Advertisement

ಹೊಟೇಲ್‌ನಲ್ಲಿ “ಗುಂಡು ಹಾರಾಟ’: ಮೂವರಿಗಾಗಿ ಶೋಧ

12:49 AM Nov 01, 2020 | sudhir |

ಮಂಗಳೂರು: ಫ‌ಳ್ನೀರ್‌ನ ಹೊಟೇಲ್‌ನಲ್ಲಿ ಶುಕ್ರವಾರ ನಡೆದಿದ್ದ ದಾಂಧಲೆ, “ಗುಂಡು ಹಾರಾಟ’ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಪರಾರಿಯಾಗಿರುವ ಮೂವರು ಪ್ರಮುಖ ಆರೋಪಿಗಳಿಗೆ ಶೋಧ ಕಾರ್ಯ ಮುಂದುವರೆಸಿದ್ದಾರೆ.

Advertisement

ಒಟ್ಟು 5 ಮಂದಿ ಹೊಟೇಲ್‌ಗೆ ಗ್ರಾಹಕರಾಗಿ ಬಂದು ಹೊಟೇಲ್‌ ಸಿಬಂದಿ ಜತೆ ತಗಾದೆ ತೆಗೆದು ಅನಂತರ ದಾಂಧಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಜುನೈದ್‌ ಮತ್ತು ಇಝಾಜ್‌ನನ್ನು ಸೆರೆ ಹಿಡಿಯಲಾಗಿತ್ತು. ಈ ಸಂದರ್ಭ ಆರೋಪಿಗಳು ಏರ್‌ಗನ್‌ ಮಾದರಿಯಿಂದ ಗುಂಡು ಹಾರಿಸಿದ್ದರು. ಪರಿಣಾಮ ಹೊಟೇಲ್‌ ಸಿಬಂದಿ ಸಾಹಿಲ್‌ ಅವರ ತೊಡೆಗೆ ಗುಂಡು ತಗಲಿತ್ತು. ದಾಂಧಲೆ ವೇಳೆ ಮೂವರು ಸಿಬಂದಿಗೆ ಸಣ್ಣಪುಟ್ಟ ಗಾಯಗಳಾಗಿತ್ತು.

ಕ್ರಿಮಿನಲ್‌ ಹಿನ್ನೆಲೆಯವರು
ಉಳ್ಳಾಲ ನಿವಾಸಿ ಸಮೀರ್‌, ಸಿದ್ದಿಕ್‌ ಮತ್ತು ಅಫ್ರಾನ್‌ ತಪ್ಪಿಸಿಕೊಂಡ ವರು. ಇವರು ಕ್ರಿಮಿನಲ್‌ ಹಿನ್ನೆಲೆಯ ವರಾಗಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಆದರೆ, ಘಟನೆಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಆರೋಪಿಗಳೊಂದಿಗೆ ನಮಗೆ ದ್ವೇಷ ಇರಲಿಲ್ಲ ಎಂದು ಹೊಟೇಲ್‌ ಮಾಲಕರು ಹೇಳಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಅದಾನಿ ಸಮೂಹ ಸಂಸ್ಥೆಗೆ ಮಂಗಳೂರು ವಿಮಾನ ನಿಲ್ದಾಣ ಹಸ್ತಾಂತರ

ವಿಶೇಷ ತಂಡ ರಚನೆ
ಏರ್‌ಗನ್‌ ಅಥವಾ ರಿವಾಲ್ವರ್‌ ಬಳಸಲಾಗಿದೆಯೇ ಎನ್ನುವುದು ಇನ್ನೂ ಖಚಿತವಾಗಿಲ್ಲ. ತಜ್ಞರ ವರದಿಗೆ ಕಾಯುತ್ತಿದ್ದೇವೆ. ತನಿಖೆಗೆ ವಿಶೇಷ ತಂಡ ರಚಿಸಿದ್ದೇವೆ’ಎಂದು ಪೊಲೀಸ್‌ ಆಯುಕ್ತ ಡಾ| ವಿಕಾಸ್‌ ಕುಮಾರ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next