ಅಹಮದಾಬಾದ್: ಗುಜರಾತ್ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆಯನ್ನು ಎದುರಿಸಬೇಕಾದ ಸಾಧ್ಯತೆಯನ್ನು ಮೊದಲೇ ಮನಗಂಡ ಬಿಜೆಪಿ, ಅದಕ್ಕೆ ತಕ್ಕಂತೆ ಕಾರ್ಯ ತಂತ್ರ ರೂಪಿಸಿರುವುದನ್ನು “ಅಭ್ಯರ್ಥಿ ಗಳ ಪಟ್ಟಿ’ ಮೂಲಕ ಸಾಬೀತು ಪಡಿಸಿದೆ.
ಗುರುವಾರ 160 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದ್ದು, ಬರೋಬ್ಬರಿ 38 ಮಂದಿ ಹಾಲಿ ಶಾಸಕರನ್ನು ಕೈಬಿಟ್ಟಿದೆ. ಜತೆಗೆ, ಯುವ ಹಾಗೂ ಹೊಸ ಮುಖಗಳಿಗೆ ಮಣೆ ಹಾಕಿದೆ. ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾಣಿ, ಮಾಜಿ ಡಿಸಿಎಂ ನಿತಿನ್ ಪಟೇಲ್, ಹಿರಿಯ ನಾಯಕ ಪ್ರದೀಪ್‌ಸಿನ್ಹ ಜಡೇಜ ಮತ್ತಿತರ ಪ್ರಮುಖ ಹೆಸರುಗಳೇ ಪಟ್ಟಿಯಲ್ಲಿಲ್ಲ.
ಪಾಟೀದಾರ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್‌ಗೆ ಬಿಜೆಪಿ ಟಿಕೆಟ್ ನೀಡಿದೆ. ಮೊದಲ ಪಟ್ಟಿಯಲ್ಲಿ 14 ಮಹಿಳೆಯರು, ಪರಿಶಿಷ್ಟ ಜಾತಿಯ 13 ಮಂದಿ, ಪರಿಶಿಷ್ಟ ಪಂಗಡದ 24 ಮಂದಿಗೆ ಟಿಕೆಟ್ ನೀಡಲಾಗಿದೆ.
ಬಂಡಾಯದ ಸಾಧ್ಯತೆ ಬಗ್ಗೆ ಕೇಳಿದ
Related Articles
ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವ ಭೂಪೇಂದ್ರ ಯಾದವ್, “ಇದು ಗುಜರಾತ್. ಇಲ್ಲಿ ಪಕ್ಷದ ಕಾರ್ಯಕರ್ತರು ಬಂಡಾಯ ಏಳಲ್ಲ. ಟಿಕೆಟ್ ಸಿಗದ ಹಿರಿಯರಿಗೆ ಹೊಸ ಟಾಸ್ಕ್ ನೀಡುತ್ತೇವೆ’ ಎಂದಿದ್ದಾರೆ.
ಈ ನಡುವೆ, ಜಲೋದ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಭವೇಶ್ ಕಟಾರಾ ರಾಜೀನಾಮೆ ನೀಡಿದ್ದಾರೆ. ಈ ಮೂಲಕ 2 ದಿನಗಳಲ್ಲಿ 3ನೇ ಶಾಸಕ ಪಕ್ಷ ತೊರೆದಂತಾಗಿದೆ.