ವಲ್ಸಾಡ್(ಅಹಮದಾಬಾದ್): ಸಲೂನ್ ನಲ್ಲಿ ಫೈಯರ್(ಬೆಂಕಿ) ಹೇರ್ ಕಟ್ ಮಾಡಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಅವಘಡದಿಂದ ಯುವಕನೊಬ್ಬ ಬೆಂಕಿಯಿಂದ ಗಂಭೀರವಾಗಿ ಸುಟ್ಟು ಗಾಯಗೊಂಡಿರುವ ಘಟನೆ ಗುಜರಾತ್ ನ ವಲ್ಸಾಡ್ ಜಿಲ್ಲೆಯ ವಾಪಿ ನಗರದಲ್ಲಿ ಗುರುವಾರ (ಅಕ್ಟೋಬರ್ 27) ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಕ್ರಿಕೆಟ್ ನಲ್ಲಿ ಸಮಾನತೆ: ಮಹಿಳಾ ಕ್ರಿಕೆಟಿಗರಿಗೂ ಸಿಗಲಿದೆ ಪುರುಷರಿಗೆ ಸಮನಾದ ವೇತನ
ಇತ್ತೀಚೆಗಿನ ವರ್ಷಗಳಲ್ಲಿ ಫೈಯರ್ ಹೇರ್ ಕಟ್ ಜನಪ್ರಿಯತೆಗಳಿಸಿದ್ದು, ಕ್ಷೌರಿಕ ತಮ್ಮ ಗ್ರಾಹಕರಿಗೆ ಹೇರ್ ಡ್ರೈಯರ್, ಫೈಯರ್ ಬಳಸಿ ಕೂದಲನ್ನು ಕತ್ತರಿಸುವುದು ಇದರ ಪ್ರಕ್ರಿಯೆಯಾಗಿದೆ ಎಂದು ವರದಿ ತಿಳಿಸಿದೆ.
ಯುವಕನಿಗೆ ಫೈಯರ್ ಹೇರ್ ಕಟ್ ಮಾಡುತ್ತಿದ್ದ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಬೆಂಕಿ ಹೊತ್ತಿಕೊಂಡಿರುವ ಘಟನೆ ನಡೆದಿದ್ದು, ಯುವಕನ ಕುತ್ತಿಗೆ ಮತ್ತು ಎದೆಯ ಭಾಗಗಳು ತೀವ್ರ ಸುಟ್ಟುಹೋಗಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಯುವಕನನ್ನು ವಲ್ಸಾಡ್ ಸಿವಿಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ವರದಿ ವಿವರಿಸಿದೆ.
ಘಟನೆಗೆ ಸಂಬಂಧಿಸಿದಂತೆ ಯುವಕನ ಹೇಳಿಕೆ ಪಡೆಯಲು ಪ್ರಯತ್ನಿಸಲಾಗುತ್ತಿದೆ ಎಂದು ತನಿಖಾಧಿಕಾರಿ ಕರಂಸಿನ್ಹಾ ಮಕ್ವಾನ್ ತಿಳಿಸಿದ್ದಾರೆ. ಫೈಯರ್ ಹೇರ್ ಕಟ್ ವೇಳೆ ಕೆಲವು ರಾಸಾಯನಿಕ ಬಳಸಿದ್ದು, ಈ ಸಂದರ್ಭದಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಯುವಕನ ಕುತ್ತಿಗೆ, ಮುಖ ಮತ್ತು ಎದೆ ಬೆಂಕಿಯಿಂದ ಸುಟ್ಟು ಹೋಗಿರುವುದಾಗಿ ಮಕ್ವಾನ್ ತಿಳಿಸಿದ್ದಾರೆ.