Advertisement

Gukesh Dommaraju; ಬಾಲ್ಯದಲ್ಲೇ ಚಿಗುರಿತ್ತು ‘ವಿಶ್ವ ಚಾಂಪಿಯನ್‌’ ಕನಸು

02:31 AM Dec 13, 2024 | Team Udayavani |

ಆಂಧ್ರಪ್ರದೇಶ ತೆಲುಗು ಮೂಲದ ಕುಟುಂಬದವರಾದ ಗುಕೇಶ್‌ ಜನಿಸಿದ್ದು 29 ಮೇ 2006 ಚೆನ್ನೈಯಲ್ಲಿ. ಶಸ್ತ್ರಚಿಕಿತ್ಸಕ ಡಾ.ರಜಿನಿಕಾಂತ್‌ ಮತ್ತು ಮೈಕ್ರೋಬಯಾಲಾಜಿಸ್ಟ್‌ ಡಾ.ಪದ್ಮಾ ಅವರ ಪುತ್ರ ಗುಕೇಶ್‌ಗೆ ಎಳವೆಯಲ್ಲಿಯೇ ಚೆಸ್‌ ಬಗ್ಗೆ ಆಸಕ್ತಿ. 9ನೇ ವಯಸ್ಸಿನಿಂದಲೂ ಏಷ್ಯನ್‌ ಸ್ಕೂಲ್‌ ಚೆಸ್‌ನಂತಹ ಕೂಟಗಳಲ್ಲಿ ಪಾಲ್ಗೊಳ್ಳತೊಡಗಿದ ಗುಕೇಶ್‌, 2019ರಲ್ಲಿ 12 ವರ್ಷ 7 ತಿಂಗಳು ಪ್ರಾಯದವರಾಗಿದ್ದ ಗ್ರ್ಯಾಂಡ್‌ ಮಾಸ್ಟರ್‌ ಆಗಿ ಗುರುತಿಸಿಕೊಂಡರು. ಅಂದೇ ಗುಕೇಶ್‌ ತಾನೊಂದು ದಿನ ವಿಶ್ವ ಚಾಂಪಿಯನ್‌ ಆಗುವ ಕನಸು ಕಂಡಿದ್ದರಲ್ಲದೆ, ಸಂದರ್ಶನವೊಂದರಲ್ಲಿ ಈ ಬಗ್ಗೆ ಹೇಳಿಕೊಂಡಿದ್ದರು ಕೂಡ.

Advertisement

2022ರಲ್ಲಿ ಚೆನ್ನೈಯಲ್ಲಿ ನಡೆದಿದ್ದ ಚೆಸ್‌ ಒಲಿಂಪಿಯಾಡ್‌ನ‌ಲ್ಲಿ ವೈಯಕ್ತಿಕ ಚಿನ್ನದ ಪದಕ ಗೆದ್ದು ಮಿಂಚಿದ್ದರು. ಈ ವರ್ಷ, ಅಂದರೆ 2024ರಲ್ಲಿ ಬುಡಾಪೆಸ್ಟ್‌ನಲ್ಲಿ ನಡೆದ ಚೆಸ್‌ ಒಲಿಂಪಿಯಾಡ್‌ನ‌ಲ್ಲಿ ಚಿನ್ನ ಗೆದ್ದಿದ್ದ ಗುಕೇಶ್‌, ವಿಶ್ವ ಚಾಂಪಿಯನ್‌ ಪಟ್ಟಕ್ಕೇರುವ ತನ್ನಾಸೆಯನ್ನೂ ಈಗ ನೆರವೇರಿಸಿಕೊಂಡಿದ್ದಾರೆ. ಅಂದಹಾಗೆ, ಪ್ರಸ್ತುತ 2783 ಫಿಡೇ ರೇಟಿಂಗ್‌ನೊಂದಿಗೆ 5ನೇ ರ್‍ಯಾಂಕಿಂಗ್‌ನಲ್ಲಿರುವ ಗುಕೇಶ್‌, ಕಳೆದ ಅಕ್ಟೋಬರ್‌ನಲ್ಲಿ 2794 ಫಿಡೇ ರೇಟಿಂಗ್‌ನೊಂದಿಗೆ ಜೀವನ ಶ್ರೇಷ್ಠ ಸಾಧನೆ ಮೆರೆದಿದ್ದರು.

12 ವರ್ಷದಲ್ಲೇ ಗ್ರ್ಯಾಂಡ್‌ ಮಾಸ್ಟರ್‌: ವಿಶ್ವದ 2ನೇ ಕಿರಿಯ

2019ರಲ್ಲಿ 12 ವರ್ಷ 7 ತಿಂಗಳು ಪ್ರಾಯದವರಾಗಿದ್ದ ಗುಕೇಶ್‌, ವಿಶ್ವದ 2ನೇ ಕಿರಿಯ ಗ್ರ್ಯಾಂಡ್‌ಮಾಸ್ಟರ್‌ ಆಗಿ ಗುರುತಿಸಿಕೊಂಡಿದ್ದರು. 12 ವರ್ಷ, 4 ತಿಂಗಳು ಪ್ರಾಯದವರಾಗಿದ್ದಾಗ ಗ್ರ್ಯಾಂಡ್‌ಮಾಸ್ಟರ್‌ ಎನಿಸಿದ್ದ ಅಮೆರಿಕದ ಅಭಿಮನ್ಯು ಮಿಶ್ರಾ ವಿಶ್ವದ ಕಿರಿಯ ಗ್ರ್ಯಾಂಡ್‌ಮಾಸ್ಟರ್‌ ದಾಖಲೆ ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next