Advertisement

ಪೂರ್ತಿ ಊರಿಗೇ ಸೌರಶಕ್ತಿ ಕೊಡುಗೆ ಕೊಟ್ಟ ಉದ್ಯಮಿ

07:45 PM Sep 25, 2022 | Team Udayavani |

ಗಾಂಧಿನಗರ: ದೀಪಾವಳಿ ಪ್ರಯುಕ್ತ ಗುಜರಾತ್‌ನ ಪ್ರಸಿದ್ಧ ವಜ್ರೋದ್ಯಮಿ ಗೋವಿಂದಾ ಧೊಲಾಕಿಯಾ ಅವರು ಅಮ್ರೇಲಿ ಜಿಲ್ಲೆಯ ದುಧಾಲಾ ಗ್ರಾಮಕ್ಕೆ ಸೌರಶಕ್ತಿಯ ಉಡುಗೊರೆ ನೀಡಿದ್ದಾರೆ.

Advertisement

ಗೋವಿಂದಾ ಅವರು ಕುಟುಂಬವು ಮೂಲತಃ ದುಧಾಲಾ ಗ್ರಾಮದವರೇ ಆಗಿದ್ದರಿಂದ ಆ ಗ್ರಾಮದ ಎಲ್ಲ ಮನೆಗಳಿಗೂ ಈ ಕೊಡುಗೆ ನೀಡಲಾಗಿದೆ.

ಪ್ರತಿ ಮನೆ, ಅಂಗಡಿಗೆ ಸೌರಶಕ್ತಿ ಅಳವಡಿಸಲಾಗಿದೆ. ಗೋಲ್ಡಿ ಸೋಲಾರ್‌ ಹೆಸರಿನ ಸಂಸ್ಥೆಯೊಂದಿಗೆ ಸೇರಿಕೊಂಡು ಜಂಟಿಯಾಗಿ ಈ ಕೆಲಸ ಮಾಡಲಾಗಿದೆ. ಇದಕ್ಕಾಗಿ ಗೋವಿಂದ ಅವರು ಬರೋಬ್ಬರಿ 2 ಕೋಟಿ ರೂ. ಖರ್ಚು ಮಾಡಿದ್ದಾರೆ.

ಕಳೆದ ವರ್ಷ ಯಕೃತ್‌ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ ಗೋವಿಂದಾ ಅವರು, ತಾನು ಅನಾರೋಗ್ಯದಿಂದ ಬಳಲಿದರೂ ಮತ್ತೆ ಬದುಕಿರುವ ಹಿನ್ನೆಲೆ ಸಮಾಜಕ್ಕೆ ಏನಾದರೂ ಒಳಿತು ಮಾಡಬೇಕೆಂದು ಈ ಕಾರ್ಯ ಮಾಡಲು ನಿರ್ಧರಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next