Advertisement

Health Tips:ಹಲ್ಲಿನ ವಸಡುಗಳ ರಕ್ತಸ್ರಾವ ಸಮಸ್ಯೆಗೆ ಇಲ್ಲಿವೆ ಸರಳ ಮನೆಮದ್ದು…

10:46 AM Jan 25, 2023 | Team Udayavani |

ದೇಹದ ಆರೋಗ್ಯವು ಪ್ರತಿಯೊಬ್ಬರ ವೈಯಕ್ತಿಕ ಹಾಗೂ ಸಾಮಾಜಿಕ ಜೀವನದ ಮೇಲೆ ಬಹುದೊಡ್ಡ ಪರಿಣಾಮವನ್ನು ಬೀರುತ್ತದೆ. ನಾವು ಆರೋಗ್ಯವಂತರಾಗಿದ್ದಾಗ ಮಾತ್ರ ನಮ್ಮ ಎಲ್ಲಾ ಕೆಲಸ ಕಾರ್ಯಗಳು ಅಚ್ಚುಕಟ್ಟಾಗಿ ನಡೆಯಲು ಸಾಧ್ಯ. ಹಾಗೆಂದ ಮಾತ್ರಕ್ಕೆ  ದೇಹದ ಕೆಲವೇ ಅಂಗಗಳ ಆರೋಗ್ಯದಿಂದ ಮಾತ್ರ ಇದು ಸಾಧ‍್ಯವಿಲ್ಲ.

Advertisement

ದೇಹದ ಪ್ರತಿಯೊಂದು ಅಂಗಗಳ ಆರೋಗ್ಯದಂತೆ ಹಲ್ಲು ಮತ್ತು ವಸಡುಗಳ ಆರೋಗ್ಯವೂ ಅತ್ಯಂತ ಪ್ರಮುಖವಾದದ್ದು, ನಾವು ಸೇವಿಸುವ ಪ್ರತಿಯೊಂದು ಆಹಾರವನ್ನು ಅಗಿದು ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುವ ಹಲ್ಲುಗಳು ಮತ್ತು ವಸಡುಗಳನ್ನು ಆರೋಗ್ಯವಂತವಾಗಿಟ್ಟುಕೊಳ್ಳುವುದು ಅತಿ ಮುಖ್ಯ.

ಸಾಮಾನ್ಯವಾಗಿ ಹಲ್ಲು ಹುಳುಕು, ವಸಡುಗಳಲ್ಲಿ ನೋವು ಒಳಗೊಂಡಂತೆ ಹಲವರನ್ನು ಕಾಡುವ ಸಮಸ್ಯೆಗಳಲ್ಲಿ ಜಿಂಗೈವಿಟಿಸ್ ಕೂಡಾ ಒಂದು. ವಸಡುಗಳು ಊದಿಕೊಳ್ಳುವುದು, ಕೆಂಪಗಾಗುವುದು, ನೋವು ಕಾಣಿಸಿಕೊಳ್ಳುವುದು ಈ ಸಮಸ್ಯೆಯ ಪ್ರಥಮ ಹಂತವಾಗಿದೆ. ಜಿಂಗೈವಿಟಿಸ್ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಹಲವಾರು ಮನೆ ಮದ್ದುಗಳು ರಾಮಬಾಣದಂತೆ ಕಾರ್ಯ ನಿರ್ವಹಿಸುತ್ತದೆ.

ಜಿಂಗೈವಿಟಿಸ್ ನ ಲಕ್ಷಣಗಳು

ಜಿಂಗೈವಿಟಿಸ್ ಸಮಸ್ಯೆ ಎದುರಿಸುವವರಲ್ಲಿ ಹಲ್ಲುಜ್ಜುವಾಗ ಒಸಡುಗಳಲ್ಲಿ ರಕ್ತಸ್ರಾವ ಆಗುವಂತದ್ದು, ಒಸಡುಗಳು ಊದಿಕೊಳ್ಳುವಂತದ್ದು, ಹಲ್ಲು ಮತ್ತು ವಸಡುಗಳಲ್ಲಿ ಕೀವು ತುಂಬಿಕೊಳ್ಳುವುದು, ಬಾಯಿಂದ ಕೆಟ್ಟ ವಾಸನೆ ಬರುವುದು ಮುಂತಾದ ಲಕ್ಷಣಗಳನ್ನು ಕಾಣಬಹುದಾಗಿದೆ.

