Advertisement

ಗುಜರಾತ್‌ ಬಿಲ್ಲವ ಸಂಘ: ನಾರಾಯಣಗುರುಗಳ ಜಯಂತ್ಯುತ್ಸವ

01:14 PM Sep 10, 2021 | Team Udayavani |

ಬರೋಡಾ: ಗುಜರಾತ್‌ ಬಿಲ್ಲವ ಸಂಘದ ವತಿಯಿಂದ ಬರೋಡಾದ ಅಲ್ಕಾಪು ರಾದ ಸಂಘದ ಶ್ರೀ ಬೈದ್ಯಶ್ರೀ ಸಾಂಸ್ಕೃತಿಕ ಸಭಾಭವನದಲ್ಲಿ ಬ್ರಹ್ಮಶ್ರೀ ನಾರಾಯಣಗು ರುಗಳ 167ನೇ ಜಯಂತಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

Advertisement

ಭಜನೆ, ಸಂಕೀರ್ತನೆ, ಮಾತೃ ವಂದನೆ ಮತ್ತು ಧಾರ್ಮಿಕ ಕಾರ್ಯಕ್ರಮ ನೆರವೇರಿತು. ಗಾಯತ್ರಿ ಪರಿವಾರ ಬರೋಡದ ಸದಸ್ಯರ ಪಾಲ್ಗೊಳ್ಳುವಿಕೆಯಲ್ಲಿ ಬೆಳಗ್ಗೆ ಗುರು ಪಾದುಕಾ ಪೂಜೆಯಿಂದ ಕಾರ್ಯಕ್ರಮ ಪ್ರಾರಂಭಗೊಂಡಿತು. ಇದೇ ಸಂದರ್ಭದಲ್ಲಿ ನಡೆದ ಮಾತೃ ವಂದನೆ ಕಾರ್ಯಕ್ರಮದಲ್ಲಿ ಕಿರಿಯರೆಲ್ಲರು ತಮ್ಮ ಮಾತಾಪಿತರ ಪಾದಪೂಜೆ ನಡೆಸಿ ಆಶೀರ್ವಾದ ಪಡೆದುಕೊಂಡರು. ಸಂಘದ ಗೌರವಾಧ್ಯಕ್ಷ ದಯಾನಂದ ಬೊಂಟ್ರ ಬೆಳ್ಮಣ್ಣು ಬರೋಡ ಇವರ ಮುಂದಾಳತ್ವ ಹಾಗೂ ಮಾರ್ಗದರ್ಶನದೊಂದಿಗೆ ಜಿಬಿಎಸ್‌ ಅಧ್ಯಕ್ಷ ವಿಶ್ವನಾಥ್‌ ಜಿ. ಪೂಜಾರಿ ಬಾಡೋìಲಿ ಸೂರತ್‌ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

ಮಾಜಿ ಅಧ್ಯಕ್ಷ ಮೋಹನ್‌ ಸಿ. ಪೂಜಾರಿ ಅಹ್ಮದಾಬಾದ್‌, ನಿಕಟಪೂರ್ವ ಅಧ್ಯಕ್ಷ ಮನೋಜ್‌ ಸಿ. ಪೂಜಾರಿ ಸೂರತ್‌, ಉಪಾಧ್ಯಕ್ಷ ವಾಸು ಪೂಜಾರಿ ಬರೋಡ, ಹರೀಶ್‌ ಪೂಜಾರಿ, ವಾಸು ಪೂಜಾರಿ, ವಿ. ಡಿ. ಅಮೀನ್‌, ಸದಾಶಿವ ಪೂಜಾರಿ ವಾಪಿ, ಶಿಕ್ಷಣ ಸಮಿತಿಯ ಮುಖ್ಯಸ್ಥ ಲಕ್ಷ್ಮಣ್‌ ಪೂಜಾರಿ ಬರೋಡ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ:ರೈಲ್ವೇ ನಿಲ್ದಾಣದಲ್ಲಿ ಮೀನುಗಳ ಮಸಾಜ್‌ : ಪ್ರಯಾಣಿಕರ ಪಾದಗಳಿಗೆ ಕಚಗುಳಿ!

ದಯಾನಂದ ಬೋಂಟ್ರಾ ಮಾತನಾಡಿ, ನಾವೆಲ್ಲರು ಸ್ವಾಭಿಮಾನದ ಬದುಕಿನೊಂದಿಗೆ ಸ್ವಾವಲಂಬಿಗಳು ಆಗಬೇಕು. ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ಆಧ್ಯಾತ್ಮಿಕ ಚಿಂತನೆ ಅಳವಡಿಸಿಕೊಳ್ಳುವುದು ಅಗತ್ಯ ಎಂದರು. ಮೋಹನ್‌ ಸಿ. ಪೂಜಾರಿ ಅಹ್ಮದಾಬಾದ್‌ ಅವರು, ಮಾತೃ ವಂದನೆ ಬಗ್ಗೆ ಪ್ರಶಂಸಿಸಿ, ಗುರುಗಳ ಆದರ್ಶಗಳನ್ನು ಪಾಲಿಸಿಕೊಂಡು ಬರುವಂತೆ ಕರೆ ನೀಡಿದರು.

Advertisement

2020-2021ನೇ ಶೈಕ್ಷಣಿಕ ಸಾಲಿನ ವಿವಿಧ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಅಭಿನಂದಿಸಲಾಯಿತು. ವಿಶ್ವನಾಥ್‌ ಜಿ. ಪೂಜಾರಿ ಸ್ವಾಗತಿಸಿದರು. ವಿದ್ಯಾರ್ಥಿವೇತನದ ಬಗ್ಗೆ ಲಕ್ಷ್ಮಣ್‌ ಪೂಜಾರಿ ವಿವರ ನೀಡಿದರು. ರೇವತಿ ಪೂಜಾರಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಕಾರ್ಯಕ್ರಮಕ್ಕೆ ನೆರವು ನೀಡಿದ ಸರ್ವರನ್ನು ಜತೆ ಕೋಶಾಧಿಕಾರಿ ರವಿ ಸಾಲ್ಯಾನ್‌ ಅಭಿನಂದಿಸಿದರು. ಪ್ರಧಾನ ಕಾರ್ಯದರ್ಶಿ ವಾಸು ವಿ. ಸುವರ್ಣ ವಂದಿಸಿದರು. ಕಾರ್ಯಕ್ರಮದಲ್ಲಿ ಗುಜರಾತ್‌ ಬಿಲ್ಲವ ಸಂಘದ ವಾಪಿ, ಅಂಕಲೇಶ್ವರ್‌, ಸೂರತ್‌, ಬರೋಡ ಹಾಗೂ ಅಹ್ಮದಾಬಾದ್‌ ಶಾಖೆಗಳ ಬಹುತೇಕ ಸದಸ್ಯರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಮಹಾ ಪ್ರಸಾದ ಅನ್ನಸಂತರ್ಪಣೆ ಜರಗಿತು.

Advertisement

Udayavani is now on Telegram. Click here to join our channel and stay updated with the latest news.

Next