Advertisement

ಸಂಸದರೊಂದಿಗೆ ವೇದಿಕೆಯಲ್ಲಿ ಬಿಲ್ಕಿಸ್‌ ಪ್ರಕರಣದ ಅಪರಾಧಿ!

08:12 PM Mar 27, 2023 | Team Udayavani |

ದಾಹೋದ್‌: ಗುಜರಾತ್‌ನ ದಾಹೋದ್‌ ಜಿಲ್ಲೆಯ ಲಿಮ್‌ಖೇಡಾದಲ್ಲಿ ಬಿಜೆಪಿ ಸಂಸದ ಜಸ್ವಂತ್‌ ಭಾಭೋರ್‌ ಮತ್ತವರ ಸಹೋದರ, ಶಾಸಕ ಶೈಲೇಶ್‌ ಭಾಭೋರ್‌ ಭಾಗವಹಿಸಿದ್ದ ಸರ್ಕಾರಿ ಕಾರ್ಯಕ್ರಮದ ವೇದಿಕೆಯಲ್ಲಿ ಬಿಲ್ಕಿಸ್‌ ಬಾನೊ ಪ್ರಕರಣದ ಅಪರಾಧಿಗಳ ಪೈಕಿ ಒಬ್ಬನಾಗಿರುವ ಶೈಲೇಶ್‌ ಭಟ್‌ ಕಾಣಿಸಿಕೊಂಡಿರುವುದು ಟೀಕೆಗೆ ಗುರಿಯಾಗಿದೆ.

Advertisement

ಶನಿವಾರ ಆಯೋಜಿಸಿದ್ದ ಸರ್ಕಾರಿ ಕಾರ್ಯಕ್ರಮದ ಚಿತ್ರಗಳನ್ನು ಶೈಲೇಶ್‌ ಭಾಭೋರ್‌ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ, ಇದರಲ್ಲಿ ಶೈಲೇಶ್‌ ಭಟ್‌ ಕೂಡ ಇದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಶೈಲೇಶ್‌ ಭಟ್‌, ಧಾರ್ಮಿಕ ಪೂಜಾ ಆಚರಣೆಯಲ್ಲಿ ಭಾಗವಹಿಸಲು ಅಲ್ಲಿಗೆ ಹೋಗಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಕಳೆದ ವರ್ಷ ಜೈಲಿನಿಂದ ಶೈಲೇಶ್‌ ಭಟ್‌ ಬಿಡುಗಡೆಯಾಗಿದ್ದರು.

ಕೇಂದ್ರ, ಗುಜರಾತ್‌ ಸರ್ಕಾರಕ್ಕೆ ನೋಟಿಸ್‌: ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 11 ಮಂದಿ ಅಪರಾಧಿಗಳಿಗೆ ಶಿಕ್ಷೆ ವಿನಾಯ್ತಿ ನೀಡಿರುವುದರ ವಿರುದ್ಧ ಸಂತ್ರಸ್ತೆ ಬಿಲ್ಕಿಸ್‌ ಬಾನೊ ಸಲ್ಲಿಸಿರುವ ಅರ್ಜಿ ಸಂಬಂಧ ಕೇಂದ್ರ ಮತ್ತು ಗುಜರಾತ್‌ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್‌ ನೀಡಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಕೆ.ಎಂ.ಜೋಸೆಫ್ ಮತ್ತು ನ್ಯಾ. ಬಿ.ವಿ.ನಾಗರತ್ನ ಅವರನ್ನೊಳಗೊಂಡ ನ್ಯಾಯಪೀಠ, ಮುಂದಿನ ವಿಚಾರಣೆಯನ್ನು ಏ.18ಕ್ಕೆ ಮುಂದೂಡಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next