Advertisement

ಗುಲಬರ್ಗಾ ವಿ.ವಿ. ಅಂತರ್ ಮಹಾವಿದ್ಯಾಲಯಗಳ ಯುವಜನೋತ್ಸವ-2022ಕ್ಕೆ ಚಾಲನೆ

03:03 PM Dec 28, 2022 | Team Udayavani |

ಕಲಬುರಗಿ: ಇಲ್ಲಿನ ಗುಲ್ಬರ್ಗಾ ವಿಶ್ವವಿದ್ಯಾಲಯದ ಜ್ಞಾನ ಗಂಗಾ ಆವರಣದ ಡಾ.ಬಿ.ಆರ್.ಅಂಬೇಡ್ಕರ ಸಭಾಂಗಣದಲ್ಲಿ ಬುಧವಾರದಿಂದ ಮೂರು ದಿನಗಳ ಕಾಲ ನಡೆಯಲಿರುವ ಅಂತರ್ ಮಹಾವಿದ್ಯಾಲಯಗಳ ಯುವಜನೋತ್ಸವ-2022 ಕಾರ್ಯಕ್ರಮ ಉದ್ಘಾಟಿಸಿದ ಚಲನಚಿತ್ರ ಹಿನ್ನೆಲೆ ಗಾಯಕಿ ಬಿ.ಆರ್.ಛಾಯಾ ಅವರು ಚಲನಚಿತ್ರ ಮತ್ತು ಜಾನಪದ ಗೀತೆಗಳನ್ನು ಹಾಡುವ ಮೂಲಕ ನೆರೆದ ಯುವ ಮನಸ್ಸುಗಳನ್ನು ರಂಜಿಸಿದರು

Advertisement

ರೆಬೆಲ್ ಸ್ಟಾರ್ ಅಭಿನಯದ ಇಂದ್ರಜಿತ್ ಚಿತ್ರದ “ಬೆಳ್ಳಿ ರಥದಲಿ ಸೂರ್ಯ ತಂದ ಕಿರಣ” ಎಂಬ ಗೀತೆಯ ತುಣುಕು ಹಾಡಿನಿಂದ ಆರಂಭಿಸಿದ ಗೀತಪಯಣವು, ಮುಂದೆ “ಏಕೋ ಹೀಗಾಯ್ತೋ ನಾನು ಕಾಣೆನೂ”, “ತ್ರಿಪುರಾ ಸುಂದರಿ ಬಾರೇನಿ ಹಸೆಮಣೆಗೆ’, ಹುಚ್ಚುಕೋಡಿ ಮನಸ್ಸು, ಅದು ಹದಿನಾರರ ವಯಸ್ಸು’, “ಕೆಂಪು ತೋಟದಲ್ಲಿ ಒಮ್ಮೆ ಹಾರಬಾರದೇ ಪಾರಿವಾಳವೇ”, ದೇವತಾ ಮನುಷ್ಯ ಚಿತ್ರದ ಡಾ.ರಾಜಕುಮಾರ ಅಭಿನಯದ “ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು ರಾಘವೇಂದ್ರ”,” “ಏನು ಕೊಡ ಏನು ಕೊಡವ ಹುಬ್ಬಳ್ಳಿ ಮಾಟ ಎಂಥ ಚೆಂದುಳ್ಳ ಕೊಡವ”, “ಬಿಟ್ಟು ಹೊಂಟೆಲ್ಲ ನನ್ನ ಹಳ್ಳಿ”, “ನೀ ಜಗ್ಗಬ್ಯಾಡ್ ಬಿಡು ಸೆರಗಾ ಮಾವ”, ಉಡಿಯಕ್ಕಿ ಹಾಕತಾರ, ಊರು ಬಿಟ್ಟು ಕಳುಹಿಸ್ತಾರ್” ಹಾಡುಗಳನ್ನು ಹಾಡಿದರು. ಬಿ.ಆರ್.ಛಾಯಾ ಅವರ ಪ್ರತಿಯೊಂದು ಗೀತೆಗೆ ಯುವಕ-ಯುವತಿಯರು ಚಪ್ಪಾಳ್ಳೆ, ಶಿಲ್ಳೆ ಹೊಡೆದು ಸಂಭ್ರಮಿಸಿದರು. ಕೊನೆಗೆ ಹಿಂದೂಸ್ತಾನವು ಎಂದು ಮರೆಯದ ಗೀತೆಯನ್ನು ನೆರದವರಿಂದಲೆ ಹಾಡಿಸಿ ಯುವಜನೋತ್ಸವಕ್ಕೆ ಶುಭ ಕೋರಿದಲ್ಲದೆ ನೀವು ಭಾರತ ರತ್ನರಾಗಿ ಎಂದು ಕರೆ‌ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗುಲಬರ್ಗಾ ವಿ.ವಿ. ಸಮಾಜ ವಿಜ್ಞಾನ ವಿಭಾಗದ ಡೀನ್ ಪ್ರೊ. ವಿ.ಟಿ.ಕಾಂಬ್ಳೆ ಅಧ್ಯಕ್ಷೀಯ ನುಡಿಗಳನ್ನಾಡಿದರು. ಕುಲಸಚಿವ ಡಾ.ಬಿ.ಶರಣಪ್ಪ ಅವರು ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಯುವಜನೋತ್ಸವ ಅಂಗವಾಗಿ ಜ್ಞಾನಗಂಗಾ ಹೊರತಂದಿರುವ ವಿಶೇಷ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಮಹೇಶ ಶ್ರೀಗಣಿ ಅವರು ಸಿದ್ಧಪಡಿಸಿದ ಬಿ.ಆರ್.ಛಾಯಾ ಅವರು ಹಾಡಿರುವ ಕೆಲವು ಖ್ಯಾತ ಗೀತೆಗಳ ತುಣುಕುಗಳನ್ನು ಪ್ರಸ್ತುತಪಡಿಸಲಾಯಿತು.

