Advertisement

ಫ‌ಲಿತಾಂಶ ಪ್ರಕಟವಾಗುತ್ತಲೇ ನಿಂತ “ಕೈ’ಗಡಿಯಾರ!

07:49 PM Dec 08, 2022 | Team Udayavani |

ಗುಜರಾತ್: ಬಿಜೆಪಿಯ ಸೋಲಿಗೆ ಕೌಂಟ್‌ಡೌನ್‌ ಆರಂಭಿಸಿ, ಗುಜರಾತ್‌ನ ಅಹಮದಾಬಾದ್‌ನಲ್ಲಿ ಕಾಂಗ್ರೆಸ್‌ ರಾಜ್ಯ ಪ್ರಧಾನ ಕಚೇರಿಯ ಮೇಲೆ ಹಾಕಿದ್ದ “ಪರಿವರ್ತನ್‌ ಗಡಿಯಾರ’ ಫ‌ಲಿತಾಂಶ ಪ್ರಕಟವಾಗುತ್ತಲೇ ಸ್ವಿಚ್‌ ಆಫ್ ಆಗಿದೆ!

Advertisement

ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ದಾಖಲಿಸುತ್ತಿದ್ದಂತೆ ಪರಿವರ್ತನ್‌ ಗಡಿಯಾರವೂ ಸ್ಥಗಿತಗೊಂಡಿದೆ. ಗುಜರಾತ್‌ನಲ್ಲಿ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಸರ್ಕಾರ ಬದಲಾವಣೆಯ ಭರವಸೆಯೊಂದಿಗೆ, ರಾಜ್ಯದಲ್ಲಿ ಪರಿವರ್ತನೆಗೆ ಕೌಂಟ್‌ಡೌನ್‌ ಆರಂಭವಾಗಿದೆ ಎಂಬುದರ ಸೂಚಕವಾಗಿ ಕಾಂಗ್ರೆಸ್‌ ಈ “ಪರಿವರ್ತನ್‌ ಗಡಿಯಾರ’ವನ್ನು ಎಲ್ಲರಿಗೂ ಕಾಣುವಂತೆ ಅಳವಡಿಸಿತ್ತು. ಆದರೆ ಬಿಜೆಪಿಯ ಭರ್ಜರಿ ಗೆಲುವಿನ ಹಿನ್ನೆಲೆಯಲ್ಲಿ ಅದನ್ನು ಆಫ್ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next