Advertisement

ಗುಮ್ಮ ಬಂದ ಗುಮ್ಮ! ‘ವಿಕ್ರಾಂತ್‌ ರೋಣ’ಮತ್ತೊಂದು ಹಾಡು ಬಂತು

11:22 AM Jul 22, 2022 | Team Udayavani |

ಕಿಚ್ಚ ಸುದೀಪ್‌ ನಟನೆಯ “ವಿಕ್ರಾಂತ್‌ ರೋಣ’ ಚಿತ್ರದ ಹವಾ ಎಲ್ಲೆಡೆ ಜೋರಾಗಿ ಎದ್ದಿದೆ. ಕೇವಲ ಕನ್ನಡವಷ್ಟೇ ಅಲ್ಲದೇ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲೂ ಈ ಸಿನಿಮಾ ಮೇಲೆ ದೊಡ್ಡ ನಿರೀಕ್ಷೆ ಇದೆ.

Advertisement

ಈಗಾಗಲೇ “ರಕ್ಕಮ್ಮ’ ಹಾಡಿನ ಮೂಲಕ ಸಖತ್‌ ಸೌಂಡ್‌ ಮಾಡಿದ್ದ, “ವಿಕ್ರಾಂತ್‌ ರೋಣ’ ಚಿತ್ರ ಆ ನಂತರ ತನ್ನ ಟ್ರೇಲರ್‌ ಮೂಲಕ ಗಮನ ಸೆಳೆದಿತ್ತು. ಈಗ ಚಿತ್ರದ ಮತ್ತೂಂದು ಹಾಡು ಬಿಡುಗಡೆಯಾಗಿ ಹಿಟ್‌ಲಿಸ್ಟ್‌ ಸೇರಿದೆ. ಅದು “ಗುಮ್ಮ ಬಂದ ಗುಮ್ಮ..’

ಹೌದು, “ವಿಕ್ರಾಂತ್‌ ರೋಣ’ ಚಿತ್ರದ “ಗುಮ್ಮ ಬಂದ ಗುಮ್ಮ’ ಹಾಡು ಬಿಡುಗಡೆಯಾಗಿ, ಕೇಳುಗರಿಂದ ಮೆಚ್ಚುಗೆ ಪಡೆಯುತ್ತಿದೆ. ಈ ಹಾಡನ್ನು ಚಿತ್ರದಲ್ಲಿ ವಿಭಿನ್ನ ಚಿತ್ರಿಸಲಾಗಿದೆಯಂತೆ. ಚಿತ್ರದ ಒಂದೊಂದು ಹಾಡು ಕೂಡಾ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚು ಮಾಡುತ್ತಿರುವುದು ಸುಳ್ಳಲ್ಲ. ಸಖತ್‌ ರಗಡ್‌ ಅಂಶಗಳೊಂದಿಗೆ “ಗುಮ್ಮ ಬಂದ ಗುಮ್ಮ’ ಹೊರಬಂದಿದೆ.

ಅಜನೀಶ್‌ ಲೋಕನಾಥ್‌ ಸಂಗೀತದಲ್ಲಿ ಈ ಹಾಡು ಮೂಡಿಬಂದಿದೆ. “ರಾತ್ರಿ ಕುದುರೆ ಬೆನ್ನ ಏರಿ, ಬಿಸೋ ಗಾಳಿ, ಜೊತೆಗೆ ಸೇರಿ ಕತ್ತಲಲ್ಲಿ ಕಳ್ಳನಂತೆ ಬೇಟೆಯಾಡುವ ಬಿಲ್ವನಂತೆ… ಎಂದು ಆರಂಭವಾಗುವ ಈ ಹಾಡಿಗೆ ಅನೂಪ್‌ ಭಂಡಾರಿ ಸಾಹಿತ್ಯವಿದೆ.

ಇನ್ನು, ಚಿತ್ರ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿರುವುದರಿಂದ ಬೇರೆ ಬೇರೆ ಭಾಷೆಗಳಲ್ಲಿ ಅಲ್ಲಿನ ನಟರು ಈ ಚಿತ್ರಕ್ಕೆ ಸಾಥ್‌ ನೀಡುತ್ತಿದ್ದಾರೆ. “ವಿಕ್ರಾಂತ್‌ ರೋಣ’ ಚಿತ್ರದ ಮಲಯಾಳಂ ರಿಲೀಸ್‌ಗೆ ಖ್ಯಾತ ನಟ ದುಲ್ಕರ್‌ ಸಲ್ಮಾನ್‌ ಮುಂದೆ ಬಂದಿದ್ದು, ಅವರ ವೇಫ‌ರೆರ್‌ ಫಿಲಂಸ್‌ನಡಿ ಚಿತ್ರ ಬಿಡುಗಡೆ ಮಾಡುತ್ತಿದ್ದಾರೆ. ಈ ಮೂಲಕ ಮೂಲ ಕನ್ನಡ ಸಿನಿಮಾವೊಂದಕ್ಕೆ ದುಲ್ಕರ್‌ ಸಾಥ್‌ ನೀಡಿದಂತಾಗುತ್ತದೆ.

Advertisement

ಇನ್ನು ಚಿತ್ರದ ತಮಿಳು ಅವತರಣಿಕೆಯನ್ನು ಜೀ ಸ್ಟುಡಿಯೋಸ್‌, ತೆಲುಗು ರಿಲೀಸ್‌ಗೆ ಕಾಸ್ಮೋಸ್‌ಎಂಟರ್‌ಟೈನ್ಮೆಂಟ್‌ ಹಾಗೂ ಕೆಎಫ್ಸಿ ಸಾಥ್‌ ನೀಡುತ್ತಿದೆ. ಇನ್ನು, ಕನ್ನಡ ವರ್ಶನ್‌ ವಿತರಣೆ ಜಾಕ್‌ ಮಂಜು ಅವರ ಶಾಲಿನಿ ಆರ್ಟ್ಸ್ ಮೂಲಕ ಬಿಡುಗಡೆಯಾಗುತ್ತಿದೆ. ಇದರ ಜೊತೆಗೆ ಚಿತ್ರದ ವಿದೇಶಿ ಬಿಡುಗಡೆ ಹಕ್ಕನ್ನು 128 ಮೀಡಿಯಾ ಪಡೆದುಕೊಂಡಿದೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next