Advertisement

ಅಭಿವೃದ್ಧಿಗೆ ಕಟ್ಟುನಿಟ್ಟಿನ ಕ್ರಮ: ತಹಶೀಲ್ದಾರ್‌ ಇಂಗಳೆ 

11:59 AM Mar 23, 2019 | |

ಗುಳೇದಗುಡ್ಡ: ರಾಜ್ಯ ಲೋಕಾಯುಕ್ತರ ಆದೇಶದ ಪ್ರಕಾರ ಜಿಪಂ ಇಂಜನೀಯರಿಂಗ್‌ ಇಲಾಖೆಯ ಪತ್ರದನ್ವಯ ತಾಲೂಕಿನ ಕೆರೆಗಳ ಅಭಿವೃದ್ಧಿಗಾಗಿ ಹಾಗೂ ಅವುಗಳ ಮಾಲಿನ್ಯ ನಿಯಂತ್ರಣಕ್ಕಾಗಿ ಸಮೀಪದ ಕೆಲವಡಿ, ತಿಮ್ಮಸಾಗರ ಗ್ರಾಮದ ಕೆರೆಗಳಿಗೆ ಶುಕ್ರವಾರ ತಹಶೀಲ್ದಾರ್‌ ಎಸ್‌.ಎಸ್‌. ಇಂಗಳೆ ಭೇಟಿ ನೀಡಿ ಪರಿಶೀಲಿಸಿದರು.

Advertisement

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಲೋಕಾಯುಕ್ತರ ಆದೇಶದ ಜಿಲ್ಲಾ ಜಿಪಂ ಇಲಾಖಾ ನಿರ್ದೇಶನದಂತೆ ತಾಲೂಕಿನ ಕೆರೆಗಳ ಮಾಲಿನ್ಯ ತಡೆಗೆ ಹಾಗೂ ಅವುಗಳ ಸಮಗ್ರ ಅಭಿವೃದ್ಧಿಗೆ ಕಟ್ಟುನಿಟ್ಟಿನ ಕ್ರಮಕ್ಕೆ ಕೆರೆಗಳ ವೀಕ್ಷಣೆ ಮಾಡಲಾಗುತ್ತಿದೆ. ಕೆರೆಗಳ ಒತ್ತುವರಿ, ಮಾಲಿನ್ಯ ನಿರ್ಮೂಲನೆಯ ಮುಂಜಾಗ್ರತಾ ಕ್ರಮವಾಗಿ ಕೆರೆಗಳನ್ನು ವೀಕ್ಷಿಸಿ ಮೇಲಧಿಕಾರಿಗಳಿಗೆ ಕ್ರಮಕ್ಕಾಗಿ ವರದಿ ಸಲ್ಲಿಸಲಾಗುವುದು ಎಂದರು. ಕೆಲವಡಿಯ 17 ಎಕರೆ, ತಿಮ್ಮಸಾಗರದ 9 ಎಕರೆ ಭೂಮಿಯಲ್ಲಿ ವಿಶಾಲವಾಗಿ ಕೆರೆಗಳಿದ್ದೂ ಅವುಗಳು ಒತ್ತುವರಿ ನಿಯಂತ್ರಿಸಲು ಗಡಿ ನಿರ್ಧರಿಸುವ ಕಾರ್ಯ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್‌ ಎಸ್‌.ಎಸ್‌.ಇಂಗಳೆ ಹೇಳಿದರು.

ನೀರಿನ ಸಂಪ್‌ಗೆ ಸ್ಥಳ ವೀಕ್ಷಣೆ: ಇದೇ ಸಂದರ್ಭದಲ್ಲಿ ಲಿಂಗಾಪುರ, ತಿಮ್ಮಸಾಗರ ಹಾಗೂ ಗುಳೇದಗುಡ್ಡ ರೈಲು ನಿಲ್ದಾಣದ ಗ್ರಾಮಸ್ಥರಿಗೆ ನೀರು ಪೂರೈಸಲು ಸಂಪ್‌ ನಿರ್ಮಾಣದ ಸಲುವಾಗಿ ಜಾಗೆಯನ್ನು ತಹಶೀಲ್ದಾರ್‌ ಎಸ್‌.ಎಸ್‌.ಇಂಗಳೆ ವೀಕ್ಷಣೆ ಮಾಡಿದರು. ಲಿಂಗಾಪುರ, ತಿಮ್ಮಸಾಗರ ಹಾಗೂ ಗುಳೇದಗುಡ್ಡ ರೈಲು ನಿಲ್ದಾಣದ ಜನವಸತಿಗಳಿಗೆ ನೀರನ್ನು ಟ್ಯಾಂಕರ್‌ ಮೂಲಕ ನೀಡಲಾಗುತ್ತಿದೆ. ಈ ಸ್ಥಳಗಳಿಗೆ ನೀರು ಪೈಪ್‌ಲೈನ್‌ ಮೂಲಕ ನೀರು ಏರುತ್ತಿಲ್ಲ. ಹೀಗಾಗಿ ಈ ಗ್ರಾಮಗಳ ಮಾರ್ಗ ಮಧ್ಯದಲ್ಲಿ ಭೂಮಿಯಲ್ಲಿ ನೀರಿನ ಸಂಗ್ರಹದ ಸಂಪ್‌(ಅಂಡರ್‌ ಗ್ರೌಂಡ್‌ ಟ್ಯಾಂಕ್‌) ನಿಮಾರ್ಣ ಮಾಡಲಾಗುವುದು. ಅದಕ್ಕಾಗಿ ಲಿಂಗಾಪುರ-ತಿಮ್ಮಸಾಗರ ಗ್ರಾಮಗಳ ಮಧ್ಯ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ. ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಭೀಮಪ್ಪ ಲಾಳಿ, ಎಸ್‌.ಎಚ್‌.ರಾಮಗಿರಿ, ಪಿಡಿಒ ಜಿ.ಎಂ.ಕಾಳಗಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next