Advertisement

ಹಲ್ಲಿನ ವಸಡುಗಳ ಪರಿಹಾರಕ್ಕೆ ಮನೆಮದ್ದುಗಳು :

ತೆಂಗಿನ ಎಣ್ಣೆ

ತೆಂಗಿನ ಎಣ್ಣೆಯಲ್ಲಿ ದೇಹವನ್ನು ಬಾಧಿಸುವ ಹಲವಾರು ವಿಧವಾದ  ಸೋಂಕನ್ನು  ಪರಿಹರಿಸುವ ನೈಸರ್ಗಿಕ ಅಂಶಗಳಿದ್ದು, ವಸಡುಗಳ ಸಮಸ್ಯೆಯ ಪರಿಹಾರಕ್ಕೆ ರಾಮಬಾಣವಾಗಿ ಕಾರ್ಯನಿರ್ವಹಿಸುತ್ತದೆ. ಸ್ಪಲ್ಪ  ತೆಂಗಿನ ಎಣ್ಣೆಯನ್ನು ತೆಗೆದುಕೊಂಡು ಬಾಯಲ್ಲಿ ಹಾಕಿ ಮುಕ್ಕಳಿಸಿ ಸುಮಾರು ಅರ್ಧ ಘಂಟೆಯ ವರೆಗೆ ಹಾಗೆ ಬಿಡಿ . ಇದರಿಂದ ವಸಡಿನ ಸಮಸ್ಯೆಗಳು ಪರಿಹಾರವಾಗುತ್ತದೆ.

ಅರಶಿನ

ಪ್ರಾಚೀನ ಕಾಲದಿಂದಲೂ ಅರಶಿನವನ್ನು ರೋಗ ನಿರೋಧಕವಾಗಿ ಬಳಕೆ ಮಾಡಲಾಗುತ್ತಿದ್ದು, ವಸಡುಗಳ ಸಮಸ್ಯೆಗೆ ಇದು ಅತ್ಯಂತ ಉಪಯುಕ್ತ ಔಷಧವಾಗಿ ಕಾರ್ಯ ನಿರ್ವಹಿಸುತ್ತದೆ. ಅರಶಿನದಲ್ಲಿರುವ ಕರ್ಕ್ಯೂಮಿನ್ , ಆ್ಯಂಟಿ ಇನ್ಫಾಮೇಟ್ರಿ ಹಾಗೂ ಆ್ಯಂಟಿ ಫಂಗಲ್ ಗುಣ ವಸಡುಗಳ ಸಮಸ್ಯೆಗೆ ಉತ್ತಮ  ಔಷಧವಾಗಿ ಕಾರ್ಯನಿರ್ವಹಿಸುತ್ತದೆ. ವಸಡಿನ ಸಮಸ್ಯೆ ಇರುವವರು ಅರಶಿವನ್ನು ಲೇಪಿಸಿ, ಸ್ವಲ್ಪ ಸಮಯದ ಬಳಿಕ ತಣ್ಣಿರಿನಲ್ಲಿ ತೊಳೆಯಬೇಕು. ವಾರದಲ್ಲಿ ಕನಿಷ್ಟ ಎರಡು ಬಾರಿ ಹೀಗೆ ಮಾಡುವುದರಿಂದ ಸಮಸ್ಯೆ ಪರಿಹಾರವಾಗುತ್ತದೆ.

