Advertisement

ಬಂದೂಕು ಠೇವಣಿ: ರೈತರ ಮನವಿಗೆ ಜಿಲ್ಲಾಧಿಕಾರಿ ಸ್ಪಂದನೆ

01:00 AM Mar 12, 2019 | Harsha Rao |

ಉಡುಪಿ: ಚುನಾವಣೆ ಸಂದರ್ಭದಲ್ಲಿ ರೈತರು ಪರವಾನಿಗೆ ಹೊಂದಿರುವ ಬಂದೂಕನ್ನು ಪೊಲೀಸ್‌ ಠಾಣೆಯಲ್ಲಿ ಠೇವಣಿ ಮಾಡುವಂತೆ ತಿಳಿಸಿದ ಜಿಲ್ಲಾಡಳಿತವು ಈಗ ರೈತರ ಮನವಿಗೆ ಸ್ಪಂದಿಸಿ ರಿಯಾಯಿತಿ ನೀಡುವ ಭರವಸೆ ನೀಡಿದೆ.

Advertisement

ಚುನಾವಣೆಗೆ ಒಂದೂವರೆ ತಿಂಗಳುಗಳ ಮೊದಲೇ ಬಂದೂಕನ್ನು ಠೇವಣಿ ಮಾಡಿಸಿಕೊಳ್ಳಲಾಗುತ್ತಿತ್ತು. ಫ‌ಲಿತಾಂಶ ಘೋಷಣೆಯ 15 ದಿನದ ಅನಂತರ ಹಿಂಪಡೆಯುವಂತೆ ತಿಳಿಸಲಾ ಗುತ್ತಿದೆ. ಆ ಕಾರಣಕ್ಕೆ ರೈತರು ತಮ್ಮ ಬಂದೂಕನ್ನು 3ರಿಂದ 4 ತಿಂಗಳ‌ ಕಾಲ ಪೋಲೀಸ್‌ ಠಾಣೆಯಲ್ಲಿಡಬೇಕಾಗಿದೆ. ಇದರಿಂದ ರೈತರ ಬೆಳೆದು ನಿಂತ ಫ‌ಸಲನ್ನು ಕಾಡುಪ್ರಾಣಿಗಳಿಂದ ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ. ಆದ್ದರಿಂದ ರಿಯಾಯಿತಿ ನೀಡುವಂತೆ ಜಿಲ್ಲಾ ಭಾರತೀಯ ಕಿಸಾನ್‌ ಸಂಘ ಈಗಾಗಲೇ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿತ್ತು. ಸೋಮವಾರ ಪುನಃ ಸಂಘದ ನಿಯೋಗ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಅದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಯವರು, ಎಸ್‌ಪಿಯವರಿಂದ ಆ ಬಗ್ಗೆ ಅಭಿಪ್ರಾಯ ಪಡೆದು ಕೂಡಲೇ ಆದೇಶಿಸುವುದಾಗಿ ನಿಯೋಗಕ್ಕೆ ಭರವಸೆ ನೀಡಿದರು ಎಂದು ಸಂಘದ ಪ್ರಕಟನೆ ತಿಳಿಸಿದೆ.

ಸಂಘದ ನಿಯೋಗದಲ್ಲಿ ಪದಾಧಿಕಾರಿಗಳಾದ ರಾಮಚಂದ್ರ ಅಲ್ಸೆ,  ಸತ್ಯನಾರಾಯಣ ಉಡುಪ,  ವಿಶ್ವನಾಥ ಶೆಟ್ಟಿ, ಸೀತಾರಾಮ ಗಾಣಿಗ, ಆಸ್ತೀಕ ಶಾಸಿŒ, ಮತ್ತು ಪ್ರಾಣೆಶ್‌ ಯಡಿಯಾಳ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next