Advertisement

ಹರ್ಯಾಣಕ್ಕೆ ಬೆದರಿದ ಗುಜರಾತ್‌

10:28 AM Aug 30, 2019 | Sriram |

ಹೊಸದಿಲ್ಲಿ: ಬುಧವಾರದ ಮೊದಲ ಪ್ರೊ ಕಬಡ್ಡಿ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್‌ ತಂಡ 41-25 ಅಂಕಗಳ ಅಂತರದಿಂದ ಗುಜರಾತ್‌ ಫಾರ್ಚೂನ್‌ ಜೈಂಟ್ಸ್‌ ತಂಡವನ್ನು ಸೋಲಿಸಿದೆ.

Advertisement

ಎಲ್ಲ ವಿಭಾಗಗಳಲ್ಲೂ ಅದ್ಭುತವಾಗಿ ಆಡಿದ ಹರ್ಯಾಣ ಎದುರಾಳಿಯನ್ನು ಸಂಪೂರ್ಣವಾಗಿ ಮಟ್ಟಹಾಕಿತು. ಹರ್ಯಾಣ ಈಗ 11 ಪಂದ್ಯಗಳಲ್ಲಿ 7 ಜಯ, 4 ಸೋಲಿನೊಂದಿಗೆ 36 ಅಂಕ ಗಳಿಸಿದೆ. ಸದ್ಯ ಅದು 3ನೇ ಸ್ಥಾನದಲ್ಲಿದೆ. ಇನ್ನೊಂದು ಕಡೆ ಗುಜರಾತ್‌ 11 ಪಂದ್ಯಗಳಲ್ಲಿ 7 ಸೋಲು, 4 ಗೆಲುವಿನೊಂದಿಗೆ 9ನೇ ಸ್ಥಾನ ಪಡೆದಿದೆ.

ಹರ್ಯಾಣ ಪರ ಕರ್ನಾಟಕದ ಪ್ರಶಾಂತ್‌ ಕುಮಾರ್‌ ರೈ 12 ಬಾರಿ ದಾಳಿ ನಡೆಸಿ 8 ಅಂಕ ಗಳಿಸಿದರು. ಎದುರಾಳಿ ಕೋಟೆಯೊಳಗೆ ನುಗ್ಗಿಹೋಗಿ ಅದ್ಭುತ ಯಶಸ್ಸು ಪಡೆದರು. ಇವರಿಗೆ ರಕ್ಷಣೆಯಲ್ಲಿ ರವಿಕುಮಾರ್‌ ಅಮೋಘ ನೆರವು ನೀಡಿದರು.

ಇನ್ನೊಂದು ಕಡೆ ಗುಜರಾತ್‌ ಎಲ್ಲ ವಿಭಾಗಗಳಲ್ಲಿ ಪೂರ್ಣವೈಫ‌ಲ್ಯ ಅನುಭವಿಸಿತು. ಹಿಂದಿನ ಆವೃತ್ತಿಯಲ್ಲಿ ತೋರಿಸಿದ ಚಾಕಚಕ್ಯತೆ ಈ ಬಾರಿ ಕಾಣಿಸಿಲ್ಲ. ಆ ತಂಡದ ಪರ ಅಬೊಲ್‌ ಫ‌ಜಲ್‌ 6 ಬಾರಿ ದಾಳಿ ನಡೆಸಿ 4 ಅಂಕ, ರಕ್ಷಣೆಯಲ್ಲಿ ಮೋರೆ 2 ಅಂಕ ಗಳಿಸಿದರು.

ಮುಂಬಾಗೆ ಡೆಲ್ಲಿ ಏಟು
ಬುಧವಾರದ ಇನ್ನೊಂದು ಪಂದ್ಯದಲ್ಲಿ ದಬಾಂಗ್‌ ಡೆಲ್ಲಿ 40-24 ಅಂಕಗಳ ಅಂತರದಿಂದ ಯು ಮುಂಬಾ ತಂಡವನ್ನು ಸೋಲಿಸಿತು. ಈ ಪಂದ್ಯವೂ ಬಹುತೇಕ ಏಕಪಕ್ಷೀಯವಾಗಿಯೇ ಸಾಗಿತು. ಡೆಲ್ಲಿ ಯಾವುದೇ ಹಂತದಲ್ಲಿ ಮುಂಬಾಗೆ ಚೇತರಿಸಿಕೊಳ್ಳಲು ಬಿಡಲಿಲ್ಲ. ಡೆಲ್ಲಿ ತಂಡದ ದಾಳಿಯಲ್ಲಿ ನವೀನ್‌ ಕುಮಾರ್‌ ಯಶಸ್ವಿಯಾದರು. 21 ಯತ್ನಗಳಲ್ಲಿ 11 ಅಂಕ ಗಳಿಸಿದರು. ರಕ್ಷಣೆಯಲ್ಲಿ ರವೀಂದರ್‌ ಪಹಲ್‌ ಅದ್ಭುತವಾಗಿ ಆಡಿ 8 ಅಂಕ ಗಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next