ಹೊಸದಿಲ್ಲಿ: ಪಂಜಾಬ್ ನಲ್ಲಿ ಹಿಂಸಾಚಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಗವಂತ್ ಮಾನ್ ನೇತೃತ್ವದ ಆಪ್ ಸರಕಾರ ಇದುವರೆಗೆ ನೀಡಿರುವ ಶಸ್ತ್ರಾಸ್ತ್ರ ಪರವಾನಗಿಗಳನ್ನು ಮುಂದಿನ ಮೂರು ತಿಂಗಳೊಳಗೆ ಪರಿಶೀಲಿಸಲು ನಿರ್ಧರಿಸಿದೆ.
ಜಿಲ್ಲಾಧಿಕಾರಿಗಳು ಖುದ್ದಾಗಿ ಪರಿಶೀಲಿಸದ ಹೊರತು ಹೊಸ ಪರವಾನಗಿ ನೀಡುವುದನ್ನು ಸರ್ಕಾರ ನಿಷೇಧಿಸಿದೆ. ಕಳೆದ ಕೆಲವು ತಿಂಗಳುಗಳಿಂದ ಪಂಜಾಬ್ ರಾಜ್ಯದಲ್ಲಿ ಬಂದೂಕು ಕೇಂದ್ರಿತ ಹಿಂಸಾಚಾರದಲ್ಲಿ ಏರಿಕೆಯಾಗಿದೆ.
ಇದನ್ನೂ ಓದಿ:ಐಸಿಸಿ ಟಿ20 ವಿಶ್ವಕಪ್: ಸ್ಟೋಕ್ಸ್ ಹೀರೋಗಿರಿಗೆ ಇಂಗ್ಲೆಂಡ್ ಗೆ ಒಲಿಯಿತು ಚಾಂಪಿಯನ್ ಪಟ್ಟ
ಬಂದೂಕುಗಳ ಸಾರ್ವಜನಿಕ ಪ್ರದರ್ಶನದ ಮೇಲೆ ಸಂಪೂರ್ಣ ನಿಷೇಧವು ನಿರ್ಧಾರದ ಭಾಗವಾಗಿದೆ.
Related Articles
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿ ಆಪ್ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ತೀವ್ರ ವಾಗ್ದಾಳಿ ನಡೆಸುತ್ತಿದೆ.