Advertisement

ಕೊಲ್ಲಿ ಉದ್ಯಮಿಯ ಕೊ*ಲೆ ಪ್ರಕರಣ: ಆರೋಪಿಗಳು ಕಳವುಗೈದ 29 ಪವನ್‌ ಚಿನ್ನಾಭರಣ ವಶಕ್ಕೆ

11:56 PM Dec 06, 2024 | Team Udayavani |

ಕಾಸರಗೋಡು: ಕೊಲ್ಲಿ ಉದ್ಯಮಿ ಬೇಕಲ ಪೂಚಕ್ಕಾಡ್‌ ಫಾರೂಕಿ ಮಸೀದಿ ಸಮೀಪದ ಬೈತುಲ್‌ ಮಂಜಿಲ್‌ನ ಎಂ.ಸಿ. ಅಬ್ದುಲ್‌ ಗಫೂರ್‌ ಹಾಜಿ (55) ಅವರನ್ನು ಕೊಲೆಗೈದು 596 ಪವನ್‌ ಚಿನ್ನಾಭರಣ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಕ್ರೈಂಬ್ರಾಂಚ್‌ ತನಿಖೆಯನ್ನು ತೀವ್ರಗೊಳಿಸಿದ್ದು, ಕಾಸರಗೋಡು ಹಳೆ ಬಸ್‌ ನಿಲ್ದಾಣ ಪರಿಸರದ ಜುವೆಲರಿಯೊಂದರಿಂದ 29 ಪವನ್‌ ಚಿನ್ನಾಭರಣವನ್ನು ವಶಪಡಿಸಿಕೊಂಡಿದೆ.

Advertisement

ಉಳಿದ ಚಿನ್ನವನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ಕೊಲೆ ಹಾಗೂ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಪೊಲೀಸರು ಬಂಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next