Advertisement

ಸಂಘರ್ಷದ ನಡುವೆ ಶಾಂತಿ ಪಸರಿಸುವ ನವ ಭಾರತ ನಿರ್ಮಾಣ ಮಾಡಿ : ಯುವಜನತೆಗೆ ಪ್ರಧಾನಿ ಮೋದಿ ಕರೆ

09:39 PM May 19, 2022 | Team Udayavani |

ವಡೋದರಾ: ಅಂತಾರಾಷ್ಟ್ರೀಯ ಸಂಘರ್ಷಗಳು ಹಾಗೂ ಹಿಂಸಾಚಾರಗಳು ಹೆಚ್ಚುತ್ತಿರುವಂಥ ಈ ಸಂದರ್ಭದಲ್ಲಿ ನಮ್ಮ ಯುವಜನರು ಜಾಗತಿಕ ಶಾಂತಿ ಕಾಪಾಡಬಲ್ಲಂಥ ದೇಶವನ್ನು ನಿರ್ಮಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

Advertisement

ಗುಜರಾತ್‌ನ ವಡೋದರಾ ಜಿಲ್ಲೆಯಲ್ಲಿ ಗುರುವಾರ ಆಯೋಜಿಸಲಾಗಿದ್ದ ಯುವ ಸಮಾವೇಶದಲ್ಲಿ ವರ್ಚುವಲ್‌ ಆಗಿ ಪಾಲ್ಗೊಂಡು ಮಾತನಾಡಿದ ಅವರು, ಭಾರತವು ತನ್ನ ಪ್ರಾಚೀನ ಸಂಪ್ರದಾಯಗಳನ್ನು ಉಳಿಸಿಕೊಂಡೇ ಪ್ರಗತಿಪರ ಅಸ್ಮಿತೆಯನ್ನು ಹೊಂದಬೇಕು. ಈಗ ಜಗತ್ತಿನ ಸಮಸ್ಯೆಗಳಿಗೆ ಭಾರತವೇ ಪರಿಹಾರ ಸೂಚಿಸುವಂತಾಗಿದೆ. ಕೊರೊನಾ ಸೋಂಕಿನ ಅವಧಿಯಲ್ಲಿ ಜಗತ್ತಿಗೆ ಲಸಿಕೆಗಳು ಮತ್ತು ಔಷಧಗಳ ವಿತರಣೆಯಿಂದ ಹಿಡಿದು, ಪೂರೈಕೆ ಸರಪಳಿಯು ಅಸ್ತವ್ಯಸ್ತಗೊಂಡಿರುವ ಸಮಯದಲ್ಲಿ ಆತ್ಮನಿರ್ಭರ ಭಾರತ ನಿರ್ಮಿಸುವವರೆಗೆ, ಜಾಗತಿಕ ಅಶಾಂತಿಯ ನಡುವೆಯೇ ಶಾಂತಿ ಕಾಪಾಡುವಂಥ ದೇಶವನ್ನು ನಿರ್ಮಿಸುವವರೆಗೆ ಭಾರತವು ಇಂದು ಇಡೀ ಜಗತ್ತಿಗೆ ಹೊಸ ಆಶಾಕಿರಣವಾಗಿ ಹೊರಹೊಮ್ಮಿದೆ ಎಂದು ಹೇಳಿದ್ದಾರೆ.

ನೀವೆಲ್ಲರೂ ನವ ಭಾರತ ನಿರ್ಮಾಣದ ಸಾಮೂಹಿಕ ಸಂಕಲ್ಪ ಮಾಡಬೇಕು. ಹೊಸ, ಪ್ರಗತಿಪರ, ಪ್ರಾಚೀನ ಪರಂಪರೆ ಹೊಂದಿರುವ ನವ ಭಾರತ, ಹಳೆಯ ಸಂಸ್ಕೃತಿ ಮತ್ತು ಹೊಸ ಆಲೋಚನೆಗಳನ್ನು ಒಳಗೊಂಡ ನವ ಭಾರತ, ಇಡೀ ಮನುಕುಲಕ್ಕೇ ದಿಕ್ಕನ್ನು ತೋರಿಸುವಂಥ ನವಭಾರತ ನಿರ್ಮಿಸಬೇಕು ಎಂದೂ ಯುವಕರಿಗೆ ಮೋದಿ ಕರೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next