Advertisement
ಆಲಮಟ್ಟಿಯಿಂದ ಗುಳೇದಗುಡ್ಡ ಪುರಸಭೆ ಹಾಗೂ ಅಮೀನಗಡ, ಕಮತಗಿ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಈ ಜಾಕವೆಲ್ ಮೂರು ಪಟ್ಟಣಗಳ ಸ್ಥಳೀಯ ಸಂಸ್ಥೆಗೆ ಬರುತ್ತದೆ. ಮೂರು ದಿನಗಳಿಂದ ನೀರು ಬರದ ಕಾರಣ ನೀರಿಗಾಗಿ ಜನರು ನಿತ್ಯ ಸರದಿಯಲ್ಲಿ ನಿಲ್ಲುವಂತಾಗಿದೆ.
ಅಧಿಕಾರಿಗಳು ತಿಳಿಸಿದ್ದಾರೆ. ಆಲಮಟ್ಟಿ ಜಾಕವೆಲ್‌ನಲ್ಲಿ ಒಂದು ಮೋಟಾರ್ ರಿಪೇರಿಗೆ ಬಂದರೂ ಇನ್ನೊಂದು ಮೋಟಾರ್ ಕಾಯ್ದಿರಿಸಲಾಗಿದೆ. ಆದರೆ, ಆ ಮೋಟಾರ್‌ನ್ನು ಒಂದು ತಿಂಗಳಿಂದ ದುರಸ್ತಿ ಮಾಡಿಸಲು ಮುಂದಾಗಿಲ್ಲ.
Related Articles
Advertisement
ಮೂರು ದಿನಗಳಿಂದ ರಿಪೇರಿ: ಆಲಮಟ್ಟಿಯಲ್ಲಿ ಮೋಟರ್ ರಿಪೇರಿ ಮಾಡಲು ಪುರಸಭೆ ಮುಖ್ಯಾಧಿಕಾರಿ ನಬಿ ಎಂ.ಕಲಾದಗಿ, ಪುರಸಭೆ ಸಿಬ್ಬಂದಿ ಮೂರು ದಿನಗಳಿಂದ ಆಲಮಟ್ಟಿಯಲ್ಲಿಯೇ ಇದ್ದು ದುರಸ್ತಿ ಮಾಡುತ್ತಿದ್ದಾರೆ.
ಕಳೆದ ಮೂರು ದಿನಗಳಿಂದ ಆಲಮಟ್ಟಿಯಲ್ಲಿಯೇ ನಾನು ಮತ್ತು ನಮ್ಮ ಸಿಬ್ಬಂದಿ ಇದ್ದು , ಮೋಟಾರ್ ರಿಪೇರಿ ಮಾಡುತ್ತಿದ್ದೇವೆ. ಬೇರಿಂಗ್ ಜಾಮ್ ಆಗಿದ್ದರಿಂದ ಮೋಟರ್ ರಿಪೇರಿ ತಡವಾಗುತ್ತಿದೆ. ಮಂಗಳವಾರ ರಾತ್ರಿ ಇಲ್ಲವೇ ಬುಧವಾರ ಬೆಳಿಗ್ಗೆ ಮೋಟಾರ್ ರಿಪೇರಿಯಾಗುವ ನೀರಿಕ್ಷೆಯಿದ್ದು, ಮೋಟಾರ್ ದುರಸ್ತಿಯಾದ ಕೂಡಲೇ ನೀರು ಪೂರೈಸಲಾಗುವುದು.*ಎನ್.ಎಂ.ಕಂದಗಲ್ಲ,
ಮುಖ್ಯಾಧಿಕಾರಿ ಗುಳೇದಗುಡ್ಡ ಪುರಸಭೆ ಹೆಚ್ಚುವರಿ ಇರುವ ಮೋಟಾರ್ ರಿಪೇರಿಗೆ 4 ಲಕ್ಷ ಹಣವನ್ನು ತೆಗೆದಿರಿಸಿದ್ದೇವೆ. ನಾವು ಮೋಟಾರ್ ರಿಪೇರಿ ಮಾಡಿಸಲು ಸಿದ್ಧರಿದ್ದೇವೆ. ಅಲ್ಲದೇ ಕೋಟೇಶನ್ ಗುಳೇದಗುಡ್ಡ ಪುರಸಭೆಯವರು ತೆಗೆದುಕೊಂಡಿದ್ದಾರೆ. ಒಂದು ವಾರದ ಹಿಂದೆಯು ಮಾತಾಡಿದ್ದೇವೆ. ರಿಪೇರಿ ಮಾಡಿಸುತ್ತೇವೆ.
ಮಹೇಶ ನೀಡಶೇಶಿ, ಮುಖ್ಯಾಧಿಕಾರಿಗಳು,
ಅಮೀನಗಡ ಪಟ್ಟಣ ಪಂಚಾಯಿತಿ *ಮಲ್ಲಿಕಾರ್ಜುನ ಕಲಕೇರಿ