ಉಪ್ಪು ನೀರಿನ ಬಳಕೆ

ಉಪ್ಪಿನಲ್ಲಿ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುವ ಗುಣವಿದ್ದು, ಇದು ಆ್ಯಂಟಿ ಫಂಗಲ್ ಆಗಿಯೂ ಕಾರ್ಯ ನಿರ್ವಹಿಸುತ್ತದೆ. ಬೆಚ್ಚಗಿನ ನೀರಿಗೆ ಸ್ಪಲ್ಪ ಉಪ್ಪನ್ನು ಬೆರಸಿ ಗಾರ್ಗಲ್ ಮಾಡುವುದರಿಂದ ಹಲ್ಲಿಗೆ ಸಂಬಂಧಿಸಿದ ಎಲ್ಲಾ ವಿಧವಾದ ಸಮಸ್ಯೆಗಳಿಂದ ಪರಿಣಾಮಕಾರಿಯಾದ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.

ಅಲೋವೆರಾ ಬಳಕೆ

ನೈಸರ್ಗಿಕವಾಗಿ ದೊರಕುವ ಅಲೋವರದಲ್ಲಿ  ಆ್ಯಂಟಿಸೆಪ್ಟಿಕ್, ಆ್ಯಂಟಿ ಫಂಗಲ್, ಆ್ಯಂಟಿ ಬ್ಯಾಕ್ಟೀರಿಯಲ್ ಅಂಶಗಳಿದ್ದು, ವಸಡುಗಳ ಸಮಸ್ಯೆ ಇರುವವರು ಇದನ್ನು ಮಾಸಾಜ್ ಮಾಡುವುದರಿಂದ ತಂಪಿನ ಅನುಭವವನ್ನು ನೀಡುತ್ತದೆ. ಮತ್ತು ಸಮಸ್ಯೆಯಿಂದ ಪರಿಹಾರವನ್ನು ಕಂಡುಕೊಳ್ಳಲು ಸಹಾಯಕವಾಗುತ್ತದೆ.

ಲವಂಗ ಬಳಕೆ

ಹಲ್ಲುಗಳ ಹಲವಾರು ಸಮಸ್ಯೆಗಳಿಗೆ ಲವಂಗ ಅತ್ಯಂತ ಉತ್ತಮ ಔಷಧವಾಗಿದ್ದು, ಇದರಲ್ಲಿ ಆ್ಯಂಟಿ ಫಂಗಲ್, ಆ್ಯಂಟಿ ಬ್ಯಾಕ್ಟೀರಿಯಲ್ ಅಂಶಗಳು ಇದೆ. ಹಲ್ಲು ನೋವು ಹಾಗೂ ವಸಡುಗಳಲ್ಲಿ ಕಂಡುಬರುವ ಸಮಸ್ಯೆಗಳಿಗೆ ಇದು ಪರಿಹಾರವಾಗಿ ಕಾರ್ಯನಿರ್ವಹಿಸುತ್ತದೆ. ಲವಂಗವನ್ನು ಚೆನ್ನಾಗಿ ಪುಡಿ ಮಾಡಿ ಅದಕ್ಕೆ ಸ್ಪಲ್ಪ ಜೇನು ತುಪ್ಪವನ್ನು ಬೆರಸಿ ಪೇಸ್ಟ್ ಮಾಡಿಕೊಳ್ಳಿ. ಈ ಮಿಶ್ರಣವನ್ನು ಊದಿಕೊಂಡ ವಸಡುಗಳಿಗೆ ಹಚ್ಚುವುದರಿಂದ ಸಮಸ್ಯೆ ಬಹುಬೇಗ ನಿವಾರಣೆಯಾಗುತ್ತದೆ.

ಸೀಬೆ ಎಲೆ

ಸೀಬೆ ಎಲೆಯನ್ನು ಸಾಮಾನ್ಯವಾಗಿ ಹಲ್ಲು ನೋವಿನಿಂದ ಬಳಲುತ್ತಿರುವವರು ಬಳಸುತ್ತಾರೆ. ಇದರಲ್ಲಿ ಇರುವ ನೈಸರ್ಗಿಕ ಅಂಶ ವಸಡುಗಳಲ್ಲಿ ಕಂಡುಬರುವ ರಕ್ತ ಸ್ರಾವ ಹಾಗೂ ಇತರೆ ಸಮಸ್ಯೆಗಳಿಂದ ಪರಿಹಾರವನ್ನು ಒದಗಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next