ನವದೆಹಲಿ: ದೇಶದಲ್ಲಿ ಆತಂಕಕ್ಕೆ ಕಾರಣವಾಗಿರುವ ಎಚ್3ಎನ್2 ವೈರಸ್‌ನಿಂದ ಗುಜರಾತ್‌ನಲ್ಲಿ 58 ವರ್ಷದ ಮಹಿಳೆ ಕೊನೆಯುಸಿರೆಳೆದಿದ್ದಾರೆ.
Advertisement
ವಡೋದರಾದಲ್ಲಿ ಇರುವ ಆಸ್ಪತ್ರೆಯಲ್ಲಿ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದರು. ಇದರಿಂದಾಗಿ ವೈರಸ್‌ಗೆ ಇದುವರೆಗೆ ಏಳು ಮಂದಿ ಜೀವ ಕಳೆದುಕೊಂಡಂತಾಗಿದೆ.
ಕರ್ನಾಟಕದ ಹಾಸನ ಜಿಲ್ಲೆಯಲ್ಲಿ 82 ವರ್ಷದ ವ್ಯಕ್ತಿ ಈ ವೈರಸ್‌ಗೆ ಬಲಿಯಾಗುವ ಮೂಲಕ, ದೇಶದ ಮೊದಲ ಸಾವು ದಾಖಲಾಗಿತ್ತು.
ಜ.2ರಿಂದ ಮಾ.5ರವರೆಗೆ ಭಾರತದಲ್ಲಿ ಹೊಸ ಮಾದರಿಯ ವೈರಸ್‌ನ 451 ಕೇಸುಗಳು ದೃಢಪಟ್ಟಿದ್ದವು. ಐಎಸಿಎಂಆರ್ ವತಿಯಿಂದ ಇತ್ತೀಚೆಗೆ ಹೊಸ ವೈರಲ್ ಜ್ವರ ನಿಯಂತ್ರಣಕ್ಕೆ ಅನುಸರಿಸಬೇಕಾದ ಕ್ರಮಗಳನ್ನು ಪ್ರಕಟಿಸಲಾಗಿತ್ತು.