ಕಾರ್ಯಕ್ರಮದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಪ್ರತಿಭಾ ಛಾಮಾ, ವಿದ್ಯಾ ವಿಷಯಕ್ ಪರಿಷತ್ ಸದಸ್ಯ ನಿಂಗಯ್ಯ ಎಸ್.ಹಿರೇಮಠ, ಕುಲಸಚಿವೆ (ಮೌಲ್ಯಮಾಪನ) ಡಾ.ಜ್ಯೋತಿ ಧಮ್ಮಪ್ರಕಾಶ, ಹಣಕಾಸು ಅಧಿಕಾರಿ ಪ್ರೊ. ಎನ್.ಬಿ.ನಡುವಿನಮನಿ, ಬಹುಮಾಧ್ಯಮ ವಿಭಾಗದ ಪ್ರೊ. ಡಿ.ಬಿ.ಪಾಟೀಲ, ಪ್ರೊ.ಕೆ.ಸಿದ್ದಪ್ಪ, ವಿದ್ಯಾರ್ಥಿಗಳ ಕಲ್ಯಾಣಾಧಿಕಾರಿ ಪ್ರೊ. ಕೆ.ಲಿಂಗಪ್ಪ, ಪಿ.ಎಚ್.ಡಿ. ಸಂಶೋಧನಾ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮಹಾದೇವ ಸ್ವಾಮಿ, ಸ್ನಾತಕ್ಕೋತ್ತರ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ರಿಯಾಜ್ ಅಹ್ಮದ್, ಅರುಣ ಕುರ್ಣಿ ಸೇರಿದಂತೆ ವಿ.ವಿ. ಬೋಧಕ, ಬೋಧಕೇತರ ವೃಂದ, ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement

ಇದಕ್ಕೂ ಮುನ್ನ ಕಾರ್ಯಸೌಧದಿಂದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣ ವರೆಗೆ ಯುವಜನೋತ್ಸವದ ವರ್ಣರಂಜಿತ ಸಾಂಸ್ಕೃತಿಕ ಮೆರವಣಿಗೆ ನಡೆಯಿತು.

ಮೂರು ದಿನಗಳ ಯುವಜನೋತ್ಸವದಲ್ಲಿ ವಿವಿಧ ಸ್ಥಳದಲ್ಲಿ 27 ವಿವಿಧ ಸ್ಪರ್ಧೆಗಳು ನಡೆಯಲಿದ್ದು, ಕಲಬುರಗಿ ಬೀದರ ಜಿಲ್ಲೆಯ ನೂರಾರು ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next