Advertisement

ಮಂಗಳೂರು ವಿಮಾನ ನಿಲ್ದಾಣಕ್ಕೆ ಗನ್‌ ಮೌಂಟೆಡ್‌ ಬುಲೆಟ್‌ ಪ್ರೂಫ್‌ ವಾಹನ

11:29 PM Jul 27, 2022 | Team Udayavani |

ಮಂಗಳೂರು : ಮಂಗಳೂರು ವಿಮಾನ ನಿಲ್ದಾಣದ ವತಿಯಿಂದ ಜು.26ರಂದು ಕಾರ್ಗಿಲ್‌ ವಿಜಯದಿವಸದ ಆಚರಣೆ ಭಾಗವಾಗಿ ಆಲ್ಲಿನ ಕೇಂದ್ರೀಯ ಕೈಗಾರಿಕಾ ದಳದ ಏವಿಯೇಶನ್‌ ಸೆಕ್ಯೂರಿಟಿ ಗ್ರೂಪ್‌ಗೆ ಬುಲೆಟ್‌ ನಿರೋಧಕ ವಾಹನವನ್ನು ಕೊಡುಗೆಯಾಗಿ ನೀಡಿದೆ.

Advertisement

ಈ ಕ್ರಮವನ್ನು ಶ್ಲಾಘಿಸಿದ ಚೆನ್ನೈಯ ಸಿಐಎಸ್‌ಎಫ್‌ ಡಿಐಜಿ (ಏರ್‌ಪೋರ್ಟ್‌) ಸೇತುರಾಮನ್‌ ಪೊನ್ನಿಯನ್‌ ಸೆಲ್ವನ್‌ ಅವರು, ಬುಲೆಟ್‌ ನಿರೋಧಕ ವಾಹನ ನೀಡಿರುವುದರಿಂದ ಇದೊಂದು ಚರಿತ್ರಾರ್ಹ ದಿನವಾಗುತ್ತದೆ, ತಮ್ಮ ಕರ್ತವ್ಯದ ವೇಳೆ ಮತ್ತಷ್ಟು ಧೈರ್ಯ, ಆತ್ಮವಿಶ್ವಾಸದಿಂದ ಕಾರ್ಯನಿರ್ವಹಿಸಲು ಇದು ನೆರವಾಗಲಿದೆ ಎಂದರು.

ಅತಿಸೂಕ್ಷ್ಮವಲ್ಲದ ವಿಮಾನ ನಿಲ್ದಾಣಗಳಲ್ಲೇ ಮಂಗಳೂರಿಗೆ ಮೊದಲ ಬಾರಿಗೆ ಈ ವಾಹನವನ್ನು ನೀಡಲಾಗುತ್ತಿದೆ. ಮುಂಬಯಿ, ಬೆಂಗಳೂರು, ದಿಲ್ಲಿ, ಹೈದರಾಬಾದ್‌ ವಿಮಾನ ನಿಲ್ದಾಣಗಳಲ್ಲಿ ಈಗಾಗಲೇ ಇಂತಹ ವಾಹನಗಳಿವೆ.

ಮಂಗಳೂರು ವಿಮಾನ ನಿಲ್ದಾಣವು ತನ್ನೆಲ್ಲ ಅಗತ್ಯವಿರುವ ಸೆಕ್ಯೂರಿಟಿ ಮಾನದಂಡಗಳನ್ನು ಪೂರೈಸುತ್ತಿದೆ, ಅದರಂತೆ ಸಿಐಎಸ್‌ಎಫ್‌ನ ಎಎಸ್‌ಜಿಯವರಿಗೆ ಆದ್ಯತೆ ನೀಡುವ ಮೂಲಕ ಅವರ ನೈತಿಕ ಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡಿದ್ದೇವೆ, ಲೈಟ್‌ ಮೆಷಿನ್‌ ಗನ್‌ ಮೌಂಟ್‌ ಮಾಡಲಾದ ಈ ವಾಹನವು ವಿಮಾನ ನಿಲ್ದಾಣಕ್ಕೆ ಹೆಚ್ಚಿನ ಭದ್ರತೆ ಒದಗಿಸಲಿದೆ ಎಂದು ವಿಮಾನ ನಿಲ್ದಾಣದ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next