದಿಂದ ಕೆಬಿಜೆಎನ್ನೆಲ್‌ ವತಿಯಿಂದ ಮಂಜೂರಾಗಿರುವ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದು ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next