Advertisement

ಗುಜರಾತ್‌ನ ಚೆಕ್‌ಡ್ಯಾಂಗೆ ಮೋದಿ ತಾಯಿ ಹೆಸರು

07:59 PM Jan 06, 2023 | Team Udayavani |

ಗಾಂಧಿನಗರ: ಗುಜರಾತ್‌ನ ರಾಜಕೋಟ್‌ ನಗರದ ಹೊರವಲಯದಲ್ಲಿ ನಿರ್ಮಿಸಲಾಗುತ್ತಿರುವ ಚೆಕ್‌ಡ್ಯಾಮ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ದಿವಂಗತ ಹೀರಾಬೇನ್‌ ಅವರ ಹೆಸರನ್ನು ಇಡಲಾಗಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

Advertisement

ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಅವರ ತಾಯಿ ನಿಧನರಾಗಿದ್ದು, ಅವರ ಗೌರವಾರ್ಥ ಡ್ಯಾಮ್‌ಗೆ ಅವರ ಹೆಸರನ್ನೇ ನಾಮಕರಿಸಲಾಗಿದೆ.

ನ್ಯಾರಿ ನದಿಯ ಕೆಳಭಾಗದಲ್ಲಿ ಗಿರ್‌ ಗಂಗಾ ಪರಿವಾರ್‌ ಟ್ರಸ್ಟ್‌ ವತಿಯಿಂದ 15 ಲಕ್ಷ ರೂ. ವೆಚ್ಚದಲ್ಲಿ ಡ್ಯಾಮ್‌ ನಿರ್ಮಾಣಗೊಳ್ಳುತ್ತಿದ್ದು, ಹಿರಾಬಾ ಸ್ಮತಿ ಸರೋವರ ಡ್ಯಾಮ್‌ ಎಂದು ನಾಮಕರಿಸಿ, ಡ್ಯಾಮ್‌ ನಿರ್ಮಾಣಕ್ಕೆ ಬುಧವಾರ ಶಿಲಾನ್ಯಾಸ ನೆರವೇರಿಸಲಾಗಿದೆ ಎಂದು ಟ್ರಸ್ಟ್‌ ಅಧಿಕಾರಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next