Advertisement
ಫೋಟೋ ಫಿನಿಷ್ ಫಲಿತಾಂಶವೇನಾದರೂ ಬಂದರೆ, ಪಕ್ಷೇತರರನ್ನು ತಮ್ಮತ್ತ ಸೆಳೆಯಲು ಬಿಜೆಪಿ ಮತ್ತು ಕಾಂಗ್ರೆಸ್ ಮುಂದಾಗಿವೆ. ಈ ನಿಟ್ಟಿನಲ್ಲಿ ಸೋಮವಾರ ರಾತ್ರಿಯಿಂದಲೇ ಸಿದ್ಧತೆಗಳು ಆರಂಭವಾಗಿವೆ. ಬಹಿರಂಗವಾಗಿ ಹೇಳಿಕೆ ನೀಡುವಾಗ ಎರಡೂ ಪಕ್ಷಗಳು, “ಗೆಲ್ಲುವುದು ನಾವೇ’ ಎಂದು ಹೇಳುತ್ತಿದ್ದರೂ, ಒಳಗಿಂದೊಳಗೇ ಆತಂಕ ಮನೆ ಮಾಡಿದೆ. ಹೀಗಾಗಿ, ಅತಂತ್ರ ಸ್ಥಿತಿ ಎದುರಾದರೆ ಸ್ವತಂತ್ರ ಶಾಸಕರನ್ನು ಹೇಗೆ ತಮ್ಮತ್ತ ಒಲಿಸಿಕೊಳ್ಳಬೇಕು ಎಂಬ ಕುರಿತು ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಕಾರ್ಯತಂತ್ರ ರೂಪಿಸುತ್ತಿದ್ದಾರೆ.
Related Articles
– ಯಮಾಲ್ ವ್ಯಾಸ್, ಗುಜರಾತ್ ಬಿಜೆಪಿ ವಕ್ತಾರ
Advertisement
ಬಿಜೆಪಿ ಬಾಹುಳ್ಯದ ರಾಜ್ಯದಲ್ಲಿ ಹೊಸ ಪಕ್ಷವೊಂದು ಶೇ.15-20 ಮತಗಳನ್ನು ಪಡೆಯುತ್ತದೆ ಎಂದರೆ, ಅದು ಉತ್ತಮ ಸಾಧನೆಯೇ ಸರಿ. ಯಾವುದಕ್ಕೂ ಮತ ಎಣಿಕೆಯ ದಿನದವರೆಗೂ ಕಾಯೋಣ.– ಅರವಿಂದ ಕೇಜ್ರಿವಾಲ್, ಆಪ್ ನಾಯಕ ಸಮೀಕ್ಷೆಗಳ ಅಂದಾಜು ನಿಜವಾದರೆ, ಅದು ಕಾಂಗ್ರೆಸ್ ಪಕ್ಷಕ್ಕೆ ಅತ್ಯಂತ ನಿರಾಸೆಯ ಸಂಗತಿ. ವಿಭಜನೆಯ ರಾಜಕೀಯದಿಂದಷ್ಟೇ ಬಿಜೆಪಿ ಗೆಲ್ಲುತ್ತಿದೆ. ಜತೆಗೆ ಹಣ ಬಲವೂ ಕೆಲಸ ಮಾಡಿದೆ.
– ಅಭಿಷೇಕ್ ಮನು ಸಿಂಘ್ವಿ, ಕಾಂಗ್ರೆಸ್ ನಾಯಕ ಸುಳ್ಳು ಟ್ವೀಟ್: ಟಿಎಂಸಿ ವಕ್ತಾರ ವಶಕ್ಕೆ
ಪ್ರಧಾನಿ ಮೋದಿಗೆ ಸಂಬಂಧಿಸಿ ಸುಳ್ಳು ಮಾಹಿತಿಯಿರುವ ಟ್ವೀಟ್‌ವೊಂದನ್ನು ಬೆಂಬಲಿಸಿದ್ದ ಆರೋಪದಲ್ಲಿ ಟಿಎಂಸಿ ರಾಷ್ಟ್ರೀಯ ವಕ್ತಾರ ಸಾಕೇತ್ ಗೋಖಲೆ ಅವರನ್ನು ಗುಜರಾತ್ ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದಾರೆ. “ಮೊರ್ಬಿ ತೂಗುಸೇತುವೆ ದುರಂತದ ಬಳಿಕ ಘಟನಾ ಸ್ಥಳಕ್ಕೆ ಪ್ರಧಾನಿ ಮೋದಿ ಭೇಟಿ ನೀಡಲು 30 ಕೋಟಿ ರೂ. ವೆಚ್ಚ ಮಾಡಲಾಗಿತ್ತು ಎಂಬ ವಿಚಾರ ಮಾಹಿತಿ ಹಕ್ಕು ಕಾಯ್ದೆಯಡಿ ತಿಳಿದುಬಂದಿದೆ’ ಎಂದು ಬರೆಯಲಾಗಿದ್ದ ಪತ್ರಿಕೆಯ ಕ್ಲಿಪ್ಪಿಂಗ್‌ವೊಂದನ್ನು ಗೋಖಲೆ ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ರಾಜಸ್ಥಾನದ ಜೈಪುರದಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ. ಗೋಖಲೆ ಬಂಧನವನ್ನು ಖಂಡಿಸಿರುವ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, “ಇದು ಪ್ರತೀಕಾರದ ಕ್ರಮ. ಪ್ರಧಾನಿ ಮೋದಿ ವಿರುದ್ಧ ಟ್ವೀಟ್ ಮಾಡಿದ್ದಕ್ಕಾಗಿ ಬಂಧನವೇ? ನನ್ನ ವಿರುದ್ಧವೂ ಜನ ಟ್ವೀಟ್ ಮಾಡುತ್ತಾರೆ’ ಎಂದಿದ್ದಾರೆ.