Advertisement

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

09:07 PM May 02, 2024 | Team Udayavani |

ಬೀದರ: ಮಣಿಪುರ ಮಹಿಳೆಯರ ನಗ್ನ ಘಟನೆ, ಹತ್ರಾಸ್‌ ಮಹಿಳಾ ಶೋಷಣೆ ಘಟನೆ ಬಗ್ಗೆ ಪ್ರಧಾನಿ ಮೋದಿ ಮಾತನಾಡುವುದಿಲ್ಲ. ಹೀಗಾಗಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಹಿಳಾ ವಿರೋಧಿಯಾಗಿದೆ ಎಂದು ಗುಜರಾತ್‌ ಶಾಸಕ, ಕಾಂಗ್ರೆಸ್‌ ಸಿಡಬ್ಲ್ಯುಸಿ ಸದಸ್ಯ ಜಿಗ್ನೇಶ್‌ ಮೇವಾನಿ ಆರೋಪಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ? ಮೋದಿ ಸರ್ಕಾರ ವಿಪಕ್ಷದವರಿಗೆ ಇಡಿ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ಜೈಲಿಗೆ ಕಳುಹಿಸುತ್ತಿದೆ. ನನಗೂ ಅಸ್ಸಾಂ ಜೈಲಿಗೆ ಹಾಕಿದ್ದರು. ಪ್ರತಿ ಬಾರಿ 400 ಸೀಟ್‌ಗಳಲ್ಲಿ ಗೆಲ್ಲುತ್ತೇವೆ ಎಂದು ಹೇಳುವ ಬಿಜೆಪಿ ಬಡವರಿಗೆ ಗ್ಯಾಸ್‌ ಸಿಲಿಂಡರ್‌ 400 ರೂ.ಗೆ ಕೊಡುತ್ತೇವೆ ಎಂದು ಹೇಳುವುದಿಲ್ಲ. ಚುನಾವಣೆ ಪೂರ್ವ ಘೋಷಿಸಿದ್ದ ಒಂದು ಭರವಸೆಯನ್ನೂ ಜಾರಿಗೆ ತರುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next